ಬೆಂಗಳೂರು : ಮೋಹಕ ತಾರೆ, ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮತ್ತು ಕಿಚ್ಚ ಸುದೀಪ್‌ ಜೋಡಿಯ ಸಿನಿಮಾಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಅಲ್ಲದೆ, ಸುದೀಪ್‌ ಮತ್ತು ರಮ್ಯಾ ಕೂಡ ಒಳ್ಳೆಯ ಸ್ನೇಹಿತರು. ಬಹಳ ದಿನಗಳ ನಂತರ ದಿವ್ಯಾ ಸ್ಪಂದನ ಕಿಚ್ಚನ ಜೊತೆ ಕ್ಯೂಟ್‌ ಆಗಿ ಜಗಳವಾಡಿರುವ ವಿಡಿಯೋ ಒಂದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ದೀಪು ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ದಿವ್ಯಾ ಸ್ಪಂದನ ಮತ್ತು ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ತೆರೆಯ ಮೇಲೆ ಮೋಡಿ ಮಾಡಿರುವ ಜೋಡಿಗಳಲ್ಲಿ ಒಬ್ಬರು. ʼಕಿಚ್ಚ ಹುಚ್ಚʼ, ʼಮುಸ್ಸಂಜೆ ಮಾತುʼ ಮತ್ತು ʼರಂಗ ಎಸ್‌ಎಸ್‌ಎಲ್‌ಸಿʼ ಚಿತ್ರಗಳಲ್ಲಿ ಇಬ್ಬರ ಕಾಂಬಿನೇಷನ್‌ ಸೂಪರ್‌ ಆಗಿ ವರ್ಕೌಟ್‌ ಆಗಿತ್ತು. ಅಭಿಮಾನಿಗಳಿಗೂ ಈ ಜೊಡಿ ಸಖತ್‌ ಇಷ್ಟವಾಗಿತ್ತು. ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ʼಜಸ್ಟ್ ಮಾತ್‌ ಮಾತಲ್ಲಿʼ ಸಿನಿಮಾದಲ್ಲಿ ಪ್ರೇಕ್ಷಕರನ್ನು ಮೆಚ್ಚುಗೆ ಗಳಿಸಿತ್ತು.


ಇದನ್ನೂ ಓದಿ: ನಟಿ ಮೇಲೆ ಕ್ಯಾಬ್‌ ಡ್ರೈವರ್‌ನಿಂದ ಲೈಂಗಿಕ ದೌರ್ಜನ್ಯ : ದೂರು ದಾಖಲು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.