ನವದೆಹಲಿ: ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani) ಆಗಾಗ ತನ್ನ ಬಿಕಿನಿ ಧರಿಸಿರುವ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಚಲನ ಮೂಡಿಸುತ್ತಲೇ ಇರುತ್ತಾಳೆ. ಸೋಮವಾರ ಮತ್ತೊಮ್ಮೆ ಈ ನಟಿ ತನ್ನ ಬಿಕಿನಿ ಧರಿಸಿರುವ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ಕನಸಿಗೆ ಕಿಚ್ಚೆರಚಿದ್ದಾಳೆ.  ಇದನ್ನು ನೋಡಿರುವ ಅಭಿಮಾನಿಗಳು ಇನ್ನಷ್ಟು ಭಾವಚಿತ್ರಗಳನ್ನು ಹಂಚಿಕೊಳ್ಳಲು ನಟಿಗೆ ದುಂಬಾಲು ಬೀಳುತ್ತಿದ್ದಾರೆ. ದಿಶಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಭಾವಚಿತ್ರಗಳನ್ನೂ ಹಂಚಿಕೊಂಡಿದ್ದಾಳೆ. ಈ ಭಾವಚಿತ್ರದಲ್ಲಿ ದಿಶಾ ಹಳದಿ ಬಣ್ಣದ ಬಿಕಿನಿಯಲ್ಲಿ ಕಂಗೊಳಿಸುತ್ತಿದ್ದಾಳೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-  ಇಂಟರ್ನೆಟ್ ನಲ್ಲಿ ತಲ್ಲಣ ಸೃಷ್ಟಿಸಿದ Disha Pataniಯ ನೂತನ Photoಗಳು


ನೂತನ ಫೋಟೋ ಶೂಟ್ ನಡೆಸಿದ Disha Patani, Instagramನಲ್ಲಿ ಸುಂದರ ಭಾವಚಿತ್ರಗಳು Viral


ಸಲ್ಮಾನ್ ಖಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ದಿಶಾ
ದಿಶಾ ಪಾಟ್ನಿ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ನಟಿ ಸಲ್ಮಾನ್ ಖಾನ್ ಅಭಿನಯದ ಅವರ ಮುಂದಿನ ಚಿತ್ರ 'ರಾಧೇ' ಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಮೋಹಿತ್ ಸೂರಿ ನಿರ್ದೇಶನದ ಅವರ ಮುಂದಿನ ಚಿತ್ರ 'ಏಕ ವಿಲೆನ್ 2' ನಲ್ಲಿಯೂ ಕೂಡ ದಿಶಾ ಕಾರ್ಯನಿರ್ವಹಿಸುತ್ತಿದ್ದಾಳೆ. ಇದಕ್ಕೂ ಮೊದಲು ದಿಶಾ ಸಲ್ಮಾನ್ ಖಾನ್ ಅಭಿನಯದ ಚಿತ್ರ 'ಭಾರತ್' ನಲ್ಲಿ ಕಾಣಿಸಿಕೊಂಡಿದ್ದಳು.