ಮುಂಬೈ : ಕೊರೊನೋತ್ತರ ಕಾಲಾವಧಿಯಲ್ಲಿ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲು ಹೆಣಗಾಡುತ್ತಿವೆ.ಆದಾಗ್ಯೂ ದಕ್ಷಿಣ ಭಾರತೀಯ ಸಿನಿಮಾಗಳಾದ ಕೆಜಿಎಫ್ 2,ಆರ್,ಆರ್,ಆರ್ ಹಾಗೂ ಪುಷ್ಪಾದಂತಹ ಚಿತ್ರಗಳು ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.ಈಗ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗುತ್ತಿರುವುದನ್ನು ನೋಡಿ ಬಾಲಿವುಡ್ ಕೂಡ ಅಚ್ಚರಿ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿದ್ಯಾ ವೋಕ್ಸ್‌ : ʼಲೆಟ್‌ ಮಿ ಲವ್‌ ಯೂʼ ಗಾಯಕಿ ಬಗ್ಗೆ ಇಲ್ಲಿದೆ ಮಾಹಿತಿ


ಇತ್ತೀಚಿಗೆ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ, ಈ ಚಿತ್ರಗಳ ಯಶಸ್ಸಿನ ಬಗ್ಗೆ ಹೇಳಿಕೆ ನೀಡಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.ಅವರು ಸಂದರ್ಶನದಲ್ಲಿ ಅವರು ಮುಖ್ಯ ಪಾತ್ರಗಳ ಪರಿಕಲ್ಪನೆಯ ಬಗ್ಗೆ ಮಾತನಾಡುತ್ತಾ ಅದು ಬದಲಾಗಿಲ್ಲ ಎಂದು ಹೇಳಿದ್ದಾರೆ,"ಇದು ಬದಲಾಗುತ್ತಿದೆ ಎಂದು ನಾನು ಭಾವಿಸುವುದಿಲ್ಲ...ನಾನು ಮಾಂಟೊದಲ್ಲಿಯೂ ನಾಯಕನಾಗಿ ನಟಿಸಿದ್ದೇನೆ, ಆದರೆ ಅದನ್ನು ನೋಡಲು ಎಷ್ಟು ಜನರು ಇದ್ದಾರೆ ಹೇಳಿ? ಕೊರೋನಾದ ಎರಡು ವರ್ಷಗಳ ನಂತರ ಜನರು ವಿಶ್ವ ಸಿನಿಮಾವನ್ನು ನೋಡಿರಬಹುದು ಎಂದು ನಾನು ಭಾವಿಸಿದ್ದೆ, ಆದರೆ ಈಗ ಹಿಟ್ ಆಗುತ್ತಿರುವ ಚಿತ್ರಗಳನ್ನು ನೋಡಿದರೆ ಅವು  ಕೌಶಲಗಳನ್ನು ಹಾಳು ಮಾಡಿ, ಬಾಹ್ಯವಾಗಿ ಜನರನ್ನು ರಂಜಿಸುವಂತೆ ತೋರುತ್ತಿದೆ ಎಂದು ಹೇಳಿದರು. IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.