ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂದಿ ಹೇರಿಕೆಯ ವಿಚಾರವಾಗಿ ಬಂಗಾಳಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಇದೆ ವೇಳೆ ಸಿ.ಎನ್.ಅಣ್ಣಾದೊರೆ ಹಾಗೂ ಕುವೆಂಪು ಅವರ ಪೋಸ್ಟರ್ ಗಳನ್ನು ಹಿಡಿದು ಹಿಂದಿ ವಿರುದ್ಧ ಘೋಷಣೆ ಕೂಗುತ್ತಿರುವ ದೃಶ್ಯ ಪ್ರತಿಭಟನೆ ವೇಳೆ ಕಂಡು ಬಂದಿತು.
ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂಗ್ಲೀಶ್ ಭಾಷೆಗೆ ಪ್ರಾಧಾನ್ಯತೆಯನ್ನು ಕಡಿತಗೊಳಿಸಿ ಹಿಂದಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಲಾಗುತ್ತಿದೆ ಆ ಮೂಲಕ ದೇಶದ ಭಾಷಾ ವೈವಿದ್ಯತೆಯನ್ನು ಸರ್ಕಾರ ನಾಶ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-Diwali Bonus: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಸಿಗಲಿದೆ 1 ತಿಂಗಳ ವೇತನ ಬೋನಸ್
Huge protest in Kolkata by Bengalis against Hindi Imposition conspiracy by Hindi Imperialist BJP. In rally by @BanglaPokkho, National org of Bengalis in India, unprecedented scenes of Bengalis carrying posters of CN Annadurai, Kuvempu & Thalapathy @mkstalin. #StopHindiImposition pic.twitter.com/SGTfmUPSvB
— Garga Chatterjee (@GargaC) October 12, 2022
ಬಾಂಗ್ಲಾ ಪೋಕ್ಕೂ ಸಂಘಟನೆ ನೇತೃತ್ವದಲ್ಲಿ ನಡೆದ ಹಿಂದಿ ಹೇರಿಕೆ ವಿರುದ್ಧದ ಪ್ರತಿಭಟನೆಯಲ್ಲಿಕುವೆಂಪು, ಪೆರಿಯಾರ್,ಹಾಗೂ ಕರುಣಾನಿಧಿ, ಅನ್ನಾದೊರೆಯ ಚಿತ್ರಗಳನ್ನು ಪ್ರದರ್ಶಿಸಿದ್ದು ಗಮನಸೆಳೆಯಿತು.ಪ್ರತಿಭಟನಾ ಕಾರರು ಭಾರತೀಯ ಸಂವಿಧಾನದ ಎಂಟನೆ ಪರಿಚ್ಛೇದದ ಅನ್ವಯ ಭಾರತದ ಎಲ್ಲಾ ಭಾಷೆಗಳಿಗೆ ಸಮಾನವಾದ ಮಾನ್ಯತೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿಯಂತಹ ಸಂಸ್ಥೆಗಳಲ್ಲಿ ಹಿಂದಿ ಮಾಧ್ಯಮದಲ್ಲಿ ಬೋಧನೆಗೆ ಅವಕಾಶ ಕಲ್ಪಿಸಲು ಸೂಚಿಸಿದ್ದರು.ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯಲ್ಲಿಕೂಡ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಘೋಷಿಸಬೇಕು ಎಂದು ಸಂಸತ್ತಿನ ಸಮಿತಿ ಸೂಚಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.