ಜನರ ಮನಸ್ಸನ್ನು ಗೆಲ್ಲುವಲ್ಲಿ ಮಾತ್ರವಲ್ಲ ಬಾಕ್ಸ್​ ಆಫೀಸ್ ದಾಖಲೆಯನ್ನು ಸಹ ಬರೆದಿತ್ತು ‘ಬಂಗಾರದ ಮನುಷ್ಯ’ (Bangarada Manushya) ಚಿತ್ರ. ಈ ಚಿತ್ರ ತೆರೆಕಂಡು ಇಂದಿಗೆ 50 ವರ್ಷ. 


COMMERCIAL BREAK
SCROLL TO CONTINUE READING

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್​ (Rajkumar) ನೀಡಿದ ಕೊಡುಗೆ ಎಂದೆಂದಿಗೂ ಚಿರಸ್ಮರಣೀಯ. ಅಣ್ಣಾವ್ರು ನಟಿಸಿದ ಪ್ರತಿ ಸಿನಿಮಾದಲ್ಲಿಯೂ ಸಮಾಜಕ್ಕೊಂದು ಉತ್ತಮ ಸಂದೇಶ ಇದೆ. ಡಾ.ರಾಜ್​ ನಟಿಸಿದ ಪಾತ್ರಗಳು ಉತ್ತಮ ಜೀವನಕ್ಕೆ ಸಾಕ್ಷಿ ಎಂಬಂತಿದ್ದವು.


ಇದನ್ನೂ ಓದಿ: ಸುದೀಪ್‌ ಸಿನಿಮಾಗೆ ಲೆಜೆಂಡ್ ಮೋಹನ್ ಲಾಲ್‌ & ಚಿರಂಜೀವಿ ಸಾಥ್..!


ರಾಜ್‌ಕುಮಾರ್‌ ನಟಿಸಿದ ಚಿತ್ರಗಳಲ್ಲಿ ಬಂಗಾರದ ಮನುಷ್ಯ ಸಿನಿಮಾವನ್ನು (Dr.Rajkumar) ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತೀಯ ಚಿತ್ರರಂಗದ ಬೆಸ್ಟ್​ ಸಿನಿಮಾಗಳಲ್ಲಿ ಬಂಗಾರದ ಮನುಷ್ಯ ಸಹ ಒಂದು. ಈ ಸಿನಿಮಾ ತೆರೆಕಂಡು ಇಂದಿಗೆ 50 ವರ್ಷ ಪೂರೈಸಿದೆ. ಅರ್ಧ ಶತಮಾನ ಕಳೆದರೂ ಕೂಡ ಈ ಚಿತ್ರದ ಚಾರ್ಮ್​ ಕಡಿಮೆ ಆಗಿಲ್ಲ. 


ಎಸ್​. ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಬಂಗಾರದ ಮನುಷ್ಯ ಸಿನಿಮಾ ಮೂಡಿ ಬಂದಿತ್ತು. ಟಿ.ಕೆ.ರಾಮ ರಾವ್​ ಬರೆದ ಬಂಗಾರದ ಮನುಷ್ಯ ಕಾದಂಬರಿ ಆಧರಿಸಿ ಈ ಸಿನಿಮಾದಲ್ಲಿ ರಾಜ್​ಕುಮಾರ್​, ಭಾರತಿ (Bharati), ಬಾಲಕೃಷ್ಣ, ಶ್ರೀನಾಥ್​, ಲೋಕನಾಥ್​, ದ್ವಾರಕೀಶ್​, ವಜ್ರಮುನಿ ಮುಂತಾದವರು ನಟಿಸಿದ್ದರು. 


ಕನ್ನಡ ಚಿತ್ರರಂಗದಲ್ಲಿ (Kannada Movie) ಬಂಗಾರದ ಮನುಷ್ಯ ಹತ್ತು ಹಲವು ದಾಖಲೆಗಳನ್ನು ಬರೆದಿದೆ. ಜನರ ಮನ ಗೆಲ್ಲುವಲ್ಲಿ ಮಾತ್ರವಲ್ಲ, ಬಾಕ್ಸ್​ ಆಫೀಸ್​ನಲ್ಲಿ ಸಹ ಈ ಚಿತ್ರ ಮೈಲಿಗಲ್ಲು ಸ್ಥಾಪಿಸಿತು. ಆ ಕಾಲಕ್ಕೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ಪಡೆಯಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ (Bangalore Theatre) ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದ್ದು ವಿಶೇಷ ಸಾಧನೆಯಾಗಿದೆ.


ಇದನ್ನೂ ಓದಿ: RGV ನಿರ್ದೇಶನದ 'ಖತ್ರಾ ಡೇಂಜರಸ್' ಚಿತ್ರ ಬಿಡುಗಡೆಗೆ ಸಿದ್ಧ.!


ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ (Mysore Chamundeshwari Theatre) 60 ವಾರಗಳ ಕಾಲ ಹಾಗೂ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನವಾಯಿತು. 1988ರಲ್ಲಿ ಮರು ಬಿಡುಗಡೆ ಆದಾಗಲೂ ಈ ಚಿತ್ರ ಬರೋಬ್ಬರಿ 25 ವಾರಗಳ ಕಾಲ ಪ್ರದರ್ಶನ ಕಂಡಿತು. ಇಂತಹ ಅಮೋಘ ಸಾಧನೆ ಮಾಡಿದ ಬಂಗಾರದ ಮನುಷ್ಯ ಸಿನಿಮಾ ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.