Dilip Kumar Health Update - ಬಾಲಿವುಡ್ ನ (Bollywood) ಹಿರಿಯ ದಿಗ್ಗಜ ನಟ ದಿಲೀಪ್ ಕುಮಾರ್ (Veteran Actor Dilip Kumar)ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಭಾನುವಾರ ದಿಲೀಪ್ ಕುಮಾರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಸಾಯಿರಾ ಬಾನು ಅವರ ವತಿಯಿಂದ ಮಾಡಲಾಗಿರುವ ಈ ಟ್ವೀಟ್ ನಲ್ಲಿ ದಿಲೀಪ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿತ್ತು. ಆದರೆ, ಇದೀಗ ದಿಲೀಪ್ ಕುಮಾರ್ ಅವರ ಪುಪ್ಪುಸದಲ್ಲಿ ನೀರು ತುಂಬಿರುವ ವರದಿಗಳು ಪ್ರಕಟಗೊಂಡಿವೆ.
Bilateral Pleural Iffusion ವಿರುದ್ಧ ಹೋರಾಡುತ್ತಿದ್ದಾರೆ ಹಿರಿಯ ನಟ
ಮಾಧ್ಯಮ ವರದಿಗಳ ಪ್ರಕಾರ ದಿಲೀಪ್ ಕುಮಾರ್ ಅವರು Bilateral Pleural Iffusion ವಿರುದ್ಧ ಹೋರಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಅವರ ಪುಪ್ಪುಸದಲ್ಲಿ ನೀರು ತುಂಬಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಹಿಂದುಜಾ ಆಸ್ಪತ್ರೆಯ ವೈದ್ಯರು, "ದಿಲೀಪ್ ಕುಮಾರ್ ಅವರು ಸದ್ಯ ವೆಂಟಿಲೆಟರ್ ಮೇಲಿಲ್ಲ ಹಾಗೂ ಅವರನ್ನು ICUನಲ್ಲಿ ದಾಖಲಿಸಲಾಗಿಲ್ಲ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ವಯಸ್ಸಿನ ಹಿನ್ನೆಲೆ ಪ್ರಸ್ತುತ ಎನ್ನನ್ನೂ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.
The all-time favorite pink shirt. pic.twitter.com/JVsgntYTj3
— Dilip Kumar (@TheDilipKumar) March 2, 2021
ಪುಪ್ಪುಸದಲ್ಲಿ ನೀರು ತುಂಬುವುದು ವಯೋ ಸಂಬಂಧಿ ಅಡಚಣೆ
ಈ ಕುರಿತು ಹೇಳಿಕೆ ನೀಡಿರುವ ಹಿಂದುಜಾ ವೈದ್ಯರು, ದಿಲೀಪ್ ಕುಮಾರ್ ಅವರನ್ನು ಇನ್ನು ಎಷ್ಟು ಕಾಲ ಆಸ್ಪತ್ರೆಯಲ್ಲಿಡಲಾಗುವುದು ಈ ಕುರಿತು ಖಚಿತವಾಗಿ ಏನನ್ನು ಹೇಳಲು ಸಾದ್ಯವಿಲ್ಲ. ಆದರೆ, ಪುಪ್ಪುಸದಲ್ಲಿ ನೀರು ತುಂಬುವಿಕೆ ಒಂದು ವಯೋಸಹಜ ಸಮಸ್ಯೆಯಾಗಿದೆ (Dilip Kumar Health Problems) ಎಂದಿದ್ದಾರೆ. ಇನ್ನೊಂದೆಡೆ ಆಂಗ್ಲ ಮಾಧ್ಯಮದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ದಿಲೀಪ್ ಕುಮಾರ್ ಅವರ ದೇಹದ ಆಕ್ಸಿಜನ್ ಪ್ರಮಾಣದಲ್ಲಿ ನಿರಂತರ ಇಳಿಕೆಯಾಗುತ್ತಿದೆ. ಈ ಹಿನ್ನೆಲೆ ಅವರನ್ನು ಆಕ್ಸಿಜನ್ ಸಪೋರ್ಟ್ ಮೇಲೆ ಇಡಲಾಗಿದೆ ಎಂಬ ಮಾಹಿತಿ ಮುಂದೆ ಬಂದಿದೆ.
