ಹೇಗಿತ್ತು ಗೊತ್ತಾ ಕೃಷ್ಣ-ಮಿಲನಾ ಮದುವೆ ವಾರ್ಷಿಕೋತ್ಸವ ಸಂಭ್ರಮ..?

ಒಂದು ಕಡೆ ‌'ಲವ್‌ ಮಾಕ್ಟೇಲ್-2' ಸಿನಿಮಾ ಗೆಲುವಿನ ನಗೆ ಬೀರಿ,ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.ಮತ್ತೊಂದು ಕಡೆ ಕೃಷ್ಣ ಹಾಗೂ ಮಿಲನಾ ಜೋಡಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಆ ಸಂತಸವನ್ನ ಇಂದು ಈ ಜೋಡಿ ಆಚರಿಸಿಕೊಂಡಿದೆ.

Written by - Malathesha M | Last Updated : Feb 14, 2022, 08:36 PM IST
  • ಒಂದು ಕಡೆ ‌'ಲವ್‌ ಮಾಕ್ಟೇಲ್-2' ಸಿನಿಮಾ ಗೆಲುವಿನ ನಗೆ ಬೀರಿ,ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.ಮತ್ತೊಂದು ಕಡೆ ಕೃಷ್ಣ ಹಾಗೂ ಮಿಲನಾ ಜೋಡಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಆ ಸಂತಸವನ್ನ ಇಂದು ಈ ಜೋಡಿ ಆಚರಿಸಿಕೊಂಡಿದೆ.
ಹೇಗಿತ್ತು ಗೊತ್ತಾ ಕೃಷ್ಣ-ಮಿಲನಾ ಮದುವೆ ವಾರ್ಷಿಕೋತ್ಸವ ಸಂಭ್ರಮ..? title=

ಬೆಂಗಳೂರು: ಒಂದು ಕಡೆ ‌'ಲವ್‌ ಮಾಕ್ಟೇಲ್-2' ಸಿನಿಮಾ ಗೆಲುವಿನ ನಗೆ ಬೀರಿ,ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.ಮತ್ತೊಂದು ಕಡೆ ಕೃಷ್ಣ ಹಾಗೂ ಮಿಲನಾ ಜೋಡಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಆ ಸಂತಸವನ್ನ ಇಂದು ಈ ಜೋಡಿ ಆಚರಿಸಿಕೊಂಡಿದೆ.

ಅಂದಹಾಗೆ ಬಹುಕಾಲದ ಪ್ರೀತಿಗೆ ಮದುವೆಯ ರೂಪ ಕೊಟ್ಟಿದ್ದ ಕೃಷ್ಣ-ಮಿಲನಾ ಕಳೆದ ವರ್ಷ ಸಪ್ತಪದಿ ತುಳಿದಿದ್ದರು. 'ಲವ್‌ ಮಾಕ್ಟೇಲ್-1' ಹಿಟ್‌ ಆಗುತ್ತಿದ್ದಂತೆ ಇಬ್ಬರ ಬದುಕು ದೊಡ್ಡ ತಿರುವು ಪಡೆದುಕೊಂಡಿತ್ತು. 'ಲವ್‌ ಮಾಕ್ಟೇಲ್-1'ಗೆ ಬಂಡವಾಳ ಹೂಡಿ, ನಟನೆ ಮಾಡಿ ಸೈ ಎನಿಸಿಕೊಂಡ ಕೃಷ್ಣ-ಮಿಲನಾ ಹೊಸ ಬದುಕು ಆರಂಭಿಸಿದ್ದರು.

ಇದನ್ನೂ ಓದಿ: Zameer Ahmed : ಕೆಪಿಸಿಸಿಯಿಂದ ಶಾಸಕ ಜಮೀರ್ ಅಹಮದ್ ಗೆ ಬಿಗ್ ಶಾಕ್!

ಮದುವೆಯ ಈ ಬಂಧ..!

2021ರ ಫೆಬ್ರವರಿ 14ರಂದು ವಿವಾಹವಾಗಿದ್ದ ಕೃಷ್ಣ-ಮಿಲನಾ ಇಂದು ತಮ್ಮ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ 'ಲವ್‌ ಮಾಕ್ಟೇಲ್-2' ರಿಲೀಸ್‌ ಆಗಿ ಯಶಸ್ಸಿನ ಓಟ ಮುಂದುವರಿಸಿದೆ. ಈ ಹೊತ್ತಲ್ಲೇ ಮದುವೆ ವಾರ್ಷಿಕೋತ್ಸವ ಡಬಲ್‌ ಧಮಾಕ ನೀಡಿದೆ.

ನಟ ಡಾರ್ಲಿಂಗ್‌ ಕೃಷ್ಣ ಲವ್‌ ಮಾಕ್ಟೇ-3 ಬಗ್ಗೆಯೂ ಹಿಂಟ್‌ ಕೊಟ್ಟಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. 'ಲವ್‌ ಮಾಕ್ಟೇಲ್-2' ಅಭಿಮಾನಿಗಳಿಗೆ ಹಿಡಿಸಿದ್ದು, ಮತ್ತೊಂದು ಭಾಗ ಬಂದರೂ ಕಾದು ನೋಡುವ ಕುತೂಹಲ ಅಭಿಮಾನಿ ಬಳಗದ್ದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News