Deepika Das Husband: ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ನಾಗಿಣಿ ಧಾರವಾಹಿ ಮೂಲಕ ಪರಿಚಯವಾದ ನಟಿ ದೀಪಿಕಾ ದಾಸ್‌ ಇದೇ ಮಾರ್ಚ್‌ 1 ರಂದು ಕಡಲ ತೀರದ ಬಳಿ ಮದುವೆಯಾದರು. ಈ ನಟಿ ತಮ್ಮ ಮದುವೆ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಸ್ವೀಟ್‌ ಆಗಿ ಶಾಕ್‌ ಕೊಟ್ಟು, ಕುತೂಹಲ ಕೆರಳುವಂತೆ ಮಾಡಿದರು. ಇದನ್ನು ನೋಡಿದಾಗ ನಟಿ ದೀಪಿಕಾ ನಿಜವಾಗಿಲು ಮದುವೆಯಾಗಿದ್ದಾರ ಅಥವಾ ಆಡ್‌ ಶೂಟ್‌ ಇರಬಹುದ ಎಂಬ ಪ್ರಶ್ನೆ ಕಾಡುವಂತೆ ಮಾಡಿತ್ತು.


COMMERCIAL BREAK
SCROLL TO CONTINUE READING

ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್‌ ನಿಜವಾಗಿಯೂ ಮದುವೆಯಾಗಿದ್ದಾರೆಂಬ ವಿಷಯವನ್ನು ಖಾತರಿಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಈ ನಟಿ ದೀಪಕ್‌ ಎಂಬುವರ ಜೊತೆಗೆ ಬಾಳ ಸಂಗಾತಿಯಾಗಿ ಹೊಸ ಜೀವನ ಪ್ರಾರಂಭ ಮಾಡಿದ್ದಾರೆ. ಮದುವೆಯ ವಿಷಯ ನಿಜ ಅಂತ ತಿಳಿಯುತ್ತಿದ್ದಂತೆ ಅಭಿಮಾನಿಗಳು ದೀಪಿಕಾ ದಾಸ್​ ಕೈ ಹಿಡಿದ ಹುಡುಗ ಯಾರು? ಇವರದ್ದು ಲವ್ ಮ್ಯಾರೇಜಾ ಅಥವಾ ಅರೇಂಜ್​ ಮ್ಯಾರೇಜಾ ಎಂದು ಪ್ರಶ್ನೆ ಹಾಕಿದ್ದಾರೆ.


ಬಿಡುಗಡೆಯಾಗಲು ರೆಡಿಯಾದ ಛಾಯಾ ಸಿನಿಮಾ!


ನಟಿ ದೀಪಿಕಾ ದಾಸ್‌ ತಾನು ಮದುವೆಯಾದ ಹುಡುಗ ಯಾರು ಎನ್ನುವ ವಿಚಾರವನ್ನು ಹೆಚ್ಚಾಗಿ ತಿಳಿಸಿಲ್ಲ. ಆದರೆ ದೀಪಿಕಾ ದಾಸ್‌ ಮದುವೆಯಾಗಿರುವ ದೀಪಕ್‌ ಎಂಬುವರು ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿಯಾಗಿದ್ದಾರೆ. ಈ ನಟಿ ಆಗಾಗ ದುಬೈಗೆ ಹೋಗ್ತಿದ್ದು ಹೆಚ್ಚಾಗಿ ಅಲ್ಲಿಯಾ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ದೀಪಿಕಾ ದುಬೈನಲ್ಲಿರುವ ಹುಡುಗನ  ಜೊತೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ದೀಪಿಕಾ ದಾಸ್‌ ತಮ್ಮ ಆಸೆಯಂತೆ ಗೋವಾದಲ್ಲಿ ಬೀಜ್​ ಎದುರು ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡಿದ್ದು, ಅದರಂತೆ ಅದ್ಧೂರಿಯಾಗಿ ಸಿದ್ಧಕೊಂಡಿದ್ದ ಮಂಟಪದಲ್ಲಿ ಈ ನಟಿಯ ವಿವಾಹ​ ನಡೆದಿದೆ. ದೀಪಿಕಾ ದಾಸ್‌ ಹಾಗೂ ದೀಪಕ್‌  ಮದುವೆಯ ಫೋಟೋಗಳನ್ನು ನೋಡಿದ ಫ್ಯಾನ್ಸ್‌ ಈ ಜೋಡಿಗೆ ಶುಭ ಕೋರಿದ್ದಾರೆ. ಇನ್ನೂ ಈ ಫೋಟೋಗಳನೆಲ್ಲಾ ಗಮನಿಸಿದರೇ ತಮ್ಮ ಮದುವೆ ಯಾವುದೇ ಸೆಲೆಬ್ರಿಟಿ ಹಾಗೂ ಸಿನಿ ಸ್ನೇಹಿತರನ್ನು ಆಹ್ವಾನಿಸಿಲ್ಲ ಅಂತ ಅನಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.