Dhruva Sarja : ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ನಿನ್ನೆ ರಾತ್ರಿ ಚಿತ್ರನಟ ಧ್ರುವ ಸರ್ಜಾ ಭೇಟಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ, ಗ್ರಾಮದ ದರ್ಶನ‌ ಮಾದರ ಎನ್ನುವ ಯುವಕ ದೃವ ಸರ್ಜಾ ಅವರ ಕಟ್ಟಾ ಅಭಿಮಾನಿ.‌ ನಿನ್ನೆ ರಾತ್ರಿ ಧ್ರುವ ಸರ್ಜಾ ಅವರು ದರ್ಶನ ಮನೆಗೆ ಭೇಟಿ ನೀಡಿ ಅಭಿಮಾನಿಯ ಆನಂದವನ್ನು ಇಮ್ಮಡಿಗೊಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Janhvi Kapoor: ಗುಂಡಿನ ಮತ್ತಲ್ಲಿದ್ರಾ ಜಾನ್ವಿ? ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ!


ದರ್ಶನ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಗುನಗುತ್ತ ಎಲ್ಲರೊಂದಿಗೆ ಕೆಲ ಸಮಯ ಕಳೆದು ಅಲ್ಲಿಂದ ನಿರ್ಗಮಿಸಿದ್ದಾರೆ. ಚಿತ್ರನಟ ಧ್ರುವ ಸರ್ಜಾ ಆ ಪುಟ್ಟ ಗ್ರಾಮಕ್ಕೆ ಬಂದಿದ್ದರಿಂದ ಅಲ್ಲಿನ‌ ಯುವಕರು ಅವರ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.


[[{"fid":"270351","view_mode":"default","fields":{"format":"default","field_file_image_alt_text[und][0][value]":"Dhruva Sarja","field_file_image_title_text[und][0][value]":"ಧ್ರುವ ಸರ್ಜಾ "},"type":"media","field_deltas":{"1":{"format":"default","field_file_image_alt_text[und][0][value]":"Dhruva Sarja","field_file_image_title_text[und][0][value]":"ಧ್ರುವ ಸರ್ಜಾ "}},"link_text":false,"attributes":{"alt":"Dhruva Sarja","title":"ಧ್ರುವ ಸರ್ಜಾ ","class":"media-element file-default","data-delta":"1"}}]]


ಇನ್ನು ದರ್ಶನ ಮಾದರ ಇಳಕಲ್ ನಗರದಲ್ಲಿ ಧ್ರುವ ಸರ್ಜಾ ಹೆಸರಿನಲ್ಲೆ ಜಿಮ್ ಆರಂಭಿಸಿದ್ದಾರೆ. ಧ್ರುವ ಸರ್ಜಾ ಅವರ ಅಭಿಮಾನಿ. ನಿನ್ನೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಧ್ರುವ ಸರ್ಜಾ, ಕುಷ್ಟಗಿಗೆ ಸಮೀಪದಲ್ಲಿ ಇರುವ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ಬಂದು ತಮ್ಮ‌ನೆಚ್ಚಿನ ಅಭಿಮಾನಿ ಮನೆಗೆ ಭೇಟಿ ನೀಡಿ ಹೋಗಿದ್ದಾರೆ.


ಇದನ್ನೂ ಓದಿ : ಪ್ರೇಮ್​ ಪುತ್ರಿಗೆ ಚಾನ್ಸ್​ ಕೊಟ್ಟಿದ್ದಕ್ಕೆ ಟೀಕೆ! ನೆಪೋಟಿಸಂ ಆರೋಪಕ್ಕೆ ಡಾಲಿ ಖಡಕ್‌ ಉತ್ತರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.