Darshan case : ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್..!  Instagram ಗೆ ಪೋಲಿಸ್‌ ಪತ್ರ 

Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಮತ್ತಷ್ಟು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಜೈಲು ಸೇರಿರುವ ನಟ ದರ್ಶನ್‌ ಗೆ ಒಂದರ ಮೆಲೊಂದು ಸಂಕಷ್ಟ ಎದುರಾಗಿದ್ದು, ಗನ್ ವಶಪಡಿಸಿಕೊಳ್ಳುವಂತೆ ಕಮಿಷನರ್ ಸೂಚಿಸಿದ್ದಾರೆ. ಪ್ರಕರಣಲ್ಲಿ ಸೀಜ್ ಮಾಡಿರೋ ಹಣದ ಬಗ್ಗೆ ಐಟಿಗೆ ಪೋಲಿಸರು ಪತ್ರ ಬರೆದಿದ್ದಾರೆ.

Written by - Krishna N K | Last Updated : Jun 26, 2024, 04:37 PM IST
    • ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕು
    • ಆರೋಪಿಗಳು ಓಡಾಡಿರುವ ಸ್ಥಳದ ಸಿಸಿಟಿವಿ ಜಾಲಾಡಿದ ಪೊಲೀಸರು
    • 70 ಲಕ್ಷ ಹಣದ ಬಗ್ಗೆ ತನಿಖೆ ನಡೆಸಲು ಐಟಿಗೆ ಪೊಲೀಸರಿಂದ ಪತ್ರ
Darshan case : ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್..!  Instagram ಗೆ ಪೋಲಿಸ್‌ ಪತ್ರ  title=
Pavtithra Gowda

Renukaswamy murder case updates : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ತನಿಖೆ ಚುರುಕುಗೊಂಡಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಮೂರು ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಕೆಗೆ ಕಾಮಾಕ್ಷಿಪಾಳ್ಯ ಪೊಲೀಸ್ರು ಮುಂದಾಗಿದ್ದಾರೆ. ಹೀಗಾಗಿ ಒಂದೆರಡು ಟೀಂ ಸಾಕ್ಷ್ಯಾಧಾರಗಳತ್ತ ತನಿಖೆ ನಡೆಸಿದ್ರೆ, ಮತ್ತೆರಡು ಟೀಂಗಳಿಂದ ಪೇಪರ್ ವರ್ಕ್ ನಡೆಸುತ್ತಿದೆ. 

ಈ ಮಧ್ಯೆ ಟೆಕ್ನಿಕಲ್ ಎವಿಡೆನ್ಸ್ ಗಳನ್ನ ಸಂಗ್ರಹಕ್ಕೆ ಅಧಿಕಾರಿಗಲಕು ಹೆಚ್ಚು ಒತ್ತು ನೀಡಿದ್ದು, ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಹದಿನೇಳು ಮಂದಿ ಮೊಬೈಲ್ ಗಳ ರಿಟ್ರೀವ್ ಪ್ರಕ್ರಿಯೆ ಶುರುವಾಗಿದೆ. ದರ್ಶನ್, ಪವಿತ್ರಾ,ಪವನ್ ಮತ್ತು ವಿನಯ್ ಮೊಬೈಲ್ ರಿಟ್ರೀವ್ ಮಾಡಿ ಬೇಗ ಕೊಡುವಂತೆ ಅಧಿಕಾರಿಗಳು ಟೆಕ್ನಿಕಲ್ ಟೀಮ್ ಗೆ  ಮನವಿ ಮಾಡಿದ್ದಾರೆ. ಇನ್ನೂ ಇದೇ ಕೊಲೆ ಪ್ರಕರಣದಲ್ಲಿ ಬರೋಬ್ಬರಿ 62 ಸಿಸಿ ಕ್ಯಾಮೆರಾ ದೃಶ್ಯ ಸಂಗ್ರಹಿಸಲಾಗಿದೆ. ಚಿತ್ರದುರ್ಗ ಟು ಪಟ್ಟಣಗೆರೆ ಶೆಡ್ ಗೆ ಬಂದಿದ್ದ ಮಾರ್ಗದ ಸಿಸಿಟಿವಿ , ಪಟ್ಟಣಗೆರೆ ಶೆಡ್ ಟು ಸುಮ್ಮನಹಳ್ಳಿ ಮೋರಿವರೆಗೂ ಆರೋಪಿಗಳ ಕಾರ್ ಮೂಮೆಂಟ್ ಸಿಸಿಟಿವಿ ಸಂಗ್ರಹಿಸಲಾಗಿದೆ.

ಇದನ್ನೂ ಓದಿ:ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?

