RGV ನಿರ್ದೇಶನದ 'ಖತ್ರಾ ಡೇಂಜರಸ್' ಚಿತ್ರ ಬಿಡುಗಡೆಗೆ ಸಿದ್ಧ.!

Ram Gopal Verma: ಭಾರತದಲ್ಲಿ ಮೊದಲ ಬಾರಿಗೆ ಲೆಸ್ಬಿಯನ್‌ಗಳ ಕತೆ ಹೇಳುವ ಕ್ರೈಂ ಥ್ರಿಲ್ಲರ್ ಮೂವಿ ತೆರೆಗೆ ಬರ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಸಿನಿಮಾ ಕುರಿತು ಏನು ಹೇಳಿದ್ದಾರೆ ಇಲ್ಲಿದೆ ನೋಡಿ... 

Written by - Chetana Devarmani | Last Updated : Mar 31, 2022, 11:43 AM IST
  • ನೈಜ ಘಟನೆಗಳ ಸಿನಿಮಾ ಮೂಲಕ ಹೆಸರಾದವರು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ
  • RGV ನಿರ್ದೇಶನದ 'ಖತ್ರಾ ಡೇಂಜರಸ್' ಚಿತ್ರ ಬಿಡುಗಡೆಗೆ ಸಿದ್ಧ
  • ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯರಾದ ಅಪ್ಸರಾ ರಾಣಿ, ನೈನಾ ಗಂಗೂಲಿ
RGV ನಿರ್ದೇಶನದ 'ಖತ್ರಾ ಡೇಂಜರಸ್' ಚಿತ್ರ ಬಿಡುಗಡೆಗೆ ಸಿದ್ಧ.! title=
ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ

Khatra Dangerous:ಅಂಡರ್‌ ವರ್ಲ್ಡ್‌ ಸೇರಿದಂತೆ ರಿಯಲ್‌ ಸ್ಟೋರಿಗಳ ಸಿನಿಮಾಗಳನ್ನು ಮಾಡುವ ಮೂಲಕವೇ ಹೆಸರಾದವರು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ (Ram Gopal Verma). ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರೌಡಿಸಂ ನಿಂದ ಹಿಡಿದು ಲವ್ ಸ್ಟೋರಿ, ನೈಜ ಘಟನೆಗಳನ್ನ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಇವರು.

ಇದನ್ನೂ ಓದಿ: RRR Box Office: ಹೊಸ ಇತಿಹಾಸ ಸೃಷ್ಟಿಸಿದ ರಾಜಮೌಳಿ ಸಿನಿಮಾ

ಇದೀಗ ಭಾರತದಲ್ಲಿ ಮೊದಲ ಬಾರಿಗೆ ಲೆಸ್ಬಿಯನ್ ಕಥೆಯ ಜೊತೆಗೆ ಕ್ರೈಂ ಥ್ರಿಲ್ಲರ್ (Crime Thriller Movie) ಕಥಾಹಂದರವನ್ನಿಟ್ಟುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ 'ಖತ್ರಾ ಡೇಂಜರಸ್‌' ಅನ್ನೋ ಸಲಿಂಗಕಾಮದ ಕುರಿತ ಸಿನಿಮಾವೊಂದನ್ನು ಮಾಡಿ, ಅದನ್ನು ತೆರೆಗೆ ತರುವುದಕ್ಕೆ ಸಿದ್ಧರಾಗಿದ್ದಾರೆ. 

ಈ  ಸಿನಿಮಾದಲ್ಲಿ ನಟಿಯರಾದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಪಾತ್ರ ಪ್ರಮುಖವಾಗಿದೆ.  ಟ್ರೈಲರ್​ನಲ್ಲಿ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಸಿಕ್ಕಾಪಟ್ಟೆ ಹಾಟ್ ಲುಕ್​ನಲ್ಲಿ​ ಕಾಣಿಸಿಕೊಂಡಿದ್ದಾರೆ. ಲೆಸ್ಬಿಯನ್ ಪ್ರಣಯವನ್ನು ಪ್ರದರ್ಶಿಸುವ ಈ ಸಿನಿಮಾ ಪೂರ್ತಿ ಸಲಿಂಗಪ್ರೇಮದ ದೃಶ್ಯಗಳಿಂದ ತುಂಬಿದೆಯಂತೆ. ಅಡಲ್ಟ್ ಕಂಟೆಂಟ್‌ನಿಂದಾಗಿ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ (A certificate) ಸಿಕ್ಕಿದೆ.

'ಖತ್ರಾ ಡೇಂಜರಸ್' (Khatra Dangerous) ಪ್ರಚಾರದ ಹಿನ್ನೆಲೆ ರಾಮ್‌ ಗೋಪಾಲ್‌ ವರ್ಮಾ, ನಟಿಯಾರದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಜೊತೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ, ಚಿತ್ರದ ನಾಯಕಿಯರಾದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  

ಇದನ್ನೂ ಓದಿ: Prabhas and Anushka Shetty : ಯಂಗ್‌ ರೆಬೆಲ್ ಪ್ರಭಾಸ್‌‌ ಮತ್ತು ಅನುಷ್ಕಾ ಶೆಟ್ಟಿ ಒಂದಾಗುತ್ತಿದ್ದಾರಾ?

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿ, ಸಿನಿಮಾವು ಲೆಸ್ಬಿಯನ್ ಕತೆಯನ್ನ ಹೊಂದಿದೆ. ಕತೆ, ಮೇಕಿಂಗ್ ಎಲ್ಲಾ ಚೆನ್ನಾಗಿದೆ ಎಂದರು. ಇದೇ ವೇಳೆ ಮಾತನಾಡಿದ ಚಿತ್ರದ ನಾಯಕಿ ಅಪ್ಸರಾ ರಾಣಿ, ನಾನು ಆರ್​ಜಿವಿ ಅವರ ಜೊತೆ ಸಿನಿಮಾ ಮಾಡಿ, ಸಾಕಷ್ಟು ವಿಷಯಗಳನ್ನ ಕಲಿತುಕೊಂಡಿದ್ದೇನೆ. ಇಂತಹ ಪಾತ್ರ ಮಾಡೋದು ಚಾಂಲೆಜಿಂಗ್ ಆಗಿತ್ತು ಎಂದು ತಿಳಿಸಿದರು. ಬಳಿಕ ಮಾತನಾಡಿದ ಪಂಜಾಬಿ ಬೆಡಗಿ ನೈನಾ ಗಂಗೂಲಿ, ನಾನು ಎರಡು‌ ಸಿನಿಮಾ ಮಾಡಿರಬಹುದು. ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವುದು ತಪ್ಪು ಅಂತ ನನಗೆ ಅನಿಸಲ್ಲ. ನಿರ್ದೇಶಕರು ಏನು ಹೇಳ್ತಾರೋ ಅದನ್ನ ಮಾಡುತ್ತೇನೆ ಎಂದರು.

ಟ್ರೈಲರ್ ಹಾಗೂ ಪೋಸ್ಟರ್​ನಿಂದಲೇ ಹವಾ ಎಬ್ಬಿಸಿರೋ 'ಖತ್ರಾ ಡೇಂಜರಸ್' ಇದೇ ಏಪ್ರಿಲ್ 8 ರಂದು ತೆರೆಕಾಣಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News