ಬ್ಯಾಂಕಾಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ʼಪವರ್ ಸ್ಟಾರ್ ಪುನೀತ್ʼ ಅವರಿಗೆ ಗೌರವ...!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗರ ಪರಮಾತ್ಮನಾಗಿ 16 ತಿಂಗಳುಗಳು ಉರುಳಿವೆ. ಪ್ರತಿನಿತ್ಯ ಪವರ್ ಫ್ಯಾನ್ಸ್ ಗಳು ಮತ್ತು ಸಿನಿಮಾ ಮಂದಿ ಅಪ್ಪುನ ಆರಾಧಿಸಿಯೇ ಒಳ್ಳೆ ಕೆಲಸಕ್ಕೆ ಚಾಲನೆ ಕೊಡ್ತಾರೆ‌.‌ ಇದು ಕರುನಾಡಿನಲ್ಲಿ ಮಾತ್ರ ಚಾಲ್ತಿಯಲ್ಲಿಲ್ಲ ಸಾಗರದಾಚೆಯೂ ಪರಮಾತ್ಮನ ಪೂಜಿಸಿ, ಜೊತೆಗ ಸ್ಮರಿಸಿ ಕಾರ್ಯಕ್ರಮಗಳ ಆರಂಭಿಸ್ತಾರೆ. ಅದೇ ರೀತಿ ನಮ್ಮ ದೇಶದ ಪಕ್ಕದ ಊರು ಥೈಲ್ಯಾಂಡ್ ನಲ್ಲೂ ದೊಡ್ಮನೆ ರಾಜಕುಮಾರನಿಗೆ ಗೌರವ ಸಲ್ಲಿಸಿದ್ದಾರೆ.

Written by - YASHODHA POOJARI | Edited by - Krishna N K | Last Updated : Feb 3, 2023, 02:22 PM IST
  • ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗರ ಪರಮಾತ್ಮನಾಗಿ 16 ತಿಂಗಳುಗಳು ಉರುಳಿವೆ.
  • ಪ್ರತಿನಿತ್ಯ ಪವರ್ ಫ್ಯಾನ್ಸ್ ಗಳು ಮತ್ತು ಸಿನಿಮಾ ಮಂದಿ ಅಪ್ಪುನ ಆರಾಧಿಸಿಯೇ ಒಳ್ಳೆ ಕೆಲಸಕ್ಕೆ ಚಾಲನೆ ಕೊಡ್ತಾರೆ‌.‌
  • ನಮ್ಮ ದೇಶದ ಪಕ್ಕದ ಊರು ಥೈಲ್ಯಾಂಡ್ ನಲ್ಲೂ ದೊಡ್ಮನೆ ರಾಜಕುಮಾರನಿಗೆ ಗೌರವ ಸಲ್ಲಿಸಿದ್ದಾರೆ.
ಬ್ಯಾಂಕಾಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ʼಪವರ್ ಸ್ಟಾರ್ ಪುನೀತ್ʼ ಅವರಿಗೆ ಗೌರವ...! title=

Puneeth Rajkumar : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗರ ಪರಮಾತ್ಮನಾಗಿ 16 ತಿಂಗಳುಗಳು ಉರುಳಿವೆ. ಪ್ರತಿನಿತ್ಯ ಪವರ್ ಫ್ಯಾನ್ಸ್ ಗಳು ಮತ್ತು ಸಿನಿಮಾ ಮಂದಿ ಅಪ್ಪುನ ಆರಾಧಿಸಿಯೇ ಒಳ್ಳೆ ಕೆಲಸಕ್ಕೆ ಚಾಲನೆ ಕೊಡ್ತಾರೆ‌.‌ ಇದು ಕರುನಾಡಿನಲ್ಲಿ ಮಾತ್ರ ಚಾಲ್ತಿಯಲ್ಲಿಲ್ಲ ಸಾಗರದಾಚೆಯೂ ಪರಮಾತ್ಮನ ಪೂಜಿಸಿ, ಜೊತೆಗ ಸ್ಮರಿಸಿ ಕಾರ್ಯಕ್ರಮಗಳ ಆರಂಭಿಸ್ತಾರೆ. ಅದೇ ರೀತಿ ನಮ್ಮ ದೇಶದ ಪಕ್ಕದ ಊರು ಥೈಲ್ಯಾಂಡ್ ನಲ್ಲೂ ದೊಡ್ಮನೆ ರಾಜಕುಮಾರನಿಗೆ ಗೌರವ ಸಲ್ಲಿಸಿದ್ದಾರೆ.

