ಮುಂಬೈ: ಸಾಮಾನ್ಯವಾಗಿ ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡುವುದೆಂದರೆ ಅದು ಸಾಮಾನ್ಯ ಕೆಲಸವಲ್ಲ, ಅದರಲ್ಲೂ ಟಿ20ಯಂತಹ ಪಂದ್ಯಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂದು ಹೇಳಬಹುದು.ಇಂತಹ ಸಂದರ್ಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಉಮ್ರಾನ್ ಮಲಿಕ್ ಪಂಜಾಬ್ ಕಿಂಗ್ಸ್ ವಿರುದ್ಧ ಅಪರೂಪದ ದಾಖಲೆಗೆ ಕಾರಣಕರ್ತರಾಗಿದ್ದಾರೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ರನ್ನು ಅಮಿತಾಬ್ ಬಚ್ಚನ್ ಗೆ ಹೋಲಿಸಿದ ಬಾಲಿವುಡ್ ನಟಿ ಕಂಗನಾ ರನೌತ್
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 151 ರನ್ ಗಳಿಗೆ ಆರು ವಿಕೆಟ್ ಗಳನ್ನು ಕಳೆದುಕೊಂಡಿತ್ತು, ಇಂತಹ ಸಂದರ್ಭದಲ್ಲಿ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬೌಲಿಂಗ್ ದಾಳಿಗೆ ಇಳಿದ ಉಮ್ರಾನ್ ಮಲಿಕ್ ಅವರು ಎರಡನೇ ಎಸೆತದಲಿ ಒಡೆನ್ ಸ್ಮಿತ್ ಅವರ ವಿಕೆಟ್ ನ್ನು ಕಬಳಿಸಿದರು. ಇದಾದ ನಂತರ ಮಾರಕವಾಗಿ ಪರಿಣಮಿಸಿದ ಮಲಿಕ್ ಅವರು ನಂತರ ಅದೇ ಓವರ್ ನಲ್ಲಿ ರಾಹುಲ್ ಚಹಾರ್, ವೈಭವ್ ಆರೋರಾ, ಹಾಗೂ ಆರ್ಶದೀಪ್ ಅವರ ವಿಕೆಟ್ ನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಮಾಡಿದ ಸಾಧನೆಗೆ ಪಾತ್ರರಾದರು. ಇದರಿಂದಾಗಿ ಪಂಜಾಬ್ ಕಿಂಗ್ಸ್ ತಂಡವು 20 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಗಬೇಕಾಯಿತು.
.
Only three bowlers - Irfan Pathan (PBKS in 2008), Jaydev Unadkat (RPS in 2017) and now Umran Malik #SRH #IPL2022 #SRHvPBKS have managed not to concede any runs in the 20th over of the #IPL innings.
Also, Lasith Malinga (MI in 2009) but conceded 1 bye and 4 leg byes.#PBKSvSRH
— Mohandas Menon (@mohanstatsman) April 17, 2022
ಉಮ್ರಾನ್ ಮಲಿಕ್ ಅವರು 4 ಓವರ್ ಗಳಲ್ಲಿ ಒಂದು ಮೇಡನ್ ಮಾಡುವುದರ ಜೊತೆಗೆ ನಾಲ್ಕು ವಿಕೆಟ್ ಗಳನ್ನು ಪಡೆದರು,ಅದರಲ್ಲೂ ಈ ಸಾಧನೆ ಬಂದಿರುವುದು ಇನಿಂಗ್ಸ್ ನ ಕೊನೆಯ ಓವರ್ ನಲ್ಲಿಯೇ ಎನ್ನುವುದು ವಿಶೇಷ ಎನ್ನಬಹುದು.ಉಮ್ರಾನ್ ಮಲಿಕ್ ಅವರಿಗೂ ಮುನ್ನ 2008 ರಲ್ಲಿ ಇರ್ಫಾನ್ ಪಠಾಣ್, 2009 ರಲ್ಲಿ ಲಸಿತ್ ಮಾಲಿಂಗ ಮತ್ತು 2017 ರಲ್ಲಿ ಜಯದೇವ್ ಉನದ್ಕತ್ ನಂತರ ಐಪಿಎಲ್ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಮೇಡನ್ ಮಾಡಿದ ಬೌಲರ್ ಆಗಿದ್ದರು.ಈಗ ಉಮ್ರಾನ್ ಮಲಿಕ್ ಅವರು ಬರಿ ಮೆಡನ್ ಅಷ್ಟೇ ಅಲ್ಲದೆ ಹ್ಯಾಟ್ರಿಕ್ ಸಾಧನೆಯನ್ನು ಸಹ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.