ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?

Actress Rekha: ರೇಖಾ ಕಳೆದೊಂದು ದಶಕದಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ರೇಖಾ ತನ್ನ ದೈನಂದಿನ ಖರ್ಚುಗಳನ್ನು ಹೇಗೆ ಪೂರೈಸುತ್ತಾರೆ.. ಅವರ ಆದಾಯದ ಮೂಲ ಏನು ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.

Written by - Savita M B | Last Updated : Jun 26, 2024, 02:50 PM IST
  • ಬಾಲಿವುಡ್‌ನ ಸುಂದರ ನಟಿ ರೇಖಾ ತಮ್ಮದೇ ಆದ ಅದ್ಭುತ ನಟನೆಯಿಂದ ಚಿತ್ರರಂಗದಲ್ಲಿ ಸ್ಥಾನ ಗಳಿಸಿದ್ದಾರೆ
  • ತೆಲುಗು, ತಮಿಳು ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ.
ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು? title=

Rekha luxurious life: ಬಾಲಿವುಡ್‌ನ ಸುಂದರ ನಟಿ ರೇಖಾ ತಮ್ಮದೇ ಆದ ಅದ್ಭುತ ನಟನೆಯಿಂದ ಚಿತ್ರರಂಗದಲ್ಲಿ ಸ್ಥಾನ ಗಳಿಸಿದ್ದಾರೆ. ಕಾರಣಾಂತರಗಳಿಂದ ಆಕಸ್ಮಿಕವಾಗಿ ಚಿತ್ರರಂಗ ಪ್ರವೇಶಿಸಿದ ನಟಿ ರೇಖಾ, ತಮ್ಮ ನಟನೆಯ ಬಲದಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡರು.. ಇವರು ತೆಲುಗು, ತಮಿಳು ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ.

ರೇಖಾ ಕಳೆದ 10 ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು.  ಆದರೂ ನಟಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.. ಹೀಗಾಗಿ ಆಕೆಯ ಆದಾಯದ ಮೂಲದ ಬಗ್ಗೆ ತಿಳಿದುಕೊಳ್ಳಲು ಅನೇಕ ಜನರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ..

ಇದನ್ನೂ ಓದಿ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ದೊಡ್ಡಬಳ್ಳಾಪುರದ ಕುವರಿ..!!

ರೇಖಾ ಅವರು ಮುಂಬೈನಲ್ಲಿ ಕೆಲವು ಆಸ್ತಿಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಕೆಲವು ಸ್ಥಿರಾಸ್ತಿಗಳನ್ನು ಗುತ್ತಿಗೆ ಒಪ್ಪಂದದ ಮೇಲೆ ನೀಡಲಾಗಿದೆ. ಅವರಿಗೆ ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ.

ರೇಖಾ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪಕ್ಕದಲ್ಲಿ ಶಾರುಖ್ ಖಾನ್ ಅವರ 'ಮನ್ನತ್' ಬಂಗಲೆ ಮತ್ತು ಇನ್ನೊಂದು ಬದಿಯಲ್ಲಿ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಇದೆ. ರೇಖಾ ಅವರ ಬಂಗಲೆ ಸುಮಾರು 100 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಅದಕ್ಕೆ ‘ಬಸೇರಾ’ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ-ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ಟಿವಿ ಆಂಕರ್..‌ ಕಾರಣ ಏನು?

ನಟಿ ರೇಖಾ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ರೇಖಾ ಭರ್ಜರಿಯಾಗಿ ಗಳಿಸುತ್ತಾಳೆ. ಅಲ್ಲದೇ ನಟಿ ಆಗ್ಗಾಗೆ ಕೆಲವು ಟಿವಿ ಧಾರಾವಾಹಿಗಳಿಗೆ ಪ್ರಮೋಷನ್ ಮತ್ತು ಜಾಹೀರಾತುಗಳನ್ನು ನೀಡುತ್ತಾರೆ.. ಅದಕ್ಕಾಗಿ ಭಾರೀ ಸಂಭಾವನೆಯನ್ನು ಪಡೆಯುತ್ತಾರೆ.. 

ವರದಿ ಪ್ರಕಾರ, ರೇಖಾ ಅವರು ಬ್ಯಾಂಕ್‌ನಲ್ಲಿ ಕೆಲವು ನಿಶ್ಚಿತ ಠೇವಣಿಗಳನ್ನು ಹೊಂದಿದ್ದಾರೆ. ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಅನಗತ್ಯವಾಗಿ ಖರ್ಚು ಮಾಡಲಿಲ್ಲ. ಬದಲಾಗಿ ಹಣವನ್ನು ಉಳಿಸಿ.. ಗಳಿಕೆಯ ಹೆಚ್ಚಿನ ಭಾಗವನ್ನು ಬ್ಯಾಂಕ್ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದಾರೆ.. ಅಲ್ಲದೇ ರೇಖಾ ಯಾವತ್ತೂ ಇತ್ತೀಚಿನ ವಿನ್ಯಾಸದ ಬಟ್ಟೆಗಳನ್ನು ಧರಿಸುವುದಿಲ್ಲ ಅಥವಾ ಬಟ್ಟೆಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುವುದಿಲ್ಲ. ವಾಸ್ತವವಾಗಿ ಇವರ ಹತ್ತಿರ ವಿವಿಧ ರೇಷ್ಮೆ ಸೀರೆಗಳಿವೆ. ಆದರೆ ನಟಿ ಇವುಗಳಲ್ಲಿ ಹೆಚ್ಚು ಸೀರೆಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ.. ಅಲ್ಲದೇ ಅವುಗಳ ಬೆಲೆ ಲಕ್ಷಗಳಲ್ಲಿದೆ. ರೇಖಾ ಅವರು ರಾಜ್ಯಸಭಾ ಸಂಸದರಾಗಿದ್ದರು. ಸದ್ಯ ಮಾಜಿ ಸಂಸದರಾಗಿ ಸಂಬಳ, ಭತ್ಯೆಗಳನ್ನು ಪಡೆಯುತ್ತಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News