ನವದೆಹಲಿ:ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯಲ್ಲಿ 624 ನೇ ಸ್ಥಾನ ಪಡೆದ ಯಡವಳ್ಳಿ ಅಕ್ಷಯ್ ಕುಮಾರ್ ಅವರಿಗೆ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಪ್ರೇರಣೆ ಎಂದು ತಿಳಿಸಿದ್ದಾರೆ.
For all those who thought i inspire only criminals and perverts take a listen to what this Civil Topper is saying ..The irony is that I was a terrible student and failed in Civil engineering twice but proud about it😎 https://t.co/HVSy898CUh
— Ram Gopal Varma (@RGVzoomin) May 9, 2018
ತೆಲುಗು ಆನ್ಲೈನ್ ಚಾನೆಲ್ ಐಡಿ ಡ್ರೀಮ್ಸ್ ಜೊತೆ ಮಾತನಾಡಿದ ಆಂಧ್ರಪ್ರದೇಶದ ಯುಪಿಎಸ್ಸಿ ರ್ಯಾಂಕ್ ವಿಜೇತ ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಅವರಿಂದ ಸ್ಫೂರ್ತಿಗೊಂಡಿರುವುದಾಗಿ ಎಂದು ತಿಳಿಸಿದ್ದಾರೆ. ವರ್ಮಾ ಪ್ರಮುಖವಾಗಿ ಭೂಗತ ಲೋಕದ ಆಧಾರದ ಮೇಲೆ ಚಿತ್ರ ನಿರ್ಮಿಸುವುದಕ್ಕೆ ಜನಪ್ರಿಯರಾಗಿದ್ದಾರೆ.
Yedavalli Akshay kumar a Civils Topper takes inspiration from a failed Civil engineer ..Watch from 23:45 to 28:30 Hey Akshay I would like to meet you and talk to u about education https://t.co/BCECyhUpYI
— Ram Gopal Varma (@RGVzoomin) May 9, 2018
"ನಾನು ಅಪರಾಧಿಗಳಿಗೆ ಮಾತ್ರ ಸ್ಫೂರ್ತಿ ಎಂದು ಭಾವಿಸುವವರು ನಾಗರೀಕ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಪಡೆದ ವ್ಯಕ್ತಿ ಏನು ಹೇಳುತ್ತಾನೆ ಎನ್ನುವುದನ್ನು ಒಮ್ಮೆ ಕೇಳಿ...ದುರದೃಷ್ಟವೆಂದರೆ ಎರಡು ಬಾರಿ ನಾನು ಸಿವಿಲ್ ಇಂಜನಿಯರಿಂಗ್ ನಲ್ಲಿ ಫೇಲ್ ಆದೆ ಅದರ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ವರ್ಮಾ ಅವರು ಇನ್ನೊಂದು ಟ್ವೀಟ್ ನಲ್ಲಿ ಯಡವಲ್ಲಿ ಅಕ್ಷಯಕುಮಾರ್ ರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.