ಕರ್ನಾಟಕ ರತ್ನ ಅಭಿಮಾನಿಗಳ ಪಾಲಿನ ಅರಸ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಉಸಿರು ನಿಂತಿದ್ರೂ ಅವರ ಹೆಸರು ಮಾತ್ರ ಕನ್ನಡಿಗರ ಹೃದಯ ಸಿಂಹಾಸನ ದಲ್ಲಿ ಹಸಿರಾಗಿದೆ‌‌‌. ಅಷ್ಟೇ ಅಲ್ಲ ಪವರ್ ಸ್ಟಾರ್ ಅಂದ್ರೆ ಅಪ್ಪು ಬಾಲಕನಾಗಿದ್ದಾಗ ಅಭಿನಯಿಸಿದ್ದ ಭಕ್ತಪ್ರಹ್ಲಾದ ಚಿತ್ರದ ನಿನ್ನ ವಿಷ್ಟು ಎಲ್ಲಾ ಕಡೆ ಇರುವನೇ. ಆ ಕಂಬದಲ್ಲಿ ಈ ಕಂಬದಲ್ಲಿ ಅನ್ನೋ ಡೈಲಾಗ್ ನೆನಪಾಗುತ್ತೆ. ಯಾಕಂದ್ರೆ ಸದ್ಯ ಅಪ್ಪು ಇಲ್ಲದ ಜಾಗವೇ ಇಲ್ಲ ಅನ್ನೋ ತರ ಆಗಿದೆ‌‌‌‌‌. ಸಿನಿಮಾದಲ್ಲಿ‌. ಟ್ರೈಲರ್ ನಲ್ಲಿ ಹಾಡಿನಲ್ಲಿ ಅಷ್ಟೇ ಯಾಕೆ ಹಬ್ಬ ಹರಿದಿನಗಳಲ್ಲಿ ಎಲ್ಲಾ ಕಡೆ ಅಪ್ಪು ಪೋಟೋ ರಾರಾಜಿಸುತ್ತೆ.

ಇದನ್ನೂ ಓದಿ: ಟಾಲಿವುಡ್ ನಟ ಬಾಲಯ್ಯ ವಯಸ್ಸು 62 ವಯಸ್ಸು,ಬಾಲಿವುಡ್ ನಟ ಶಾರುಖ್ ಖಾನ್ ಗೆ 57 ವರ್ಷ

ಇದಲ್ಲದೆ ಸಿನಿಮಾಗೆ ಸಂಬಂಧಿಸಿದಸರ್ಕಾರಿ ಕಾರ್ಯಕ್ರಮಗಳಲ್ಲೂ ಅಪ್ಪುಗೆ ಪೂಜಿಸಿಯೇ ಆ ಕಾರ್ಯಕ್ರಮಗಳಿಗೆ ಚಾಲನೆ ಕೊಡ್ತಾರೆ. ಇದು ಒಂಥರಾ ಈಗ ಕನ್ನಡಿಗರಲ್ಲಿ ರೂಢಿಯಾಗಿದೆ‌. ವಿಶೇಷ ಅಂದ್ರೆ ಈಗ ಕರುನಾಡಿಲ್ಲಿ ಅಷ್ಟೇ ಅಲ್ಲ  ನಮ್ಮ ನಾಡು ನುಡಿ ಗಡಿಯಾಚೆಗೂ ಪರಮಾತ್ಮನ ದರ್ಶನ ಕಾಮನ್ ಆಗಿದೆ‌. ಜೊತೆಗೆ ಪವರ್ ಸ್ಟಾರ್ ಗೆ ಗೌರವ ಕೊಡೊದು ಶುರುವಾಗಿದ್ದು, ಗಡಿಯಾಚೆಗಿನ ದೇಶದಲ್ಲಿ ಕರ್ನಾಟಕ ರತ್ನನಿಗೆ ಸಿಕ್ಕ ಗೌರವಕ್ಕೆ ದೊಡ್ಮನೆ ಅಭಿಮಾನಿ ದೇವರುಗಳು ನೋವಲ್ಲೂ ನಗುವನ್ನು ಹುಡಿಕಿ ಕೊಂಡಿದ್ದಾರೆ.

