ಹಾಲಿವುಡ್ ಗೆ ಎಂಟ್ರಿ ಕೊಟ್ಟ ಬಾಹುಬಲಿ..! 'Mission Impossible 7' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ ?

ಪ್ರಭಾಸ್ ಶೀಘ್ರದಲ್ಲೇ ಹಾಲಿವುಡ್ ಚಿತ್ರ ಮಿಷನ್ ಇಂಪಾಸಿಬಲ್ 7 ನಲ್ಲಿ  ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.   

Written by - Ranjitha R K | Last Updated : May 26, 2021, 03:22 PM IST
  • ಹಾಲಿವುಡ್ ಚಿತ್ರದಲ್ಲಿ ನಟಿಸಲಿರುವ ಪ್ರಭಾಸ್
  • 'Mission Impossible 7' ನಲ್ಲಿ ಕಾಣಿಸಿಕೊಳ್ಳಲಿರುವ ನಟ
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ವರದಿ
ಹಾಲಿವುಡ್ ಗೆ ಎಂಟ್ರಿ ಕೊಟ್ಟ ಬಾಹುಬಲಿ..! 'Mission Impossible 7' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ ? title=
ಹಾಲಿವುಡ್ ಚಿತ್ರದಲ್ಲಿ ನಟಿಸಲಿರುವ ಪ್ರಭಾಸ್ (photo india.com)

ನವದೆಹಲಿ : ಟಾಲಿವುಡ್ ಸೂಪರ್ ಸ್ಟಾರ್ ನಟ ಪ್ರಭಾಸ್ (Prabhas) ತಮ್ಮ ಅಮೋಘ ನಟನೆಯ ಕಾರಣದಿಂದ ಇಡೀ ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದಾರೆ. ತಮ್ಮ ನಟನೆಯಿಂದ ಲಕ್ಷಾಂತರ ಹೃದಯಗಳನ್ನುಗೆದ್ದಿರುವ ಪ್ರಭಾಸ್, ಬಾಹುಬಲಿ ಚಿತ್ರದಿಂದಾಗಿ (Bahubali) , ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇದೀಗ ಪ್ರಭಾಸ್ ದಕ್ಷಿಣದ ಹಾಲಿವುಡ್ ನಲ್ಲಿಯೂ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಶೀಘ್ರವೇ ಪ್ರಭಾಸ್ 'Mission Impossible 7' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ವರದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ : 
ಪ್ರಭಾಸ್ (Prabhas) ಶೀಘ್ರದಲ್ಲೇ ಹಾಲಿವುಡ್ ಚಿತ್ರ ಮಿಷನ್ ಇಂಪಾಸಿಬಲ್ 7 ನಲ್ಲಿ (Mission Impossible 7) ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social media) ಬಹಳ ವೈರಲ್ ಆಗುತ್ತಿದೆ. ಈ ಸುದ್ದಿಯಿಂದ ಪ್ರಭಾಸ್ ಅಭಿಮಾನಿಗಳು ಬಹಳ ಸಂತೋಷಗೊಂಡಿದ್ದಾರೆ. ಸೂಪರ್‌ಹಿಟ್ ಫ್ರ್ಯಾಂಚೈಸ್ 'ಮಿಷನ್ ಇಂಪಾಸಿಬಲ್' ನ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಕ್ರಿಸ್ಟೋಫರ್ ಮೆಕ್‌ಕ್ವಾರಿ, (Christopher Mcquarrie) ಚಿತ್ರದ 7ನೇ ಪಾರ್ಟ್ ಗಾಗಿ ಪ್ರಭಾಸ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ  ಪ್ರಭಾಸ್ ಅವರಿಗೆ ಪ್ರಮುಖ ಪಾತ್ರ ಸಿಗಲಿದೆ ಎನ್ನಲಾಗಿದೆ. 

ಇದನ್ನೂ ಓದಿ : Priyanka Chopra: ಯಶಸ್ವೀ ವಿವಾಹದ ರಹಸ್ಯ ಬಹಿರಂಗಪಡಿಸಿದ ದೇಸಿ ಗರ್ಲ್

ಸುದ್ದಿಯ ಪ್ರಕಾರ, ಕ್ರಿಸ್ಟೋಫರ್ ಮ್ಯಾಕ್ವಾರಿ ಮತ್ತು ಪ್ರಭಾಸ್ ಇಬ್ಬರೂ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ  ಲಭ್ಯವಾಗಿಲ್ಲ. ಆದರೆ ಈ ಸುದ್ದಿಯಿಂದ ಪ್ರಭಾಸ್ ಅಭಿಮಾನಿಗಳು (Prabhas fans) ಸಂತೋಷಗೊಂಡಿದ್ದಾರೆ.

ಇದನ್ನೂ ಓದಿ : BM Krishne Gowda : ಮತ್ತೊಬ್ಬ ಸ್ಯಾಂಡಲ್ ವುಡ್ ಹಿರಿಯ ನಟನನ್ನ ಬಲಿ ಪಡೆದ ಕೊರೋನಾ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News