Producer Jack Manju : ವಿಕ್ರಾಂತ್ ರೋಣ ಸಿನಿಮಾದಿಂದ ಹಾಲಿವುಡ್‌ನಲ್ಲಿಯೂ ಕಮಾಲ್ ಮಾಡಿದ ನಿರ್ಮಾಪಕ ಜಾಕ್ ಮಂಜು, ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾಗಿದ್ದಾರೆ. ಈ ಬಾರಿ ಒಂದು ಹೊಸ ಪ್ರಯತ್ನಕ್ಕೆ ಜಾಕ್ ಮಂಜು ಕೈ ಹಾಕಿದ್ದು, ಅರಮನೆ, ಸಂಜು ವೆಡ್ಸ್ ಗೀತಾ, ಮೈನಾ ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ನಾಗಶೇಖರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಶುಕ್ರವಾರ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸಹ ನಡೆದಿದೆ.
ಇದನ್ನೂ ಓದಿ : ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ
ಈ ಬೆಳವಣಿಗೆಯನ್ನು ಖಚಿತಪಡಿಸಿದ ಜಾಕ್ ಮಂಜು, ನಾಗಶೇಖರ್ ಜೊತೆಗೆ ವಿವಿಧ ಹಿನ್ನೆಲೆಯ ಖ್ಯಾತ ವ್ಯಕ್ತಿಗಳೊಂದಿಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಸ್ಕ್ರಿಪ್ಟ್ ಲಾಕ್ ಆದ ನಂತರವೇ ತಾರಾಗಣ ಮತ್ತು ಸಿಬ್ಬಂದಿಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ. ನಾಗಶೇಖರ್ ಅವರು ನಿರ್ದೇಶನ ಮಾಡಲಿರುವ ಈ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ.
ಸಿನಿಮಾದ ಒಂದೆಳೆ ಕತೆಯನ್ನು ಜಾಕ್ ಮಂಜುಗೆ ನಾಗಶೇಖರ್ ಹೇಳಿದ್ದಾರೆ. ಇದನ್ನು ಒಂದು ಪರಿಪೂರ್ಣ ಚಿತ್ರಕತೆಯನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ಕೆಲವು ಪ್ರತಿಭಾನ್ವಿತ ಡೈರೆಕ್ಟರ್‌ಗಳು, ಸಿನಿ ಕರ್ಮಿಗಳು, ಪೊಲೀಸ್ ಇಲಾಖೆಯವರು, ನ್ಯಾಯಾಂಗ ವಿಭಾಗದವರು ಒಂದೆಡೆ ಸೇರಿದ್ದಾರೆ. ನಿರ್ದೇಶಕಿ ಸುಮನಾ ಕಿತ್ತೂರು, ಚಕ್ರವರ್ತಿ ಚಂದ್ರಚೂಡ್, ಸಿನಿಮಾಟೊಗ್ರಾಫರ್ ಸತ್ಯ ಹೆಗಡೆ, ನಿರ್ದೇಶಕ ರಾಘು ಕೋವಿ, ಮಾಜಿ ಪೊಲೀಸ್ ಆಯುಕ್ತ ಬಿಬಿ ಅಶೋಕ್ ಕುಮಾರ್, ಜನಪ್ರಿಯ ಕ್ರಿಮಿನಲ್ ಲಾಯರ್ ದಿಲೀಪ್ ಎಲ್ಲರೂ ಒಂದೆಡೆ ಸೇರಿ ಚಿತ್ರಕತೆ ರೆಡಿ ಮಾಡುತ್ತಿದ್ದಾರೆ.
ಇದನ್ನೂ ಓದಿ : ಸಿಬಿಐ ತನಿಖೆಯಲ್ಲಿ ಸುಶಾಂತ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು!
ರಾಷ್ಟ್ರೀಯ ಸಮಸ್ಯೆಯೊಂದರ ಹಿನ್ನೆಲೆಯಲ್ಲಿರುವ ಪ್ರೇಮಕತೆಯೊಂದನ್ನು ತೆರೆ ಮೇಲೆ ತರಲಿದ್ದಾರೆ. ಒಂದು ತಿಂಗಳಲ್ಲಿ ಚಿತ್ರಕಥೆಯನ್ನು ಪೂರ್ಣಗೊಳಿಸುವ ಆಶಯದೊಂದಿಗೆ ನಾಗಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಸಿನಿಮಾದಲ್ಲಿ ಸ್ಥಳೀಯ ನಟರು ಮಾತ್ರವಲ್ಲದೇ ಹಾಲಿವುಡ್‌ನ ಕೆಲವು ನಟರೂ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.