ಇನ್ನೂ ದರ್ಶನ್  ಹಾಗೂ  ಪ್ರದೋಷ್‌ ಬಳಿ ಪರವಾನಿಗೆ ಇರೋ ಯುಎಸ್ ಮೇಡ್ ನ ಎರಡು ಗನ್ ಇವೆಯಂತೆ. ಹಾಗಾದ್ರೆ ಯಾವ ಉದ್ದೇಶಕ್ಕಾಗಿ ಗನ್‌ ಇಟ್ಕೊಂಡಿದ್ರು ಅನ್ನೋದೆ ಇಂಟ್ರಸ್ಟಿಂಗ್, ಕೊಲೆ ಪ್ರಕರಣದಲ್ಲಿ  ಜೈಲು ಸೇರಿರುವ ನಟ ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್‌ಗಳು ಹಾಗೂ ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್‌ ಇವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಬೆಂಗಳೂರು ನಗರಾದ್ಯಂತ 7830 ಗನ್ ಲೈಸೆನ್ಸ ಪರವಾನಗಿದಾರರಿದ್ದಾರೆ. 

ಈ ಪೈಕಿ ದರ್ಶನ್ ಮತ್ತು ಪ್ರದೋಷ್ ಸೇರಿ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. ಉಳಿದ 7553 ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಠೇವಣಿ ಇರಿಸಿಕೊಂಡಿದ್ದರು. ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದ ಪೊಲೀಸ್ ‌ಕಮೀಷನರ್ ಬಿ ದಯಾನಂದ ಇಬ್ಬರಿಗೂ ವಿನಾಯಿತಿ ನೀಡಿದ್ರು.

ಇದನ್ನೂ ಓದಿ:ರಾಜಮೌಳಿ ದಂಪತಿಗೆ ಮತ್ತೊಂದು ಅಪರೂಪದ ಗೌರವ..! ಏನದು..?

ಕಳೆದ ಲೋಕಸಭಾ ಚುನಾವಣೆ ‌ವೇಳೆಯಲ್ಲಿ ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆ ಅಧಿಕಾರಿಗಳು, ಬ್ಯಾಕ್ ಏಜೆನ್ಸಿಗಳು,  ಶೂಟಿಂಗ್ ಕ್ರೀಡಾಪಟುಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಬಹುದು. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಶಕ್ಕೆ ಪಡೆಯಬೇಕು. ಕೊಲೆ‌ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್, ಪ್ರದೋಶ್. ಬಳಿಯಿರುವ ಗನ್ ನ್ನ ಆರ್ ಆರ್ ನಗರ, ಹಾಗೂ ಗಿರಿನಗರ ಪೋಲಿಸರಿಗೆ ಕಮೀಷನರ್ ಆದೇಶಿಸಿದ್ದಾರೆ

ಇನ್ನೂ ಕೊಲೆ ಪ್ರಕರಣದಲ್ಲಿ 70 ಲಕ್ಷ ಹಣ ಸೀಜ್ ಮಾಡಿರೋ ಪೋಲಿಸರು ಈ ಬಗ್ಗೆ ಆದಾಯ ತೆರೆಗೆ ಇಲಾಖೆಗೆ ಪೋಲಿಸರು ‌ಪತ್ರ ಬರೆದು ಹಣದ ಮೂಲದ ಬಗ್ಗೆ ತನಿಖೆ ನಡೆಸಲು ಮನವಿ ಮಾಡಿದ್ದಾರೆ. ಕೊಲೆ ಆರೋಪಿಗಳಿಗೆ ದರ್ಶನ್ 30 ಲಕ್ಷ ಹಣ ನೀಡಿದ್ದು ಇದರ ಜೊತೆಗೆ ಮೋಹನ್ ರಾಜ್ ಎಂಬುವವರಿಂದ 40 ಲಕ್ಷ ಹಣ ಪಡೆದಿರುವ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ. ಇನ್ಟ್ಗ್ರಾಮ್‌ ನಲ್ಲಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿರೋದರಿಂದ ರಿಟ್ರಿವ್ ಮಾಡುವ ಸಲುವಾಗಿ ಕೂಡ ಪೋಲಿಸರು ಪತ್ರ ಬರೆದಿದ್ದಾರೆ. ಒಟ್ಟಿನಲ್ಲಿ ಒಂದು ಕೊಲೆ ಮಾಡಿ ಸಾಕ್ಷಿ ನಾಶಮಾಡಲು ಮುಂದಾಗಿದ್ದ ಆರೋಪಿಗಳಿಗೆ ಒಂದರ ಮೇಲೊಂದು ಸಂಕಷ್ಟ ಶುರುವಾಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News