ಟ್ವೀಟ್ ಮಾಡಿದ ಸಾಯಿರಾ ಹೇಳಿದ್ದೇನು? (Dilip Kumar Health Condition)
ದಿಲೀಪ್ ಕುಮಾರ್ ಅವರ ಟ್ವೀಟ್ ಖಾತೆಯ ಮೂಲಕ ಟ್ವೀಟ್ ಮಾಡಿದ್ದ ಸಾಯಿರಾ ಬಾನೋ (Saira Bano), ದಿಲೀಪ್ ಸಾಹಬ್ ಅವರನ್ನು ನಿಯಮಿತ ಪರೀಕ್ಷೆಗಾಗಿ ನಾನ್ ಕೊವಿಡ್ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ಹಲವು ದಿನಗಳಿಂದ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಹಿಂದುಜಾ ಆಸ್ಪತ್ರೆಯಲ್ಲಿ ಡಾ.ನಿತೀನ್ ಗೋಖಲೆ ಅವರ ತಂಡ ಅವರ ಆರೋಗ್ಯದ ಕಾಳಜಿ ವಹಿಸುತ್ತಿದ್ದು, ಅಭಿಮಾನಿಗಳು ಸಾಹಬ್ ಅವರಿಗಾಗಿ ಪ್ರಾರ್ಥನೇ ಸಲ್ಲಿಸಿ ಸುರಕ್ಷಿತವಾಗಿರಲು ಮನವಿ ಮಾಡಿದ್ದರು.
Dilip Sahab has been admitted to non-Covid PD Hinduja Hospital Khar for routine tests and investigations. He’s had episodes of breathlessness. A team of healthcare workers led by Dr. Nitin Gokhale is attending to him.
Please keep Sahab in your prayers and please stay safe.
— Dilip Kumar (@TheDilipKumar) June 6, 2021
ಇದನ್ನೂ ಓದಿ- 5G ನೆಟ್ ವರ್ಕ್ ವಿರೋಧಿಸಿ ಅರ್ಜಿ ಸಲ್ಲಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ.ಗಳ ದಂಡ
ದಿಲೀಪ್ ಕುಮಾರ್ ಅವರ ಸಹೋದರರ ನಿಧನ
ಕೆಲ ಸಮಯದ ಹಿಂದೆ ದಿಲೀಪ್ ಕುಮಾರ್ ಅವರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಂದೂ ಕೂಡ ಅವರಿಗೆ ಉಸಿರಾಟದಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಲಾಗಿತ್ತು. ಬಳಿಕ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದ ಸಾಯರಾ ಬಾನೋ, ನಿಯಮಿತ ಚೆಕ್ ಅಪ್ ಗಾಗಿ ದಿಲೀಪ್ ಕುಮಾರ (Dilip Kumar) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೆಕ್ ಅಪ್ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ ಎಂದಿದ್ದರು. ಕಳೆದ ವರ್ಷ ಕೊವಿಡ್ (Covid-19) ಹಿನ್ನೆಲೆ ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರು ನಿಧನರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ- ಕನ್ನಡದ ಹಿರಿಯ ನಟಿ ಬಿ.ಜಯಾ ಇನ್ನಿಲ್ಲ, ಕಂಬನಿ ಮಿಡಿದ ಚಿತ್ರರಂಗ
ದಿಲೀಪ್ ಕುಮಾರ್ ಅವರ ಹಿಟ್ ಚಿತ್ರಗಳು ಹಾಗೂ ಪುರಸ್ಕಾರಗಳು
ಬಾಲಿವುಡ್ ನ ದಿಗ್ಗಜ ಸೂಪರ್ ಸ್ಟಾರ್ ಗಳಲ್ಲಿ ಒಂದಾಗಿರುವ ದಿಲೀಪ್ ಕುಮಾರ್ ಅವರ ತಮ್ಮ ಕಾಲದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದರು. ಅವರು ನೀಡಿರುವ ಹಿಟ್ ಚಿತ್ರಗಳಲ್ಲಿ 'ಜ್ವಾರ್ ಭಾಟಾ, ಅಂದಾಜ್, ಆನ್, ಮುಗಲ್-ಎ-ಆಜಮ್, ಗಂಗಾ ಜಮುನಾ, ಕ್ರಾಂತಿ, ದೇವದಾಸ್, ಆಜಾದ್, ಕರ್ಮಾ ಹಾಗೂ ಸೌದಾಗರ್ ಸೇರಿದಂತೆ ಹಲವು ಚಿತ್ರಗಳು ಶಾಮೀಲಾಗಿವೆ. ಓರ್ವ ಅತ್ಯುತ್ತಮ ನಟನಾಗಿ ದಿಲೀಪ್ ಕುಮಾರ್ ಅವರು 8 ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇದಲ್ಲದೆ ಅವರಿಗೆ ದಾದಾಸಾಹೇಬ್ ಫಾಲ್ಕೆ ಹಾಗೂ ಪದ್ಮ ಭೂಷಣ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ-Happy Birthday Mani Ratnam: ಕನ್ನಡದ ಪಲ್ಲವಿ ಅನುಪಲ್ಲವಿ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ಮಣಿರತ್ನಂ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