ಅಷ್ಟಕ್ಕೂ ಈಗ ದೊಡ್ಮನೆ ಅಭಿಮಾನಿಗಳ ಆನಂದ ಭಾಷ್ಪಕ್ಕೆ ಕಾರಣವಾಗಿ‌. ಕನ್ನಡಿಗರ ರಾಜಕುಮಾರನಿಗೆ ಗೌರವ ಕೊಟ್ಟು ಪುರಸ್ಕಸಿದ ದೇಶವಾದ್ರು ಯಾವ್ದು. ಅದ್ಯಾವ ವೇದಿಕೆಯಲ್ಲಿ ಅಪ್ಪುನ ಆರಾಧಿಸಲಾಯ್ತು ಅಂತ ಯಾರಾದ್ರು ಕೇಳಿದ್ರೆ ಅದಕ್ಕೆ ಉತ್ತರ ಥೈಲ್ಯಾಂಡ್ ಅನ್ನಬಹುದು. ಹೌದು ಇತ್ತೀಚಿಗೆ ದ್ವೀಪ ದೇಶ ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ದೂರಿಯಾಗಿ ನೇರವೇರಿದೆ. ಬ್ಯಾಂಕಾಕ್ ನಲ್ಲಿ ನಡೆದ ಮೂರನೇ ಈ ಸಿನಿಮಾ ಹಬ್ಬದಲ್ಲಿ ಕನ್ನಡಿಗರ ಅರಾಧ್ಯದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪೋಟೋ ಹಾಕುವ ಮೂಲಕ ದೊಡ್ಡ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ: Sudeep Politics Entry: ಡಿಕೆಶಿ ಜೊತೆ ಸುದೀಪ್‌.! ʻಕೈʼ ಹಿಡಿತಾರಾ ಅಭಿನಯ ಚಕ್ರವರ್ತಿ?

ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ನಲ್ಲಿ ಜರ್ಮನ್, ಥಾಯ್, ಇಟಲಿ, ಉಕ್ರೇನ್ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶದ ಸಿನಿಮಾ ಸಾಧಕರು ಭಾಗಿಯಾಗಿದ್ರು. ಅಲ್ಲದೇ ಈ ಫೆಸ್ಪಿವಲ್ ನಲ್ಲಿ ಥಾಯ್ಲೆಂಡ್ ಮಾಜಿ ಪ್ರಧಾನಿ  ಕೂಡ ಭಾಗಿಯಾಗಿದ್ರು..ಇಂತಹ ವೇದಿಕೆಯಲ್ಲಿ ಹಾಕಿದ್ದ ಪ್ಲೆಕ್ಸ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪೋಟೋ ಹಾಕುವ ಮೂಲಕ ಬ್ಯಾಂಕಾಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪವರ್ ಸ್ಟಾರ್ ಅವರಿಗೆ ಗೌರವ ಸಲ್ಲಿಸಲಾಗಿದೆ. ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪ್ಪುಗೆ ಸಿಕ್ಕಿರೋ ಈ ಗೌರವ ಕನ್ನಡಿಗರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News