Dhanush divorce matter: ನಟ ಧನುಷ್ ಮತ್ತು ರಜನಿಕಾಂತ್ ಐಶ್ವರ್ಯ ಅವರಿಗೆ ವಿಚ್ಛೇದನ ನೀಡಿ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯ ತೀರ್ಪು ನೀಡಿದೆ. ಈ ವಿಷಯದಲ್ಲಿ ಇಬ್ಬರ ಒಮ್ಮತದ ನಂತರ ಈ ಪ್ರಕರಣದ ತೀರ್ಪು ನೀಡಲಾಗಿದೆಯಂತೆ.


COMMERCIAL BREAK
SCROLL TO CONTINUE READING

ನಟ ಧನುಷ್ ಮತ್ತು ರಜನಿಕಾಂತ್ ಐಶ್ವರ್ಯ ಅವರಿಗೆ ವಿಚ್ಛೇದನ ನೀಡಿ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯ ತೀರ್ಪು ನೀಡಿದೆ. ಈ ವಿಷಯದಲ್ಲಿ ಇಬ್ಬರ ಒಮ್ಮತದ ನಂತರ ಈ ಪ್ರಕರಣದ ತೀರ್ಪು ನೀಡಲಾಗಿದೆಯಂತೆ. ಈ ಮೂಲಕ ತಮಿಳು ಚಿತ್ರರಂಗದ ತಾರಾ ಜೋಡಿಯ ಸುಂದರ ದಾಂಪತ್ಯ ಜೀವನ ಅಂತ್ಯಗೊಂಡಿದೆ. ತಮಿಳು ಚಿತ್ರರಂಗದಲ್ಲಿ ಖ್ಯಾತ ನಟ ಧನುಷ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ಅವರನ್ನು ಪ್ರೀತಿಸಿ 2004 ರಲ್ಲಿ ವಿವಾಹವಾಗಿದ್ದರು.


ನಟ ದನುಷ್‌ ಅವರಿಗಿಂತ ಹಿರಿಯರಾಗಿದ್ದ ಐಶ್ವರ್ಯ ಅವರು ಧನುಷ್‌ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು, ಈ ಜೋಡಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಲವ್ಲಿ ಕಪಲ್‌ ಎಂದೆ ಎನಿಸಿಕೊಂಡಿದ್ದ ಈ ಜೋಡಿಯ ಬಾಳಲ್ಲಿ ಇದೀಗ ಬಿರುಕು ಮೂಡಿದೆ. ಸುಮಾರು 18 ವರ್ಷಗಳ ಸುಂದರ ದಾಂಪತ್ಯ ಜೀವನಕ್ಕೆ ಜೋಡಿ ಇಂತಿ ಹಾಡಿದ್ದಾರೆ. 


ಇಬ್ಬರೂ ಮೊದಲಿಗೆ ಪ್ರತ್ಯೇಕತೆಯನ್ನು ಘೋಷಿಸಿದಾಗ, ಅವರ ಸಂಬಂಧಿಕರು ಹಾಗೂ ಸ್ನೇಹಿತರು ಈ ಕುರಿತು ಚರ್ಚೆ ನಡೆಸಿ ಜೋಡಿಯ ಮನವೊಲಿಸಲು ಪ್ರಯತ್ನಿಸಿದ್ದರು, ನಂತರ ಕೋರ್ಟ್‌ನಲ್ಲಿ ಕೇಸ್‌ಗೆ ಜೋಡಿ ಹಾಜರ್‌ ಆಗದೆ ಇರುವುದನ್ನು ನೋಡಿದ ಅಬಿಮಾನಿಗಳು, ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂದು ಊಹಿಸಿದ್ದರು, ಆದರೆ ಇದೀಗ ಕೋರ್ಟ್‌ ಇಬ್ಬರ ಒಮ್ಮತದ ಮೇರೆಗೆ ವಿಚ್ಚೇದನ ನೀಡಿ ತೀರ್ಪು ಘೋಷಿಸಿದೆ. ಇದು ಜೋಡಿ ಮತ್ತೆ ಒಂದಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.