ಬೆಂಗಳೂರು: 'ಕೆಜಿಎಫ್‌-1' ಆಗಲಿ ಅಥವಾ 'ಕೆಜಿಎಫ್‌-2' ಆಗಲಿ, 'ಕೆಜಿಎಫ್‌' ಅನ್ನೋ ಹೆಸರೇ ಕರೆಂಟ್‌ ಇದ್ದಂಗೆ. ಯಾಕಂದ್ರೆ 'ಕೆಜಿಎಫ್‌-1' ರಿಲೀಸ್‌ ಆದ ಸಂದರ್ಭದಲ್ಲಿ ಜಗತ್ತೇ ಒಂದು ಕ್ಷಣ ಬೆರಗಾಗಿತ್ತು. ಇದಾದ ನಂತರ 'ಕೆಜಿಎಫ್‌'‌ ಚಾಪ್ಟರ್‌ 2 ನೋಡಿ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ರಾಕಿಭಾಯ್‌ಗೆ ಜೈ ಅಂದಿದ್ದಾರೆ. ಆದರೆ ಈ ಹೊತ್ತಲ್ಲೇ 'ಕೆಜಿಎಫ್‌'‌ ಚಾಪ್ಟರ್‌ 2 ಶೂಟಿಂಗ್‌  ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿದ್ದು, ಯಶ್‌ ಅಭಿಮಾನಿಗಳು ಮತ್ತಷ್ಟು ಖುಷ್‌ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಅಂದಹಾಗೆ 'ಕೆಜಿಎಫ್‌-2' ಸಿನಿಮಾದ ಹೈಲೈಟ್ಸ್‌ ಎಂದರೆ ಅದು ಕಾರ್‌ ಚೇಸ್‌ ಸೀನ್.‌ ಈ ದೃಶ್ಯ ಇಡೀ ಸಿನಿಮಾಗೆ ಒಂದು ಭೂಷಣ ಎನ್ನಬಹುದು. ಅಕ್ಕಪಕ್ಕ ಮರಳು ತುಂಬಿದ ಜಾಗದಲ್ಲಿ, ಟಾರ್‌ ರಸ್ತೆ ಮೇಲೆ ನಡೆಯುವ ಕಾರ್‌ ಕಾಳಗ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಆದರೆ ಈ ಸೀನ್‌ ಕುರಿತು ಇದೀಗ ತುಂಬಾ ಅಂದ್ರೆ ತುಂಬಾ ಇಂಟರೆಸ್ಟಿಂಗ್‌ ಮಾಹಿತಿ ಸಿಕ್ಕಿದೆ.


ಕಾರ್‌ ಚೇಸ್‌ ಸೀನ್‌ ಶೂಟ್‌ ಮಾಡಿ, ನಂತರ ವಿಎಫ್‌ಎಕ್ಸ್‌ ಟೆಕ್ನಾಲಜಿಯನ್ನ ಬಳಸಿ ಮರಳುಗಾಡನ್ನೇ ಸೃಷ್ಟಿಸಲಾಗಿತ್ತು. ಆದರೆ ಪ್ರೇಕ್ಷಕರಿಗೆ ಇದು ಎಲ್ಲೂ ಗೊತ್ತೇ ಆಗಲ್ಲ. ಅಷ್ಟರಮಟ್ಟಿಗೆ 'ಕೆಜಿಎಫ್‌-2' ತಂಡದ ವಿಎಫ್‌ಎಕ್ಸ್‌ ತಂಡ ಹಾಗೂ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ವರ್ಕ್‌ ಮಾಡಿದ್ದರು. ಇದೀಗ ಅವರ ಶ್ರಮದ ಸಾಮರ್ಥ್ಯ ಏನು ಎಂಬುದನ್ನ ಈ ಫೋಟೋ ರಿವೀಲ್‌ ಮಾಡಿದ್ದು, ಇಡೀ ಜಗತ್ತು ಮತ್ತೆ ಶಾಕ್‌ ಆಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.