ನವದೆಹಲಿ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ನಟಿ ಇನಾಯಾ ಸುಲತಾನಿಯವರ ಹುಟ್ಟುಹಬ್ಬದ ಪಾರ್ಟಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ನಟಿಯೊಂದಿಗೆ ನೃತ್ಯ ಮಾಡುತ್ತಿದ್ದಾರೆ. ಈಗ ಈ ವಿಡಿಯೋವನ್ನು ಅವರೇ ಶೇರ್ ಮಾಡಿಕೊಂಡು ಅದರಲ್ಲಿವ ವ್ಯಕ್ತಿ ನಾನಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ (Ram Gopal Varma) "ಈ ವೀಡಿಯೊದಲ್ಲಿರುವ ವ್ಯಕ್ತಿ ನಾನಲ್ಲ ಮತ್ತು ಕೆಂಪು ಬಣ್ಣದ ಹುಡುಗಿ ಇನಯಾ ಸುಲ್ತಾನಾ ಅಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ ಮತ್ತು ನಾನು ಇದನ್ನು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಮೇಲೆ ಪ್ರತಿಜ್ಞೆ ಮಾಡುತ್ತೇನೆ"ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಕುಂಭ ಮೇಳವನ್ನು ಕೊರೊನಾ ಅಣುಬಾಂಬ್ ಎಂದ ರಾಮ್ ಗೋಪಾಲ್ ವರ್ಮಾ


ಈ ವೀಡಿಯೊದಲ್ಲಿ, ವರ್ಮಾ ಇನಾಯಾ ಅವರ ಹುಟ್ಟುಹಬ್ಬದಂದು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವಂತೆ ಕಾಣುತ್ತದೆ. ಈ ಜೋಡಿಯು ಪರ್ಫಾರ್ಮೆನ್ಸ್ ಅನ್ನು ಪೂರ್ಣವಾಗಿ ಎಂಜಾಯ್ ಮಾಡುತ್ತಿರುವುದು ಕಂಡುಬರುತ್ತದೆ.ಈ ವಿಡಿಯೋ ನೋಡಿದ ನೆಟಿಜನ್ ಗಳು ಬೆಚ್ಚಿಬಿದ್ದರು ಮತ್ತು ಕೆಲವರು ಅವರ ನೃತ್ಯದ ಚಲನೆಗಳಿಗಾಗಿ ಹೊಗಳಿದರೆ, ಇತರರು ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆಗೆ ನಟಿ ಇನಾಯಾ ಸುಲ್ತಾನಾ ಕೂಡ ತನ್ನ ಹುಟ್ಟುಹಬ್ಬದ ಪಾರ್ಟಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ರಾಮ ಗೋಪಾಲ್ ವರ್ಮಾನಿಂದ ಸ್ಫೂರ್ತಿಗೊಂಡ ಐಎಎಸ್ ರ್ಯಾಂಕ್ ವಿಜೇತ !


ಸದ್ಯ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ತಮ್ಮ OTT ಪ್ಲಾಟ್‌ಫಾರ್ಮ್ 'ಸ್ಪಾರ್ಕ್ OTT' ಅನ್ನು ಪ್ರಾರಂಭಿಸಿ 'D Company' ಸಿನಿಮಾವನ್ನು ಮೇ 15, 2021 ರಂದು ಬಿಡುಗಡೆ ಮಾಡಿದ್ದರು. ಈ ಚಿತ್ರವು ವಿವಾದಾತ್ಮಕ ದರೋಡೆಕೋರ ದಾವೂದ್ ಇಬ್ರಾಹಿಂ ಮತ್ತು ಆತನ ಪಕ್ಕದವನಾದ ಛೋಟಾ ರಾಜನ್ ಆಳ್ವಿಕೆ ಕುರಿತಾಗಿ ಹೇಳುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.