Darshan Kranti box office collection : ಚಾಲೆಜಿಂಗ್‌ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿದೆ. ಈಗಾಲೇ ಸಿನಿಮಾ 100 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಕ್ರಾಂತಿ ಸಿನಿ ತಂಡ ಸಕ್ಸಸ್‌ ಸಂಭ್ರಮಿಸುವ ಮೂಲಕ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದಗಳನ್ನು ಹೇಳಿತು. ಅಲ್ಲದೆ, ಈ ವೇಳೆ ದರ್ಶನ್‌ ಅವರು ಮಾತನಾಡಿ ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳಿದರು. 


COMMERCIAL BREAK
SCROLL TO CONTINUE READING

ಇನ್ನು ದರ್ಶನ್‌ ಕ್ರಾಂತಿ ಸಿನಿಮಾ 100 ಕೋಟಿ ಗಳಿಕೆ ಮಾಡಿದೆ ಅಂತ ಸ್ವತಃ ಚಿತ್ರ ತಂಡ ಹೇಳಿಕೊಂಡಿದೆ. ಆದ್ರೆ ನೆಟ್ಟಿಗರು ಇದನ್ನು ಒಪ್ಪುತ್ತಿಲ್ಲ. ಅಲ್ಲದೆ, ಸುಳ್ಳು ಹೇಳುತ್ತಿದ್ದಾರೆ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದರ್ಶನ್ ಕ್ರಾಂತಿ ಸಿನಿಮಾದ ಸಕ್ಸಸ್ ಸಂಭ್ರಮಿಸುವ ಮೂಲಕ ಟ್ರೋಲ್‌ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.


ಬ್ಯಾಂಕಾಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ʼಪವರ್ ಸ್ಟಾರ್ ಪುನೀತ್ʼ ಅವರಿಗೆ ಗೌರವ...!


ಇನ್ನು ಸುದ್ದಿಗೋಷ್ಠಿ ವೇಳೆ ಮಾತನಾಡಿದ ದರ್ಶನ್‌, ಈ ಚಿತ್ರದ ಬಗ್ಗೆ ನೆಗೆಟಿವ್‌ ಪ್ರಚಾರ ಮಾಡಿದ್ದವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಅವರೇ ನನ್ನ ಸಿನಿಮಾಗೆ ಬಿಟ್ಟಿ ಪ್ರಚಾರ ಕೊಟ್ಟರು. ಕೆಟ್ಟದು ಮಾಡಲು ಹೋಗಿ ಒಳ್ಳೆಯದನ್ನು ಮಾಡಿದ್ರು. ಅವರಿಗೆ ಒಳ್ಳೆಯದಾಗಲಿ. ಇನ್ನು ಪ್ರತಿ ಒಬ್ಬ ನನ್ನ ಸೆಲೆಬ್ರೆಟಿಗೆ ಇಲ್ಲಿಂದಲೇ ಅವರ ಪಾದ ಮುಟ್ಟಿ ನಮಸ್ಕಾರ ಮಾಡ್ತೀನಿ ಅಂದ್ರು. ಅಲ್ಲದೆ, ಕೆಲವೊಂದಿಷ್ಟು ಯೂಟ್ಯೂಬ್‌ನವರು ಕೆಟ್ಟದಾಗಿ ಪ್ರಚಾರ ಮಾಡಿ ಒಳ್ಳೆಯದಾಗಿಯಾದ್ರೂ ಮಾಡ್ಲಿ. ಆದ್ರೆ ಅದು ಪ್ರಚಾರ ಅನ್ನೋದು ಮರಿಬೇಡಿ ಅಂತ ಹೇಳಿದರು.


ಅಲ್ಲದೆ, ಚಿತ್ರ ಸಕ್ಸಸ್‌ ಆಗಿಲ್ಲ ಎಂದವರಿಗೆ, ಸಿನಿಮಾ ಗೆದ್ದರೆ ಮಾತ್ರ ಇಲ್ಲಿಗೆ ಬಂದು ಸೆಲೆಬ್ರೇಷನ್‌ ಮಾಡ್ತಾರೆ.. ಇಲ್ಲಾ ಅಂದ್ರೆ, ದುಡ್ಡು ಖರ್ಚು ಮಾಡಿ, ರೂಮ್ ರೆಂಟು ಕೊಟ್ಟು, ಇಷ್ಟು ಜನ ಆರ್ಟಿಸ್ಟು ಕರೆಯಿಸಿ, ಸುಮ್ಸುಮ್ನೆ ಹೊಗಳಿಕೊಳ್ಳೋಕೆ ನಮಗೇನು ನಾಯಿ ಕಚ್ಚಿದೆಯಾ? ಜನರು ಉತ್ತಮವಾಗಿ ರಿವ್ಯೂ ಕೊಟ್ಟಿದ್ದಾರೆ. ಕುಟುಂಬ ಸಮೇತ ಬಂದು ಸಿನಿಮಾ ನೋಡಿ ಹೋಗುತ್ತಿದ್ದಾರೆ. ಆ ಎಲ್ಲಾ ಫ್ಯಾಮಿಲಿಗಳಿಗೂ ಥ್ಯಾಂಕ್ಸ್ ಅಂತ ದಚ್ಚು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.