Actress Pragathi: ನಟಿಯ ಪ್ರಗತಿಯ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ. ತೆಲುಗು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಜನಪ್ರಿಯತೆ ಗಳಿಸಿದ ಇವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಹೆಸರು ಮಾಡಿದ್ದಾರೆ. ಪ್ರಗತಿಯ ಸಿನಿಮಾ ಜೀವನ ಹಾಗೂ ವೈಯಕ್ತಿಕ ಜೀವನ ಅನೇಕ ಪಾತ್ರ ಕಲಾವಿದರಿಗಿಂತ ಭಿನ್ನವಾಗಿದೆ. 


COMMERCIAL BREAK
SCROLL TO CONTINUE READING

ಈ ನಟಿ ಸಿನಿಮಾಗಳಲ್ಲಿ ಹೀರೋಗಳಿಗೆ ತಾಯಿ.. ಚಿಕ್ಕಮ್ಮ.. ಅಜ್ಜಿ.. ಆಗಿ ನಟಿಸಿ ಇಂಪ್ರೆಸ್‌ ಮಾಡಿದ್ದಾರೆ.. ಕೆ.ಭಾಗ್ಯರಾಜ್ ನಿರ್ದೇಶನದ ತಮಿಳಿನ ವೀಟ್ಲಾ ವಿಶೇಂಗಾ ಚಿತ್ರದ ಮೂಲಕ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಇವರು ಅಭಿಮಾನಿಗಳಿಂದ ವಾವ್ ಎನಿಸಿಕೊಂಡಿದ್ದಾರೆ. 


ಇದನ್ನೂ ಓದಿ-ಪ್ರಖ್ಯಾತ ಸೆಲೆಬ್ರಿಟಿಯೊಂದಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮದುವೆ! ಯುವ ರಾಜಕಾರಣಿಯನ್ನು ವರಿಸಲಿರುವ ಆ ಚೆಲುವೆ ಯಾರು ಗೊತ್ತೇ?


ಇತ್ತೀಚೆಗಷ್ಟೆ ಒಬ್ಬ ವ್ಯಕ್ತಿಯ ಸಲಹೆಯಿಂದ ಚಿಕ್ಕವಯಸ್ಸಿನಲ್ಲಿ ತಾಯಿಯಾದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹೌದು ವಾಸ್ತವವಾಗಿ ನಾಯಕಿಯಾಗಿ ಹೆಚ್ಚು ದಿನ ಬಾಳಲು ಸಾಧ್ಯವಿಲ್ಲ...ಅವಕಾಶಗಳೂ ಕಡಿಮೆ... ಹೀಗಾಗಿ ಇಂಡಸ್ಟ್ರಿಯಲ್ಲಿ ಉಳಿಯಬಲ್ಲೆ ಎಂಬ ಸಲಹೆ ಬಂದಿದ್ದರಿಂದ ನಾಯಕಿಯಾಗುವ ಬದಲು ತಾಯಿ ಪಾತ್ರದಲ್ಲಿ ನಟಿಸಲು ಸಿದ್ಧ.. ತಾಯಿ ಪಾತ್ರಗಳಲ್ಲಿ ದೀರ್ಘಕಾಲದವರೆಗೂ ಇಂಡಸ್ಟ್ರಿಯಲ್ಲಿರಬಹುದು ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದೆ.. ಚಿಕ್ಕವಯಸ್ಸಿನಲ್ಲೇ ತಾಯಿಯಾಗಿ ನಟಿಸಲು ಆರಂಭಿಸಿದ್ದೇನೆ ಎಂದಿದ್ದಾರೆ.. 


ಸಿನಿಮಾವೊಂದರ ಶೂಟಿಂಗ್ ವೇಳೆ ತನಗೆ ಕಾಸ್ಟಿಂಗ್ ಕೌಚ್ ಕಿರುಕುಳದ ಅನುಭವವೂ ಆಗಿತ್ತು.. ಎಂದು ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದಾಳೆ. ಈ ಬಗ್ಗೆ ಮಾತನಾಡಿದ ಅವರು "ಒಂದು ದಿನ ಸೆಟ್ ನಲ್ಲಿ ಅಸಭ್ಯವಾಗಿ ವರ್ತಿಸಿದರು.. ಅದೇ ನನಗೆ ಸಾಕಷ್ಟು ತೊಂದರೆ ಉಂಟು ಮಾಡಿತ್ತು. ಅಂದು ಶೂಟಿಂಗ್‌ನಲ್ಲಿ ಇರಬೇಕೆಂದು ಅನಿಸಲಿಲ್ಲ.. ಮಧ್ಯಾಹ್ನದ ಊಟವನ್ನೂ ಬಿಟ್ಟಿದ್ದೆ.." ಎಂದು ಹೇಳಿದ್ದರು.. 


