ಬೆಂಗಳೂರು: ತಡರಾತ್ರಿ ನಡೆದ ಪಾರ್ಟಿಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಸೇವಿಸಿದ್ದಾರೆ. ಪಾರ್ಟಿ ಓಪನ್ ಫಾರ್ ಪಬ್ಲಿಕ್ ಆಗಿದ್ದು, ದಾಳಿ ವೇಳೆ ಡಸ್ಟ್ ಬಿನ್ ಬಳಿ 7 MDMA ಮಾತ್ರೆಗಳು, ಗಾಂಜಾ ಪತ್ತೆಯಾಗಿದೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ!: ಬಿಜೆಪಿ
ಈ ಬಗ್ಗೆ ತಮ್ಮ ಕಚೇರಿ ಬಳಿ ಮಾತನಾಡಿದ ಅವರು, ನಿನ್ನೆ ರಾತ್ರಿ ಹೋಟೆಲ್ ನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ಮಾಡಲಾಗಿತ್ತು. 100 ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ರು. ಅದರಲ್ಲಿ ಭಾಗಿಯಾಗಿದ್ದ ಕೆಲವರನ್ನ ಡ್ರಗ್ಸ್ ಸೇವಿಸಿರುವ ಅನುಮಾನದ ಮೇಲೆ ಟೆಸ್ಟ್ ಗೆ ಒಳಪಡಿಸಲಾಗಿತ್ತು ಎಂದಿದ್ದಾರೆ.
ಪರೀಕ್ಷೆಯಲ್ಲಿ ಐವರು ಡ್ರಗ್ ಸೇವಿಸಿರುವುದು ಧೃಡಪಟ್ಟಿದೆ. ಪಾರ್ಟಿಯಲ್ಲಿ ಉತ್ತರ ಭಾರತದವರು ಜಾಸ್ತಿ ಇದ್ದರು. ಈಗ ವಶಕ್ಕೆ ಪಡೆದಿರುವ ಐದೂ ಜನ ಕೂಡ ಕರ್ನಾಟಕದವರಲ್ಲ, ಅದರಲ್ಲಿ ಮೂವರು ಕರ್ನಾಟಕದಲ್ಲಿ ವಾಸವಿದ್ದಾರೆ ಎಂದು ತಿಳಿಸಿದ್ದಾರೆ.
NDPS ಕಾಯ್ದೆ 22 A, 22 B , 27 b ಅಡಿಯಲ್ಲಿ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ. ಹೋಟೆಲ್ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: PHOTOS: ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್