ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್, ದಿ.ನಟ ಡಾ.ಪುನೀತ್ ರಾಜ್‍ಕುಮಾರ್ ಗಾಗಿ ಅಭಿಮಾನಿಯೊಬ್ಬ ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾನೆ. ‘ಅಪ್ಪು’ಗೆ ‘ಭಾರತ ರತ್ನ’ ನೀಡಬೇಕೆಂದು ಬರೋಬ್ಬರಿ 2100 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾನೆ.


COMMERCIAL BREAK
SCROLL TO CONTINUE READING

ತೆಲಂಗಾಣದ 55 ವರ್ಷದ ನಿವೃತ್ತ CRPF ಇನ್ಸ್ ಪೆಕ್ಟರ್ ರವಿಕುಮಾರ್ ಅವರು ಪುನೀತ್‍ ಅವರಿಗಾಗಿ ಕಾಲ್ನಡಿಗೆಯ ಮೂಲಕ ವಿಭಿನ್ನ ಕಾರ್ಯವನ್ನು ಕೈಗೊಂಡಿದ್ದಾರೆ. 120 ದಿನಗಳಲ್ಲಿ 3200 ಕಿಲೋ ಮೀಟರ್ ನಡೆಯುವ ಗುರಿಯನ್ನು ಅವರು ಹೊಂದಿದ್ದಾರೆ.


ಇದನ್ನೂ ಓದಿ: 2022ರ ಟಾಪ್​ 10 ಚಿತ್ರಗಳ ಪಟ್ಟಿ ರಿಲೀಸ್‌: ನಂ.01​ ಪಟ್ಟ ಯಾರಿಗೆ? KGF 2 ಸ್ಥಾನ ಎಷ್ಟು?


ಪ್ರತಿನಿತ್ಯ ಬೆಂಗಳೂರಿನ ಮೆಜೆಸ್ಟಿಕ್‍ನಿಂದ ಶುರು ಮಾಡಿ ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್‍ನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ಕಾಲ್ನಡಿಗೆ ಮಾಡುತ್ತಿರುವ ರವಿಕುಮಾರ್ ಈಗಾಗಲೇ 2100 ಕಿ.ಮೀ ಕಂಪ್ಲೀಟ್ ಮಾಡಿದ್ದಾರೆ.


98 ದಿನಗಳ ಹಿಂದೆ ರವಿಕುಮಾರ್ ಕಾಲ್ನಡಿಗೆ ಶುರು ಮಾಡಿದ್ದು, 120 ದಿನದೊಳಗಡೆ 3200 ಕಿಲೋ ಮೀಟರ್ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರಂತೆ. ಪುನೀತ್ ರಾಜ್‍ಕುಮಾರ್ ಅವರಿಗೆ ‘ಭಾರತ ರತ್ನ’ ನೀಡಬೇಕೆಂದು ರವಿಕುಮಾರ್ ಕಾಲ್ನಡಿಗೆ ಶುರು ಮಾಡಿದ್ದಾರೆ.


ಇದನ್ನೂ ಓದಿ: ಸಿದ್ಧಾಂತ್ ಕಪೂರ್‌ ಡ್ರಗ್ಸ್ ಸೇವಿಸಿದ್ದಾರೆ: ಡಿಸಿಪಿ ಭೀಮಾಶಂಕರ್ ಗುಳೇದ್


ಕನ್ನಡಿಗ ನಟನಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವಂತೆ ತೆಲಂಗಾಣದ ವ್ಯಕ್ತಿ ರವಿಕುಮಾರ್ 2100 ಕಿ.ಮೀ ನಡೆದಿರುವುದು ‘ಅಪ್ಪು’ ಅಭಿಮಾನಿಗಳಿಗೆ ಖುಷಿ ತಂದಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.