Daali Dhananjay: ಇತ್ತೀಚೆಗಷ್ಟೆ ನಟ ಡಾಲಿ ಧನಂಜಯ್ ತಮ್ಮ ಸಿನಿಮಾ ಟಗರು ಪಲ್ಯಗೆ ನಟ ಪ್ರೇಮ್ ಪುತ್ರಿ ಅಮೃತ ಅವರನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲದಿನಗಳ ಹಿಂದೆ ಡಾಲಿ ಧನಂಜಯ್ ‘ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಹೇಳಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎರ್ರಾಬಿರ್ರಿ ವೈರಲ್ ಆಗಿತ್ತು. ಇದೀಗ ಕೆಲ ನೆಟ್ಟಿಗರು ಡಾಲಿಯ ಈ ಹೇಳಿಕೆಯ ಬಗ್ಗೆ ಚಕಾರ ತೆಗೆದಿದ್ದಾರೆ. ಅಲ್ಲದೇ ‘ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಹೇಳಿದ ಅವರೇ ಇದೀಗ ಖ್ಯಾತ ನಟನ ಪುತ್ರಿಗೆ ನಾಯಕ ನಟಿಯಾಗಿ ಅವಕಾಶ ನೀಡಿದ್ದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅನೇಕರು ನೆಪೋಟಿಸಂ ಆರೋಪ ಕೂಡ ಮಾಡಿದ್ದಾರೆ. ಈಗ ಇದೆಲ್ಲದಕ್ಕೂ ಡಾಲಿ ಖಡಕ್ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ : Ramya Photos : ಮೋಹಕ ನಗು, ಮನಸೊಂಥರ ಮಗು.. ಸ್ಯಾಂಡಲ್‌ವುಡ್ ಕ್ವೀನ್ ಅಂದ್ರೆ ಸುಮ್ನೆನಾ?
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಬಡವ ರಾಸ್ಕಲ್ ಸಕ್ಸಸ್ ಬಳಿಕ ಹೆಡ್ ಬುಷ್ ಸಿನಿಮಾಗೆ ಬಂಡವಾಳ ಹೂಡಿದ್ದ ಧನಂಜಯ್ ಇದೀಗ ಟಗರು ಪಲ್ಯ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಇದು ನಟ ಪ್ರೇಮ್ ಪುತ್ರಿಯ ಮೊದಲ ಸಿನಿಮಾ. ಧನಂಜಯ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದು. ಬಡವರ ಮಕ್ಕಳಿಗೆ ಅವಕಾಶ ಕೊಡಬಹುದಿತ್ತಲ್ಲಾ ಸರ್ ಎಂದು ಅನೇಕ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇತ್ತ ಡಾಲಿ ಫ್ಯಾನ್ಸ್ ಕೂಡ ನೆಪೋಟಿಸಂ ಆರೋಪದ ಬಗ್ಗೆ ಅಸಮಾಧಾನಗೊಂಡಿದ್ದು, ಏಕಾಏಕಿ ನೆಪೋಟಿಸಂ ಆರೋಪ ಮಾಡುತ್ತಿರುವವರು ಎಲ್ಲ ಆಯಾಮದಿಂದಲೂ ಆಲೋಚನೆ ಮಾಡಬೇಕು. ಟಗರು ಪಲ್ಯ ಸಿನಿಮಾದಲ್ಲಿ ಧನಂಜಯ್ ಅಮೃತ ಪ್ರೇಮ್ ಅವರಿಗೆ ಮಾತ್ರ ಅವಕಾಶ ನೀಡಿಲ್ಲ. ಇನ್ನೂ ಅನೇಕರಿಗೆ ಈ ಚಾನ್ಸ್ ದೊರೆತಿದೆ. ಹೀರೋ ಆಗಿ ನಾಗಭೂಷಣ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಉಮೇಶ್ ಕೆ ಕೃಪ ಸಹ ಯಾವುದೇ ಚಿತ್ರರಂಗದ ಕುಟುಂಬದ ಹಿನ್ನೆಲೆಯಿಂದ ಬಂದಿಲ್ಲ. ಇವರಿಗೂ ಕೂಡ ಧನಂಜಯ್ ಚಾನ್ಸ್ ಕೊಟ್ಟಿದ್ದಾರೆ ಎಂದು ತಮ್ಮ ನೆಚ್ಚಿನ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Puneeth - Darshan : ಪುನೀತ್ - ದರ್ಶನ್ ಒಟ್ಟಾಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ
ಇದಕ್ಕೆ ಪ್ರತಿಕ್ರಿಯಿಸಿರುವ ಡಾಲಿ ಧನಂಜಯ್ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ನೆಟ್ಟಿಗರ ಆರೋಪಗಳು ಹಾಗೂ ಪ್ರಶ್ನೆಗಳಿಗೆ ಡಾಲಿ ಧನಂಜಯ್ ಖಡಕ್, "ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ" ಎಂದು ಉತ್ತರಿಸಿದ್ದಾರೆ. ಡಾಲಿ ಕೊಟ್ಟ ಈ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಾಲಿ ಧನಂಜಯ್ ನಿರ್ಮಾಣ ಮಾಡ್ತಿರುವ ಟಗರು ಪಲ್ಯಾ ಸಿನಿಮಾದ ನಿರ್ದೇಶಕ ಉಮೇಶ್ ಕೆ ಕೃಪ ಅವರು ಸೆಟ್ ಬಾಯ್ ಆಗಿದ್ದವರು. ಇದೀಗ ಅವರು ಟಗರು ಪಲ್ಯಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.