ನವದೆಹಲಿ : ಖ್ಯಾತ ಸಂಗೀತಗಾರ ಹಾಗೂ ಗಾಯಕ ಬಪ್ಪಿ ಲಾಹಿರಿ (Bappi Lahiri) ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಜಗತ್ತನ್ನು ತೊರೆದ ಕೆಲವೇ ದಿನಗಳಲ್ಲಿ ಸಂಗೀತ ಪ್ರೇಮಿಗಳಿಗೆ ಇದು ಎರಡನೇ ದೊಡ್ಡ ಆಘಾತವಾಗಿದೆ. ಬಪ್ಪಿ ಲಾಹಿರಿ ಹೆಸರು ಕೇಳಿದ ತಕ್ಷಣ, ಡಿಸ್ಕೋ ಮ್ಯೂಸಿಕ್ ಜೊತೆಗೆ, ಅವರ ವಿಭಿನ್ನ ರೀತಿಯ ಲುಕ್ ಕಣ್ಣ ಮುಂದೆ ಬರುತ್ತದೆ.
ಬಪ್ಪಿ ಲಾಹಿರಿ (Bappi Lahiri) ಯಾವಾಗಲೂ ಮೈ ತುಂಬಾ ಚಿನ್ನ ಬಳಸುತ್ತಿದ್ದರು. ಎಲ್ಲೇ ಹೋದರೂ ಬಪ್ಪಿ ಲಾಹಿರಿ, ಚಿನ್ನ ಇಲ್ಲದೆ ಹೋಗುತ್ತಲೇ ಇರಲಿಲ್ಲ. ಹಾಗಾಗಿ ಬಪ್ಪಿ ಲಾಹಿರಿ (Bappi Lahiri Gold) ಅಂದಾಕ್ಷಣ ಮೈ ತುಂಬಾ ಚಿನ್ನದ ಒಡವೆ ಧರಿಸಿರುವ ಅವರ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಬಪ್ಪಿ ಲಾಹಿರಿಯವರು ಈ ರೀತಿ ಚಿನ್ನ ಧರಿಸುವ ವಿಚಾರ ಸದಾ ಚರ್ಚೆಗೆ ಕಾರಣವಾಗಿತ್ತು ಮಾತ್ರವಲ್ಲ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : Bachchan Pandey: ಬಚ್ಚನ್ ಪಾಂಡೆ ಹೊಸ ಪೋಸ್ಟರ್ ರಿಲೀಸ್.. ಅಕ್ಷಯ್ ಕುಮಾರ್ ಲುಕ್ ಗೆ ಫ್ಯಾನ್ಸ್ ಫಿದಾ
ಬಪ್ಪಿ ಲಾಹಿರಿಗೆ ಚಿನ್ನ ಅದೃಷ್ಟ :
ಬಪ್ಪಿ ಲಾಹಿರಿ ಅವರು ಸಾಕಷ್ಟು ಚಿನ್ನವನ್ನು ಧರಿಸುವುದರ ಹಿಂದೆ ಒಂದು ಕಾರಣವಿದೆ. ಈ ವಿಷಯವನ್ನು ಬಪ್ಪಿ ಲಾಹಿರಿಯವರೇ ಹೇಳಿದ್ದರು. ಚಿನ್ನ ನನಗೆ ಅದೃಷ್ಟ ಎಂದು ಹಿಂದೆ ಅವರು ಹೇಳಿದ್ದರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರವಾಗಿರುತ್ತದೆಯಂತೆ. ಚಿನ್ನಾಭರಣಗಳನ್ನು ಧರಿಸುವುದರಿಂದ ಅವರ ಭವಿಷ್ಯವನ್ನು ಬದಲಾಯಿಸಬಹುದು. ಈ ರಾಶಿಗಳಲ್ಲಿ ಬಪ್ಪಿ ಲಾಹಿರಿಯ ರಾಶಿ ಧನು ರಾಶಿ (Sagitarius) ಕೂಡ ಸೇರಿದೆ. ಈ ಕಾರಣದಿಂದಲೇ ಅವರು ಸದಾ ಚಿನ್ನವನ್ನು ಧರಿಸುತ್ತಿದ್ದರು ಎನ್ನಲಾಗಿದೆ.
ಬಪ್ಪಿ ಲಾಹಿರಿ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ (Bappi Lahiri Passed Away). ಮಾಹಿತಿಯ ಪ್ರಕಾರ, ಬಪ್ಪಿ ಲಾಹಿರಿ ನಿನ್ನೆ ರಾತ್ರಿ ಮನೆಯಲ್ಲಿ ಇದ್ದಾಗ ಅಸ್ವಸ್ಥರಾಗಿದ್ದರು, ನಂತರ ಅವರನ್ನು ಜುಹುನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇದಕ್ಕೂ ಮೊದಲು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಸೋಮವಾರ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ, ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು.
ಇದನ್ನೂ ಓದಿ : PUSHPA SAREE:ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ.. ಹೆಂಗಳೆಯರ ಮನ ಗೆಲ್ಲುತ್ತಾ ಪುಷ್ಪ ಸಾರೀ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.