ಇನ್ನು ಪ್ರಗತಿಯ ಸಂಭಾವನೆ ವಿಚಾರಕ್ಕೆ ಬಂದರೆ.. ಒಂದೇ ದಿನದ ಕಾಲ್ ಶೀಟ್ ಗೆ ಪ್ರಗತಿ 50 ರಿಂದ 70 ಸಾವಿರ ಬೇಡಿಕೆ ಇಟ್ಟಿದ್ದಾರಂತೆ. ಆದರೆ ಇದು ಎಲ್ಲಾ ಸಿನಿಮಾಗಳಿಗೂ ಒಂದೇ ರೀತಿ ಇರದಿರಬಹುದು. ದೊಡ್ಡ ಸಿನಿಮಾಗಳಿಗೆ ಒಂದೊಂದು ರೀತಿ.. ಚಿಕ್ಕ ಸಿನಿಮಾಗಳಿಗೂ ಒಂದೊಂದು ರೀತಿ. ಪ್ರಾಮುಖ್ಯತೆಗೆ ಅನುಗುಣವಾಗಿ ಪಾತ್ರವೂ ಬದಲಾಗಬಹುದು.. ಪಾತ್ರಕ್ಕನುಗುಣವಾಗಿ ಸಂಭಾವನೆಯೂ ಬದಲಾಗಬಹುದು ಎನ್ನುತ್ತಾರೆ ನಟಿ ಪ್ರಗತಿ.. 


ಕೆಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿರುವ ನಟಿ ಪ್ರಗತಿ ಇತ್ತೀಚಿನ ದಿನಗಳಲ್ಲಿ ಆಗಾಗ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ.. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಹೀಗೆ ಅವರು ತಮ್ಮ ಫಾಲೋವರ್ಸ್‌ ಹೆಚ್ಚಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ-ಪ್ರಖ್ಯಾತ ಸೆಲೆಬ್ರಿಟಿಯೊಂದಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮದುವೆ! ಯುವ ರಾಜಕಾರಣಿಯನ್ನು ವರಿಸಲಿರುವ ಆ ಚೆಲುವೆ ಯಾರು ಗೊತ್ತೇ?


 ಪ್ರಗತಿ.. ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ.. ಚಿತ್ರರಂಗದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದು, ನಿರ್ದೇಶಕರ ಹೊರತಾಗಿ ಸ್ಟಾರ್ ಹೀರೋ ಕೂಡ ಇಡೀ ದಿನ ಅವನೊಂದಿಗೆ ಕಳೆದರೆ ತನಗೆ ಅವಕಾಶ ಕೊಡುವುದಾಗಿ ಹೇಳಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಆದರೆ ಆ ನಾಯಕನ ಯಾರೆಂದು ಪ್ರಗತಿ ಬಹಿರಂಗಪಡಿಸಿಲ್ಲ. ಉದ್ಯಮದಲ್ಲಿ ಕೆಲವು ಮಹಿಳಾ ಕಲಾವಿದರು ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.. 


ಇನ್ನು ಪ್ರಗತಿ ಸಿನಿಮಾಗಳ ವಿಚಾರಕ್ಕೆ ಬಂದರೆ... ತೆಲುಗು ಸಿನಿಮಾಗಳಲ್ಲಿ ಪ್ರಗತಿ ವಿಶೇಷವಾಗಿ ತಾಯಿ, ಅಜ್ಜಿ, ಅಕ್ಕ, ತಂಗಿಯಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಹಲವು ಚಿತ್ರಗಳಲ್ಲಿ ನಟಿಸಿ ಬ್ಯುಸಿಯಾಗಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.