ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ ( Drugs Mafia)ದಲ್ಲಿ ಭಾಗಿಯಾಗಿದ್ದಾರೆಂಬ ಹಿನ್ನೆಲೆಯಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಅವರ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ರಾಗಿಣಿ ಅವರ ಇಂದಿರಾನಗರದ ಮನೆ ಮತ್ತು ಇಂದಿರಾನಗರದ ಖಾಸಗಿ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿರುವ ಡ್ರಗ್ಸ್ ಮಾಫಿಯಾ ( Drugs Mafia) ವಿಚಾರಣೆ ನಡೆಸಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಎರಡೂ ಮನೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ತಪಾಸಣೆ ಬಳಿಕ ರಾಗಿಣಿ ದ್ವಿವೇದಿ (Ragini Dwivedi) ಅವರನ್ನು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.


ಎರಡೂ ಮನೆಯ ಮೂಲೆ ಮೂಲೆಗಳಲ್ಲೂ ಶೋಧ ನಡೆಸುತ್ತಿರುವ ಪೊಲೀಸರು, ರಾಗಿಣಿ ಅವರನ್ನು ಅಪಾರ್ಟ್ ಮೆಂಟಿನ 10ನೇ ಮಹಡಿಯ ಪೆಂಟ್ ಹೌಸ್ ಗೆ‌  ಕರೆದೊಯ್ದು ತಪಾಸಣೆ ನಡೆಸಿದ್ದಾರೆ‌. ಅದೇ ಅಪಾರ್ಟ್ ಮೆಂಟಿನ ಒಂದನೆ ಮಹಡಿಯಲ್ಲಿ ಅವರ ತಂದೆ, ತಾಯಿ ಮತ್ತು ತಮ್ಮ ಇದ್ದಾರೆ‌. ಮೂರು ಗಂಟೆಗಳಿಂದ ನಿರಂತರವಾಗಿ ಇನ್ಸ್ ಪೆಕ್ಟರ್ ಅಂಜುಮಾಲ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.


ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತ: ಬಿಜೆಪಿ ಕುಮ್ಮಕ್ಕಿನಿಂದಲೇ ನಡೆಯುತ್ತಿದೆಯಾ ಡ್ರಗ್ಸ್ ಧಂಧೆ?

ರಾಗಿಣಿ ಅವರ ಕೊಠಡಿಯಲ್ಲಿ ಕಬೋರ್ಡ್ ಸೇರಿ ಪ್ರತಿ ವಸ್ತುಗಳ ಪರಿಶೀಲನೆ ನಡೆಯುತ್ತಿದೆ. ಈ ವೇಳೆ ರಾಗಿಣಿ ಪರ ವಕೀಲರು ಆಗಮಿಸಿದರಾದರೂ ಅವರಿಗೆ ಪ್ಲಾಟ್ ಒಳಗೆ ಹೋಗಲು ಪೊಲೀಸರು ನಿರಾಕರಿಸಿದರು.


ರಾಗಿಣಿ‌ ದ್ವಿವೇದಿಯ ಗೆಳೆಯ ರವಿಶಂಕರ್ ವಿಚಾರಣೆ ವೇಳೆ 'ತಾನು ಮತ್ತು ರಾಗಿಣಿ ದ್ವಿವೇದಿ ಲೀವಿಂಗ್ ಟುಗೆದರ್ ಶಿಪ್ ನಲ್ಲಿದ್ದೇವೆ. ರಾಗಿಣಿಗಾಗಿ ತಾನು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಕೆಲವೊಮ್ಮೆ ಒಂದೇ ದಿನ 1ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದೇನೆ' ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಇದೇ ಹಿನ್ನಲೆಯಲ್ಲೇ ರಾಗಿಣಿ ದ್ವಿವೇದಿಗೆ ಕಾಲವಕಾಶ‌ ಕೊಡದೆ ಇಂದೇ (ಸೆಪ್ಟೆಂಬರ್ 4) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಇಂದು ಮುಂಜಾನೆಯೇ ರಾಗಿಣಿ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.


ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಧಂಧೆ ಬಗ್ಗೆ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕು ನಟಿ ರಾಗಿಣಿ


ರವಿಶಂಕರ್  ಬೆಂಗಳೂರಿನ ಜಯನಗರದ ಆರ್ ಟಿಓ (RTO) ಕಚೇರಿಯ ಸಿಬ್ಬಂದಿಯಾಗಿದ್ದಾರೆ. ಹಾಗಾಗಿ ಅವರಿಗೆ ಬರುವ ಸಂಬಳದಲ್ಲಿ ರಾಗಿಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಿಸಿಬಿ ಅಧಿಕಾರಿಗಳನ್ನು ಕಾಡುತ್ತಿದೆ. ಮುಂದೆ ಇದರ ಬಗ್ಗೆ ಕೂಡ ವಿಚಾರಣೆ ನಡೆಯಲಿದೆ.


ನಿನ್ನೆ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬರುವಂತೆ ನಟಿ ರಾಗಿಣಿ ದ್ವಿವೇದಿಗೆ ನೊಟೀಸ್ ನೀಡಲಾಗಿತ್ತು.‌ ತಮ್ಮ ವಕೀಲರನ್ನು ಸಿಸಿಬಿ ಕಚೇರಿಗೆ ಕಳುಹಿಸಿದ್ದ ರಾಗಿಣಿ ದ್ವಿವೇದಿ (Ragini Dwivedi) 'ನನಗೆ ನೊಟೀಸ್ ಬಂದಿದೆ, ಆದರೆ ಬಹಳ‌ ಕಡಿಮೆ ಸಮಯ ಇದೆ. 


ಜೊತೆಗೆ ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ‌ಮುಂದಿನ ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ' ಎಂದು ಮನವಿ ಮಾಡಿದ್ದರು. ಬಳಿಕ‌ ಇದನ್ನು ಟ್ವೀಟ್ ಮುಖಾಂತರವೂ ತಿಳಿಸಿದ್ದರು. ಆದರೆ ರಾಗಿಣಿ ದ್ವಿವೇದಿಗೆ ಸೋಮವಾರದವರೆಗೆ ಕಾಲವಕಾಶ ನೀಡದ ಸಿಸಿಬಿ ಪೊಲೀಸರು ಇಂದೇ ವಿಚಾರಣೆಗೆ ಹಾಜರಾಗಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದರು.‌ ಈಗ ಮನೆ ಮೇಲೆ ದಾಳಿ ಮಾಡಿ‌ ಪರಿಶೀಲಿಸಲಾಗುತ್ತಿದೆ. ಬಳಿಕ ರಾಗಿಣಿ ದ್ವಿವೇದಿ ಅವರನ್ನು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.