‘ಡಿ’ ಬಾಸ್ ಅಭಿಮಾನಿಗಳಿಗೆ ಡಬಲ್ ಧಮಾಖ..! ಏನೇನ್ ಸರ್ಪ್ರೈಸ್ ಗೊತ್ತಾ..?
ಕೊರೊನಾ ಮತ್ತು ದಿ.ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನದಿಂದಾಗಿ ದರ್ಶನ್ ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಆಕ್ಷನ್ ಹೀರೋ, ಅಭಿಮಾನಿಗಳ ಪಾಲಿನ ‘ಡಿ’ ಬಾಸ್‌ಗೆ ಇಂದು 45ನೇ ಹುಟ್ಟುಹಬ್ಬದ(Challenging Star Darshan BirthDay) ಸಂಭ್ರಮ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಸಂಭ್ರಮದಿಂದ ವಿಶ್ ಮಾಡುತ್ತಿದ್ದಾರೆ. ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕೂಡ ದರ್ಶನ್‌ಗೆ ಶುಭಕೋರಿದ್ದಾರೆ. ಈ ಹೊತ್ತಲ್ಲೇ ಅಭಿಮಾನಿಗಳಿಗೆ ದರ್ಶನ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಹೌದು, ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಕಾಯುತ್ತಿದ್ದ ‘ಡಿ’ ಬಾಸ್(Challenging Star Darshan)ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಸಿಕ್ಕಿದೆ. ಒಂದು ಕಡೆ ‘ಕ್ರಾಂತಿ’ ಸಿನಿಮಾದ ಫಸ್ಟ್ ಲುಕ್(Kranti First Look) ಇವತ್ತು ರಿವೀಲ್ ಆಗಿದ್ದರೆ, ಮತ್ತೊಂದೆಡೆ ದರ್ಶನ್‌ರ 56ನೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
ಅಲ್ಲು ಅರ್ಜುನ್ ಮೇಲಿನ ಪ್ರೀತಿಗೆ ಅಭಿಮಾನಿ ತೋರಿದ ವಿಶೇಷ ಅಭಿಮಾನ
‘ಡಿ’ ಬಾಸ್ ಫ್ಯಾನ್ಸ್ ಫಿದಾ
‘ಕ್ರಾಂತಿ’ ಸಿನಿಮಾದ ಫಸ್ಟ್ ಲುಕ್(Darshan’s First Look)ನಲ್ಲಿ ಸೂಟ್ ತೊಟ್ಟು, ಬೈಕ್ ಹಿಡಿದು ಎಳೆಯುತ್ತಿರುವ ದರ್ಶನ್ ಲುಕ್ ರಗಡ್ ಆಗಿದೆ. ದರ್ಶನ್‌ರನ್ನು ಈ ಲುಕ್‌ನಲ್ಲಿ ಕಂಡು ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಹಾಗೇ ರಾಕ್‌ಲೈನ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಘೋಷಣೆ ಆಗಿರುವ ದರ್ಶನ್‌ರ 56ನೇ ಚಿತ್ರದ ಪೋಸ್ಟರ್ ಕೂಡ ಸಖತ್ ಆಗಿದೆ.
ಕೊರೊನಾ ಮತ್ತು ದಿ.ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅಕಾಲಿಕ ನಿಧನದಿಂದಾಗಿ ದರ್ಶನ್ ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು ಅಭಿಮಾನಿಗಳಲ್ಲಿ ದರ್ಶನ್ ಮನವಿ ಮಾಡಿದ್ದರು.
ಇದನ್ನೂ ಓದಿ: ಈ ಕಾರಣದಿಂದಲೇ ಮೈ ತುಂಬಾ ಬಂಗಾರ ಧರಿಸುತ್ತಿದ್ದರಂತೆ ಬಪ್ಪಿ ಲಾಹಿರಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.