ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ : ರಾಜಕೀಯ‌ಕ್ಕೆ ಬನ್ನಿ ಅಂದವರಿಗೆ ಚಂದು ಟಾಂಗ್‌

ಕಾಫಿ ನಾಡು ಚಂದು ಅಂದ್ರೆ ಯಾರಿಗೆ ತಾನೆ ಗೋತ್ತಿಲ್ಲ ಹೇಳಿ. ತನ್ನದೇ ವಿಶಿಷ್ಠ ಶೈಲಿಯ ಹಾಡುಗಾರಿಕೆಯ ಮೂಲಕ ಕರುನಾಡಿನಲ್ಲಿ ಹೈಪ್‌ ಸೃಷಿಸಿದ ಭೂಪ ಈತ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ರಾಜಕೀಯ ಹೇಳಿಕೆಯ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Sep 4, 2022, 05:33 PM IST
  • ಸಖತ್‌ ವೈರಲ್‌ ಆಗುತ್ತಿದೆ ಕಾಫಿನಾಡು ಚಂದು ವಿಡಿಯೋ
  • ಬಿಟ್ಟಿ ಸಲಹೆ ನೀಡಿದ್ದವರಿಗೆ ತನ್ನದೇ ಮಾತಿನ ದಾಟಿಯಲ್ಲಿ ಉತ್ತರ ನೀಡಿ ಚಂದು
  • ನಾನು ಶಿವಣ್ಣ ಮತ್ತು ಪುನೀತಣ್ಣ ಅವರ ಅಭಿಮಾನಿ
ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ : ರಾಜಕೀಯ‌ಕ್ಕೆ ಬನ್ನಿ ಅಂದವರಿಗೆ ಚಂದು ಟಾಂಗ್‌ title=

ಬೆಂಗಳೂರು: ಕಾಫಿ ನಾಡು ಚಂದು ಅಂದ್ರೆ ಯಾರಿಗೆ ತಾನೆ ಗೋತ್ತಿಲ್ಲ ಹೇಳಿ. ತನ್ನದೇ ವಿಶಿಷ್ಠ ಶೈಲಿಯ ಹಾಡುಗಾರಿಕೆಯ ಮೂಲಕ ಕರುನಾಡಿನಲ್ಲಿ ಹೈಪ್‌ ಸೃಷಿಸಿದ ಭೂಪ ಈತ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ರಾಜಕೀಯ ಹೇಳಿಕೆಯ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ.

ಸ್ನೇಹಿತರ ಬರ್ತ್‌ಡೇಗೆ ಏನಾದರೂ ಗಿಫ್ಟ್‌ ಕೋಡ್ಬೇಕು ಅಂತ ಅಂಗಡಿ ಅಂಗಡಿ ಸುತ್ತುತ್ತಿದ್ದ ಕಾಲ ಮಗಿದು ಏನಾದ್ರೂ ಆಗ್ಲಿ ಚಿಕ್ಕಮಗಳೂರಿಗೆ ಹೋಗಿ ಕಾಫಿನಾಡು ಚಂದು ಭೇಟಿಯಾಗಿ ಒಂದು ವಿಡಿಯೋ ಮಾಡಿಸಿ ಗೆಳೆಯನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡೋಣ ಅಂತಿದಾರೆ ಎಲ್ಲರೂ. ಈ ನಡುವೆ ಕಾರ್ಯಕ್ರಮಗಳಿಗೂ ಚಂದುವನ್ನು ಆಹ್ವಾನಿಸಲಾಗುತ್ತಿದೆ. ಸದ್ಯ ಚಂದು ತನಗೆ ರಾಜಕೀಯಕ್ಕೆ ಸೇರಿ ಎಂದು ಬಿಟ್ಟಿ ಸಲಹೆ ನೀಡಿದ್ದವರಿಗೆ ತನ್ನದೇ ಮಾತಿನ ದಾಟಿಯಲ್ಲಿ ಉತ್ತರ ನೀಡಿದ್ದಾನೆ.

ಇದನ್ನೂ ಓದಿ: ಜೀ5 ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಧಮಾಕ: 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡ ಕಿಚ್ಚನ ಸಿನಿಮಾ

ಸಧ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ, ʼನನಗೆ ರಾಜಕೀಯಕ್ಕೆ ನಿಂತುಕೊಳ್ಳಲು ಕೆಲವು ಜನರು ಹೇಳಿದ್ರು, ಆದ್ರೆ ನನಗೆ ಅದ್ರಲ್ಲಿ ಇಂಟರೆಸ್ಟ್‌ ಇಲ್ಲ. ಯಾಕೆಂದರೆ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಇದಾವೆ. ಓಹೋ ಚಂದು ಕಾಂಗ್ರೆಸ್​ಗೆ ನಿಂತುಕೊಂಡ, ಬಿಜೆಪಿಗೆ ನಿಂತುಕೊಂಡ ಅಂತ ಜನರು ಹೇಳೋದು ಬೇಡ. ನಾನು ರಾಜಕೀಯ ಬಗ್ಗೆ ಮಾತನಾಡೋಕೆ ರಾಜಕಾರಣಿನೂ ಅಲ್ಲ ದೇವಸ್ಥಾನದ ಬಗ್ಗೆ ಪೂಜಾರಿಯೂ ಅಲ್ಲ, ನಾನು ಶಿವಣ್ಣ ಮತ್ತು ಪುನೀತಣ್ಣ ಅವರ ಅಭಿಮಾನಿʼ ಎಂದು ಹೇಳಿದ್ದಾನೆ.

ಶಿವಣ್ಣ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಪಕ್ಕಾ ಅಭಿಮಾನಿಯಾಗಿರುವ ಚಂದು ಇನ್​ಸ್ಟಾಗ್ರಾಮ್​ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೆ ಶಿವಣ್ಣ ಅವರನ್ನು ಭೇಟಿಯಾಗಬೇಕು ಎಂಬ ಮಹದಾಸೆಯನ್ನು ಜೀ ಕನ್ನಡ ಈಡೇರಿಸಿದೆ.  ಸದ್ಯ ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು... ಹಾಯ್‌ ನಾನು ಶಿವಣ್ಣ ಮತ್ತು ಪುನೀತಣ್ಣ ಅಭಿಮಾನಿ ಕರ್ನಾಟಕ ಜನತೆಗೆ ಕಾಫಿ ನಾಡು ಚಂದು ಮಾಡುವ ನಮಸ್ಕಾರ ಎಂಬ ಮಾತೇ ಕೇಳುತ್ತಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News