ನವದೆಹಲಿ: ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಈ ಬಾರಿ ಮಹಾ ಕುಂಭಮೇಳವನ್ನು 'ಕರೋನಾ ಪರಮಾಣು ಬಾಂಬ್' ಎಂದು ಕರೆದಿದ್ದಾರೆ.
ಕುಂಭಮೇಳದಲ್ಲಿನ ಬೃಹತ್ ಜನಸಭೆಯು COVID-19 ಉಲ್ಬಣಕ್ಕೆ ಹೇಗೆ ಕಾರಣವಾಗಬಹುದು ಎಂದು ಸರಣಿ ಟ್ವೀಟ್‌ಗಳಲ್ಲಿ ಆರ್‌ಜಿವಿ (Ram Gopal Varma) ಟ್ವೀಟ್ ಮಾಡಿದ್ದಾರೆ." ನೀವು ನೋಡುತ್ತಿರುವುದು ಕುಂಭ ಮೇಳ ಅಲ್ಲ ಆದರೆ ಅದು ಕೊರೋನಾ ಅಟೊಮ್ ಬಾಂಬ್ ಆಗಿದೆ..ಈ ವೈರಲ್ ಸ್ಪೋಟಕ್ಕೆ ಯಾರು ಜವಾಬ್ದಾರರಾಗಿರುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಗುಡ್ ಬೈ ಇಂಡಿಯಾ ವೆಲ್ ಕಮ್ ಕೊರೊನಾ ಎಂದು ಅವರು ಬರೆದುಕೊಂಡಿದ್ದಾರೆ.
What you are seeing is not KUMBH MELA but it’s a CORONA ATOM BOMB ..I wonder who will be made accountable for this VIRAL EXPLOSION pic.twitter.com/bQP9fVOw5c
— Ram Gopal Varma (@RGVzoomin) April 13, 2021
ಹರಿದ್ವಾರದ ಕುಂಭಮೇಳದಲ್ಲಿ COVID ಸಕಾರಾತ್ಮಕ ಪ್ರಕರಣಗಳ ಸಂಖ್ಯೆಯನ್ನು ತಿಳಿಸುವ ಸುದ್ದಿ ಲೇಖನವನ್ನೂ ಅವರು ಹಂಚಿಕೊಂಡಿದ್ದಾರೆ."ಸರ್ಕಾರದ ಪ್ರಕಾರ ಈ ರೀತಿಯ 31 ಲಕ್ಷ ಸಭೆಯಲ್ಲಿ ಕೇವಲ 26 ಮಂದಿ ಮಾತ್ರ ಧನಾತ್ಮಕ ಪರೀಕ್ಷೆ ನಡೆಸಿದ್ದರೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಪಾರ್ಟಿ ಮಾಡೋಣ" ಎಂದು ಅವರು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.