ತೆಲುಗು ನೆಲದಲ್ಲಿ ಕರಿಚಿರತೆಯ ಅಬ್ಬರ : ಪ್ರತಾಪ್ ರೆಡ್ಡಿಯಾಗಿ ಘರ್ಜಿಸುತ್ತಿದೆ ಒಂಟಿ ಸಲಗ..!
ನಟ ದುನಿಯಾ ವಿಜಯ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಟರಲ್ಲಿ ಒಬ್ಬರು. ಸದ್ಯ ಕರುನಾಡ ಗಡಿದಾಟಿ ತೆಲುಗು ಪ್ರದೇಶಕ್ಕೆ ನುಗ್ಗಿರುವ ಕರಿಚಿರತೆ ಅಬ್ಬರಿಸುತ್ತಿದೆ. ಟಾಲಿವುಡ್ ಸ್ಟಾರ್, ನಟಸಿಂಹ ನಂದಮೂರಿ ಬಾಲಕೃಷ್ಣ ಅವರ ಮುಂಬರುವ NBK 107 ʼವೀರ ಸಿಂಹರೆಡ್ಡಿʼ ಸಿನಿಮಾದಲ್ಲಿ ಪ್ರತಾಪ್ ರೆಡ್ಡಿ ಪಾತ್ರದಲ್ಲಿ ಒಂಟಿ ಸಲಗ ಸದ್ದು ಮಾಡಲು ಸಿದ್ದವಾಗಿದೆ.
Duniya Vijay in NBK 107 : ನಟ ದುನಿಯಾ ವಿಜಯ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಟರಲ್ಲಿ ಒಬ್ಬರು. ಸದ್ಯ ಕರುನಾಡ ಗಡಿದಾಟಿ ತೆಲುಗು ಪ್ರದೇಶಕ್ಕೆ ನುಗ್ಗಿರುವ ಕರಿಚಿರತೆ ಅಬ್ಬರಿಸುತ್ತಿದೆ. ಟಾಲಿವುಡ್ ಸ್ಟಾರ್, ನಟಸಿಂಹ ನಂದಮೂರಿ ಬಾಲಕೃಷ್ಣ ಅವರ ಮುಂಬರುವ NBK 107 ʼವೀರ ಸಿಂಹರೆಡ್ಡಿʼ ಸಿನಿಮಾದಲ್ಲಿ ಪ್ರತಾಪ್ ರೆಡ್ಡಿ ಪಾತ್ರದಲ್ಲಿ ಒಂಟಿ ಸಲಗ ಸದ್ದು ಮಾಡಲು ಸಿದ್ದವಾಗಿದೆ.
ಹೌದು.. ಟಾಲಿವುಡ್‌ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಎನ್‌ಬಿಕೆ 107ನಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ಅನ್ಯ ಭಾಷೆಯ ಸಿನಿ ರಂಗಕ್ಕೆ ಕಾಲಿಟ್ಟಿರುವ ದುನಿಯಾ ಲೋಕದ ಜರಾಸಂಧನ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಜಯಮ್ಮನ ಮಗ ಮಿಂಚಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: DR56 Trailer: ಮೆಡಿಕಲ್ ಮಾಫಿಯಾ ಕಥಾಹಂದರವುಳ್ಳ " DR56" ಟ್ರೈಲರ್ ಬಿಡುಗಡೆ
ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ವಿಜಯ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ಮೀಸೆ ತಿರುವಿ, ಕೊರಳಲ್ಲಿ ಚೈನ್ ಹಾಕಿಕೊಂಡು ಖಡಕ್ ನೋಟದಲ್ಲಿ ಗಾಂಭಿರ್ಯವಾಗಿ ಜೀಪ್ ಮೇಲೆ ಕುಳಿತಿರುವ ವಿಜಯ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ತೆಲುಗು ನಾಡಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿನ ಅಭಿಮಾನಿಗಳು ವಿಜಯ್‌ಗೆ ಅದ್ಧೂರಿ ಸ್ವಾಗತಕೋರಿದ್ದಾರೆ. ಸೇಲ್ಫಿಗಾಗಿ ಮುಗಿದ್ದ ವಿಡಿಯೋ ಮತ್ತು ಫೋಟೋಗಳು ಸಹ ವೈರಲ್ ಆಗಿವೆ.
ಎನ್‌ಬಿಕೆ 107 ಒಂದು ಆಕ್ಷನ್ ಡ್ರಾಮಾ ಸಿನಿಮಾ ಆಗಿದ್ದು, ಇದನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ಮತ್ತು ಮೋಹನ್ ಚೆರುಕುರಿ ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಬಾಲಯ್ಯ ಅವರಿಗೆ ಜೊತೆಯಾಗಿ ಶೃತಿ ಹಾಸನ್ ನಟಿಸುತ್ತಿದ್ದಾರೆ. ಸಂಕ್ರಾತಿ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಜಾಕ್ ಮಂಜು ಸಜ್ಜು! ಇರಲಿದೆ ಹಾಲಿವುಡ್ ತಾರಾಗಣ?
ಇನ್ನು ದುನಿಯಾ ವಿಜಯ್ ಅವರ ʼಸಲಗʼ ಸಿನಿಮಾ ಯಶಸ್ಸು ಕಂಡಿದ್ದು, ʼಭೀಮʼ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಭೀಮನ ಫಸ್ಟ್ ಲುಕ್ ಕಂಡಿರುವ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಸಿನಿಮಾವನ್ನು ಸಹ ದುನಿಯಾ ವಿಜಯ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಲಗ ಚಿತ್ರವನ್ನೂ ಸಹ ವಿಜಯ್ ಅವರು ನಿರ್ದೇಶಿಸಿದ್ದರು. ಅಲ್ಲದೆ, ಬಾಲಕೃಷ್ಟ ಅವರಿಗೆ ಜೊತೆಯಾಗಿ ಎನ್‌ಬಿಕೆ107 ರಲ್ಲಿ ಅಭಿನಯಿಸುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.