ಬೆಂಗಳೂರು: ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆಗಿರುವ ರಿಶಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಈಗ ತಮಿಳು,ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಕೂಡ ಪ್ರದರ್ಶನಕ್ಕೆ ಸಿದ್ದವಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಕಾಂತಾರ ಸಿನಿಮಾ ನೋಡಿರುವ ಅನಿಲ್ ಕುಂಬ್ಳೆ, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್, ರಾಣಾ ದಗ್ಗುಬಟಿ ಸೇರಿದಂತೆ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ-Diwali Bonus: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಸಿಗಲಿದೆ 1 ತಿಂಗಳ ವೇತನ ಬೋನಸ್


ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವವರ ಸಾಲಿಗೆ  ಈಗ ತಮಿಳು ನಟ ಧನುಶ್ ಕೂಡ ಸೇರಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು “ಕಾಂತಾರ .. ಮನಸ್ಸಿಗೆ ಮುದನೀಡುತ್ತದೆ !! ಇದನ್ನು ಎಲ್ಲರೂ ನೋಡಲೇಬೇಕು.. ರಿಷಬ್ ಶೆಟ್ಟಿ, ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು. ನಿಮಗೆ ಅಭಿನಂದನೆಗಳು ಹೊಂಬಾಳೆ ಫಿಲಂಸ್ ನೀವು ಗಡಿಗಳನ್ನು ದಾಟುತ್ತಲೇ ಇರಿ. ಚಿತ್ರದ ಎಲ್ಲಾ ನಟರು ಮತ್ತು ತಂತ್ರಜ್ಞರಿಗೆ ಒಂದು ದೊಡ್ಡ ಅಪ್ಪುಗೆ. ದೇವರು ಒಳ್ಳೆಯದು ಮಾಡಲಿ “ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


New Bike Launch: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಹೊಚ್ಚ ಹೊಸ ಬೈಕ್, ಇಂದೇ ಬುಕ್ ಮಾಡಿ


ಈಗಾಗಲೇ ಕಾಂತಾರ ಸಿನಿಮಾ ಕನ್ನಡವೊಂದರಲ್ಲೇ 70 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲಿಯೇ ಅದು 100 ಕೋಟಿ ರೂ ತಲುಪಲಿದೆ ಎಂದು ಸಿನಿ ಮಾರುಕಟ್ಟೆಯ ವಿಶ್ಲೇಷಕರು ಭವಿಷ್ಯ ನುಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.