Deepika Padukone: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಕಲ್ಕಿ ಸಿನಿಮಾದ ಮೂಲಕ ದೊಡ್ಡ ಹಿಟ್ ಪಡೆದಿದ್ದಾರೆ. ಅಂದಹಾಗೆ ಈ ನಟಿ ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರನ್ನು ಮದುವೆಯಾಗಿರುವುದು ಗೊತ್ತೇ ಇದೆ. ಸದ್ಯ ದೀಪಿಕಾ ಗರ್ಭಿಣಿ. ಸೆಪ್ಟೆಂಬರ್‌ʼನಲ್ಲಿ ಈ ಸುಂದರಿ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದ ಪ್ರಚಾರದಲ್ಲಿ ದೀಪಿಕಾ ಭಾಗವಹಿಸಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ?


ಈ ನಡುವೆ ಇತ್ತೀಚೆಗಷ್ಟೇ ದೀಪಿಕಾ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ವಿಷಯವೆಂದರೆ..


'ದಿ ವೈಟ್ ಲೋಟಸ್' ಅಂತರಾಷ್ಟ್ರೀಯ ವೆಬ್ ಸರಣಿಯ ಮೂರನೇ ಸೀಸನ್‌ʼನಲ್ಲಿ ನಟಿಸಲು ದೀಪಿಕಾಗೆ ಆಫರ್ ಬಂದಿದೆ. ಆದರೆ ಗರ್ಭಿಣಿ ಎಂಬ ಕಾರಣಕ್ಕೆ ನಿರಾಕರಿಸಿದ್ದಾರಂತೆ. ಆದರೆ ಈ ಸೀಸನ್ ಆರಂಭವಾಗುವ ವೇಳೆಗೆ ದೀಪಿಕಾ ಡೆಲಿವರಿ ಡೇಟ್‌ ಮುಗಿದು ಹೋಗುತ್ತಿದ್ದರೂ, ಈ ಆಫರ್‌ ಅನ್ನು ರಿಜೆಕ್ಟ್‌ ಮಾಡಿದ್ದಾರಂತೆ. ಮಗುವಿಗಾಗಿ ದೀಪಿಕಾ ಈ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ದೀಪಿಕಾ ಯಾವುದೇ ಹೊಸ ಯೋಜನೆಗೆ ಸಹಿ ಹಾಕುತ್ತಿಲ್ಲ ಎಂಬ ವರದಿಗಳಿವೆ.


ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಮಾತುಗಳ ಪ್ರಕಾರ ದೀಪಿಕಾ ಯಾರ ಸಹಾಯವೂ ಇಲ್ಲದೇ ಮಗುವನ್ನು ನೋಡಿಕೊಳ್ಳಲು ಬಯಸಿದ್ದಾರಂತೆ. ಅಂದರೆ ದೀಪಿಕಾ ಇತರ ಸೆಲೆಬ್ರಿಟಿಗಳಂತೆ ತನ್ನ ಮಗುವನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸುತ್ತಿಲ್ಲ. ಅಷ್ಟೇ ಅಲ್ಲ, ತಾಯಿಯಾದ ನಂತರ ಪತಿ ರಣವೀರ್ ಸಿಂಗ್ ಜೊತೆಗೆ ದೀಪಿಕಾ ತಮ್ಮ ಮಗುವನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳಲು ಬಯಸಿದ್ದಾರೆ. 


ಇದನ್ನೂ ಓದಿ: ಇನ್ಮುಂದೆ ಬಿಗ್ ಬಾಸ್ ನಿರೂಪಕ ಈ ನಟ... ಪ್ರತಿ ಸೀಸನ್‌ ಹೋಸ್ಟ್‌ ಮಾಡಲು ಈತ ಪಡೆಯುವ ಸಂಭಾವನೆ ಎಷ್ಟು


ಸದ್ಯ ದೀಪಿಕಾ ಯಾವುದೇ ಸಿನಿಮಾ ಆಫರ್‌ ಒಪ್ಪಿಕೊಳ್ಳದಿರುವುದು ಅಭಿಮಾನಿಗಳಿಗೆ ನಿಜಕ್ಕೂ ಬ್ಯಾಡ್ ನ್ಯೂಸ್ ಎಂದು ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