Dilip Kumar health updates : ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ, ವದಂತಿಗಳಿಗೆ ಕಿವಿಗೊಡಬೇಡಿ, ಅಭಿಮಾನಿಗಳಿಗೆ ಸಾಯಿರಾ ಭಾನು ಮನವಿ
Dilip Kumar health updates : ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಆರೋಗ್ಯ (Dilip Kumar Health) ಸ್ಥಿರವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂಬ ಮಾಹಿತಿಯನ್ನು ದಿಲೀಪ್ ಕುಮಾರ್ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ನೀಡಲಾಗಿದೆ.
ನವದೆಹಲಿ : ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಆರೋಗ್ಯ (Dilip Kumar Health) ಸ್ಥಿರವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂಬ ಮಾಹಿತಿಯನ್ನು ದಿಲೀಪ್ ಕುಮಾರ್ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ನೀಡಲಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರನ್ನು ಭಾನುವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ನಂತರ ಹಿರಿಯ ನಟನ ಸಾವಿನ ಸುದ್ದಿ ವಾಟ್ಸ್ಆಪ್ ಗಳಲ್ಲಿ ಹರಿದಾಡಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪತ್ನಿ ಸಾಯಿರಾ ಭಾನು (Saira Banu), ವದಂತಿಗಳಿಗೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ವದಂತಿಗಳಿಗೆ ಕಿವಿಗೊಡದಂತೆ ಮನವಿ :
ದಿಲೀಪ್ ಕುಮಾರ್ ಕುಮಾರ್ ಸಾವಿನ ಸುದ್ದಿ ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿರುವುದು, ಅಭಿಮಾನಿಗಳನ್ನು ಆತಂಕಕಕ್ಕೀಡು ಮಾಡಿತ್ತು. ಈ ನಡುವೆ, ದಿಲೀಪ್ ಕುಮಾರ್ ಅಧಿಕೃತ ಟ್ವಿಟರ್ (Dilip Kumar Tweet)) ಹ್ಯಾಂಡಲ್ ನಿಂದ ದಿಲೀಪ್ ಕುಮಾರ್ ಆರೋಗ್ಯದ (Dilip Kumar Health Updates) ಬಗ್ಗೆ ಮಾಹಿತಿ ನೀಡಲಾಗಿದೆ, ಹಿರಿಯ ನಟನ ಆರೋಗ್ಯ ಸ್ಥಿರವಾಗಿದ್ದು, ಅಭಿಮಾನಿಗಳ ಪ್ರಾರ್ಥನೆಗೆ ಧನ್ಯವಾದ ತಿಳಿಸಲಾಗಿದೆ. ಅಲ್ಲದೆ, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ದಿಲೀಪ್ ಕುಮಾರ್ (Dilip Kumar) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದಾಗಿಯೂ ತಿಳಿಸಲಾಗಿದೆ.
Dilip Kumar Health Update: Dilip Kumar ಆರೋಗ್ಯ ಸ್ಥಿತಿಯ ಕುರಿತು ಹಿಂದುಜಾ ವೈದ್ಯರು ಹೇಳಿದ್ದೇನು?
ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ :
ಉಸಿರಾಟದ ಸಮಸ್ಯೆಯಿಂದಾಗಿ, ಭಾನುವಾರ ದಿಲೀಪ್ ಕುಮಾರ್ ಅವರನ್ನು ಹಿಂದೂಜಾ ಆಸ್ಪತ್ರೆಗೆ (Hinduja Hospital) ದಾಖಲಿಸಲಾಗಿತ್ತು. ದಿಲೀಪ್ ಕುಮಾರ್ ಗೆ Bilateral Pleural Effusion ಸಮಸ್ಯೆಯಿದ್ದು, ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಆದರೆ, "ದಿಲೀಪ್ ಕುಮಾರ್ ಅವರು ಸದ್ಯ ವೆಂಟಿಲೆಟರ್ ಮೇಲಿಲ್ಲ ಹಾಗೂ ಅವರನ್ನು ICUನಲ್ಲೂ ದಾಖಲಿಸಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ : Dilip Kumar Health Update : ಮತ್ತೆ ಬಿಗಡಾಯಿಸಿತು ದಿಲೀಪ್ ಕುಮಾರ್ ಆರೋಗ್ಯ ; ದಿಗ್ಗಜ ನಟನಿಗೆ ಆಗಿದ್ದೇನು ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