ನವದೆಹಲಿ: Drugs Case - ದಿವಂಗತ ಬಾಲಿವುಡ್ (Bollywood Latest News) ನಟ ಸುಶಾಂತ್ ಸಿಂಗ್ ರಾಜ್ಪುತ್ ಸಾವು (Sushant Singh Rajput Death) ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಂಡ ಸುಶಾಂತ್ ಅವರ ಆಪ್ತ ಸ್ನೇಹಿತ ಸಿದ್ಧಾರ್ಥ್ ಪಿಠಾಣಿಯನ್ನು (Sidharth Pithani)  ಬಂಧಿಸಿದ್ದಾರೆ. ಪಿಠಾಣಿಯನ್ನು ಹೈದ್ರಾಬಾದ್ ನಲ್ಲಿ ಬಂಧಿಸಿರುವ NCB ತಂಡ ಬಳಿಕ ಆತನನ್ನು ಮುಂಬೈಗೆ ಕರೆ ತಂದಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕಳೆದ ವಾರವಷ್ಟೇ ಸಿದ್ಧಾರ್ಥ್ ಪಿಠಾಣಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಆತನ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಮಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದವು. ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಸಾವಿನ  ಬಳಿಕ ಆತನ ಜೀವನಕ್ಕೆ ಸಂಬಂಧಿಸಿದ ಹಲವು ಜನರ ಹೆಸರು ಮಾಧ್ಯಮಗಳಲ್ಲಿ ಕೇಳಿಬಂದಿದ್ದವು. ಈ ಎಲ್ಲ ಹೆಸರುಗಳ ಪೈಕಿ ಸಿದ್ಧಾರ್ಥ್ ಪಿಠಾಣಿ ಹೆಸರು ಕೂಡ ಒಂದಾಗಿತ್ತು. ಸುಶಾಂತ್ ಸಾವಿನ ಬಳಿಕ ಅವರ ಡೆಡ್ ಬಾಡಿಯನ್ನು ಮೊಟ್ಟಮೊದಲ ಬಾರಿಗೆ ಸಿದ್ಧಾರ್ಥ್ ಗಮನಿಸಿದ್ದ ಎನ್ನಲಾಗುತ್ತಿದೆ. ಆ ಬಳಿಕ ಆತ ಪೊಲೀಸರಿಗೆ ಆಸ್ಪತ್ರೆಗೆ ಫೋನ್ ಕೂಡ ಮಾಡಿದ್ದ ಎನ್ನಲಾಗುತ್ತದೆ.


ಇದನ್ನೂ ಓದಿ- ಹೊಸ ಬದಲಾವಣೆ, ಹೊಸ ಮುಖಗಳೊಂದಿಗೆ ಮತ್ತೆ ಬರುತ್ತಿದೆ The Kapil Sharma Show


ಸುಶಾಂತ್ ಸಿಂಗ್ ರಾಜ್ಪುತ್ ಸಾವಿನ ಸಂಪೂರ್ಣ ಪ್ರಕರಣದಲ್ಲಿ (Sushant Singh Rajput Death Case) ಸಿಧಾರ್ಥ್ ಪಿಠಾಣಿ (Siddharth Pithani) ಕೂಡ ಶಾಮೀಲಾಗಿದ್ದಾನೆ ಎಂಬುದು ಅಭಿಮಾನಿಗಳ ಅನಿಸಿಕೆ ಹಾಗೂ ಶೀಘ್ರದಲ್ಲಿಯೇ ಆತನ ಬಂಧನದ ಕಾಲ ಕೂಡ ಕೂಡಿಬರಲಿದೆ ಎನ್ನಲಾಗುತ್ತಿತ್ತು. ಆದರೆ, ಇವೆಲ್ಲವೂಗಳ ಹೊರತಾಗಿ ಸಿದ್ಧಾರ್ಥ್ ಪಿಠಾಣಿ ತನ್ನ ವುಡ್ ಬಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ. ಭಾವಚಿತ್ರಗಳನ್ನು ಹಂಚಿಕೊಂಡ ಆತ 'ಜಸ್ಟ್ ಎಂಗೆಜ್ದ್', 'ಹೊಸ ಪ್ರಯಾಣದ ಆರಂಭ' ಎಂದು ಬರೆದಿಕೊಂಡಿದ್ದರು. ಆದರೆ, ಸುಶಾಂತ್ ಸಿಂಗ್ ರಾಜ್ಪುತ್ ಸ್ನೇಹಿತರು ಮಾತ್ರ ಸಿದ್ಧಾರ್ಥ್ ಖುಷಿಯಿಂದ ಖುಷಿಯಾಗಿರಲಿಲ್ಲ. ಆತನ ಫೋಟೋಗಳಿಗೆ ಕಾಮೆಂಟ್ ಮಾಡಿದ ಕೆಲವರು 'ಇನ್ನೂ ತನಿಖೆ ಪೂರ್ಣಗೊಂಡಿಲ್ಲ ಸ್ನೇಹಿತ, ನಿನ್ನ ನಂಬರ್ ಬೇಗನೆ ಬರಲಿದೆ' ಎಂದು ಪ್ರತಿಕ್ರಿಯಿಸಿದ್ದರು.


ಇದನ್ನೂ ಓದಿ- Viral Video: ಇದ್ದಕ್ಕಿದ್ದಂತೆ ಕುದುರೆಯಾದ ತಾಯಿ, ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆದ 10 ಸೆಕೆಂಡ್ ಗಳ ವಿಡಿಯೋ


ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಮತ್ತೋರ್ವ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ತನ್ನ ಗರ್ಲ್ ಫ್ರೆಂಡ್ ಜೊತೆಗೆ ವಿವಾಹವಾಗಿದ್ದಾನೆ. ತನ್ನ ಅಧಿಕೃತ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸ್ಯಾಮ್ಯುಯೇಲ್ ಈ ಕುರಿತು ತನ್ನ ಒಂದು ಫೋಟೋ ಕೂಡ ಹಂಚಿಕೊಂಡಿದ್ದಾನೆ. ಫೋಟೋಗೆ ಅಡಿಬರಹ ಬರೆದಿದ್ದ ಸ್ಯಾಮ್ಯುಯೆಲ್, 'ಒಂದು ಉತ್ತಮ ಮದುವೆಗಿಂತ ಹೆಚ್ಚು ಪ್ರೀತಿಯ, ಸ್ನೇಹಪರ ಮತ್ತು ಆಕರ್ಷಕ ಸಂಬಂಧ ಮತ್ತೊಂದಿಲ್ಲ' ಎಂದು ಬರೆದಿದ್ದ.


ಇದನ್ನೂ ಓದಿ-Sushmita Sen Viral Instagram Post: ತನ್ನ ತಪ್ಪುಗಳನ್ನು ಒಪ್ಪಿಕೊಂಡ Sushmita Sen ಹೇಳಿದ್ದೇನು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.