Deepika Padukone mercedes maybach : ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಹೊಸ ಅತ್ಯಂತ ದುಬಾರಿ ಕಾರು ಒಂದನ್ನು ಖರೀದಿಸಿದ್ದಾರೆ. ವಿಶೇಷವೆಂದರೆ ಇದು ಭಾರತದಲ್ಲಿ ಮರ್ಸಿಡಿಸ್‌ನ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಸ್ವತಃ ರಣವೀರ್ ಸಿಂಗ್ ಈಗಾಗಲೇ ಈ ಕಾರಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದು, ಇದೀಗ ದೀಪಿಕಾ ಕೂಡ ಅದೇ ಮಾದರಿಯ ಮತ್ತೊಂದು ಕಾರನ್ನು ಖರೀದಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ದೀಪಿಕಾ Mercedes-Maybach GLS600 4Matic SUV ಅನ್ನು ಖರೀದಿಸಿದ್ದಾರೆ, ಇದರ ಬೆಲೆ 2.8 ಕೋಟಿ ರೂಪಾಯಿ (ಎಕ್ಸ್ ಶೋ ರೂಂ). ಈ ಹಿಂದೆ, ರಣವೀರ್ ಸಿಂಗ್ ತಮ್ಮ 36ನೇ ಹುಟ್ಟುಹಬ್ಬದಂದು ಜೂನ್ 2021 ರಲ್ಲಿ ಇದೇ ರೀತಿಯ ಕಾರು ಒಂದನ್ನು ಖರೀದಿಸಿದ್ದರು. ವಿಶೇಷವೆಂದರೆ ಎರಡೂ ಕರುಗಳು ನೀಲಿ ಬಣ್ಣದ್ದಾಗಿದೆ.


ಇದನ್ನೂ ಓದಿ : ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ : ರಾಜಕೀಯ‌ಕ್ಕೆ ಬನ್ನಿ ಅಂದವರಿಗೆ ಚಂದು ಟಾಂಗ್‌


ಹೊಸ Mercedes SUV ದೀಪಿಕಾ ಪ್ರಕಾಶ್ ಪಡುಕೋಣೆ ಹೆಸರಿನಲ್ಲಿ ನೋಂದಣಿಯಾಗಿದೆ. ಇದನ್ನು ಸೆಪ್ಟೆಂಬರ್ 2, 2022 ರಂದು ಮುಂಬೈ RTO ನಲ್ಲಿ ನೋಂದಾಯಿಸಲಾಗಿದೆ. ಆದರೂ ಹಳೆಯ ವಾಹನ ರಣವೀರ್ ಹೆಸರಿನಲ್ಲಿ ನೋಂದಣಿಯಾಗಿಲ್ಲ. 


ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಸ್ಟೈಲ್ ಮತ್ತು ಐಷಾರಾಮಿ ವಿಷಯದಲ್ಲಿ ಇದು ಸಾಟಿಯಿಲ್ಲದ ಕರಗಿದೆ. ಲೆದರ್ ಅಪ್ಹೋಲ್ಸ್ಟರಿ, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಸನ್‌ರೂಫ್, ವೆಂಟಿಲೇಟೆಡ್ ಮಸಾಜ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿದೆ.


ಶಕ್ತಿಯುತ ಎಂಜಿನ್ 


ಎಂಜಿನ್ ಬಗ್ಗೆ ಹೇಳುವುದಾದರೆ, GLS600 4.0-ಲೀಟರ್ V8 ಎಂಜಿನ್‌ನೊಂದಿಗೆ 48V ಸೌಮ್ಯ ಹೈಬ್ರಿಡ್ ವ್ಯವಸ್ಥೆಯನ್ನು ಪಡೆಯುತ್ತದೆ. ಈ ಎಂಜಿನ್ 557 PS ಮತ್ತು 730 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಹೈಬ್ರಿಡ್ ಸಿಸ್ಟಮ್ 22 PS ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.


ಇದನ್ನೂ ಓದಿ : ಜೀ5 ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಧಮಾಕ: 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡ ಕಿಚ್ಚನ ಸಿನಿಮಾ


Mercedes-Maybach ಜೊತೆಗೆ, ರಣವೀರ್ ಸಿಂಗ್ ಕೂಡ Lamborghini Urus ಕಾರನ್ನು ಹೊಂದಿದ್ದಾರೆ. ರಣವೀರ್ ತಮ್ಮ ಲಂಬೋರ್ಗಿನಿಯೊಂದಿಗೆ ಮುಂಬೈನ ಬೀದಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದರೊಂದಿಗೆ, ಅವರ ಗ್ಯಾರೇಜ್‌ನಲ್ಲಿ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಆಡಿ ಕ್ಯೂ5, ಜಾಗ್ವಾರ್ ಎಕ್ಸ್‌ಜೆ ಎಲ್‌ನಂತಹ ಕಾರುಗಳನ್ನು ಸಹ ಹೊಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.