ಸುದೀಪ್‌ ಸಿನಿಮಾಗೆ ಲೆಜೆಂಡ್ ಮೋಹನ್ ಲಾಲ್‌ & ಚಿರಂಜೀವಿ ಸಾಥ್..!

ವಿಕ್ರಾಂತ್ ರೋಣ ಟೀಸರ್‌ ರಿಲೀಸ್‌ಗೆ (Vikrant Rona teaser) ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್ ಲಾಲ್  ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ ಸಾಥ್‌ ನೀಡಲಿದ್ದಾರೆ. 

Written by - Malathesha M | Last Updated : Mar 31, 2022, 04:35 PM IST
  • ಸಂಚಲನ ಸೃಷ್ಟಿಸುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ
  • ವಿಕ್ರಾಂತ್ ರೋಣ ಟೀಸರ್‌ ರಿಲೀಸ್‌ಗೆ ದಿಗ್ಗಜರ ಸಾಥ್
  • ಕಿಚ್ಚ ಅಭಿಮಾನಿಗಳಲ್ಲಿ ಹೆಚ್ಚಿದೆ ಕಾತರ
ಸುದೀಪ್‌ ಸಿನಿಮಾಗೆ ಲೆಜೆಂಡ್ ಮೋಹನ್ ಲಾಲ್‌ & ಚಿರಂಜೀವಿ ಸಾಥ್..! title=
Vikrant rona teaser release (File photo)

ಬೆಂಗಳೂರು : ‘ವಿಕ್ರಾಂತ್ ರೋಣ’ ದೊಡ್ಡ ಸಂಚಲನ ಸೃಷ್ಟಿಸುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ (Vikrant Rona Film). ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಿನಿಮಾ ಇಷ್ಟರಮಟ್ಟಿಗೆ ಸಂಚಲನ ಸೃಷ್ಟಿಮಾಡುತ್ತಿರುವುದು ಸುದೀಪ್‌ ಅಭಿಮಾನಿಗಳ ಸಂತಸ ದುಪ್ಪಟ್ಟಾಗಿಸಿದೆ (Sudeep Fans).  ಇದೀಗ ಭಾರತ ಚಿತ್ರರಂಗ ಕಂಡ ದೊಡ್ಡ ದೊಡ್ಡ ಸ್ಟಾರ್‌ ನಟರೇ ಸುದೀಪ್‌ ಮುಂದಿನ ಸಿನಿಮಾಗೆ ಸಾಥ್‌ ನೀಡುತ್ತಿದ್ದಾರೆ.

ಅಷ್ಟಕ್ಕೂ ‘ವಿಕ್ರಾಂತ್ ರೋಣ’ ಟೀಸರ್‌ ರಿಲೀಸ್‌ಗೆ (Vikrant Rona teaser) ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್ ಲಾಲ್ (Mohan lala) ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ (Chiranjeevi)ಸಾಥ್‌ ನೀಡಲಿದ್ದಾರೆ. ಮತ್ತೊಂದು ಕಡೆ ತಮಿಳು ಭಾಷೆಯ ವಿಕ್ರಾಂತ್‌ ರೋಣ ಟೀಸರ್‌ ರಿಲೀಸ್‌ಗೆ ನಟ ಸಿಂಬು (Simbu)ಅವರು ಸಾಥ್‌ ನೀಡಲಿದ್ದಾರೆ. ಈ ಸುದ್ದಿ ‘ವಿಕ್ರಾಂತ್ ರೋಣ’ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಇದನ್ನೂ ಓದಿ : KGF-2 Trailer: 'ಕೆಜಿಎಫ್‌-2' ಟ್ರೇಲರ್‌ ನೋಡಿ ವಾವ್..‌ ವಾವ್.‌. ಎಂದ ತಮಿಳು‌ ಸಿನಿಮಾ ಡೈರೆಕ್ಟರ್..!

 ಕನ್ನಡಿಗರ ಹೆಮ್ಮೆ..!
ಕನ್ನಡದಲ್ಲಿ ಸಾಲು ಸಾಲು ಪ್ಯಾನ್‌ ಇಂಡಿಯಾ ಸಿನಿಮಾಗಳು ತೆರೆಗೆ ಅಪ್ಪಳಿಸಿ, ಜಗತ್ತಿನಾದ್ಯಂತ ಹವಾ ಸೃಷ್ಟಿ ಮಾಡುತ್ತಿವೆ. ಕೆಜಿಎಫ್‌ (KGF)ಈ ಟ್ರೆಂಡ್‌ ಕ್ರಿಯೇಟ್‌ ಮಾಡಿರುವಾಗಲೇ ನಟ ಕಿಚ್ಚ ಸುದೀಪ್‌ ಅವರ ‘ವಿಕ್ರಾಂತ್ ರೋಣ’ ಕೂಡ ದೊಡ್ಡ ಮಟ್ಟದ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ಹೀಗಾಗಿ ಅಭಿಮಾನಿಗಳ ಕಾತರ ಕೂಡ ಹೆಚ್ಚಾಗಿದೆ.

‘ವಿಕ್ರಾಂತ್ ರೋಣ’ ಮೂಲಕ ಕನ್ನಡದ ಸಿನಿಮಾ ಒಂದು ಇದೇ ಮೊದಲ ಬಾರಿಗೆ ಇಂಗ್ಲಿಷ್‌ ಭಾಷೆಯಲ್ಲಿ ರಿಲೀಸ್‌ ಆಗುತ್ತಿದೆ (Vikrant Rona in English). ಇದು ಕನ್ನಡ ಚಿತ್ರರಂಗ ಹೆಮ್ಮೆ ಪಡುವ ವಿಚಾರವೂ ಹೌದು. ಏಪ್ರಿಲ್ 2ರ ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣ ಸಿನಿಮಾ ಟೀಸರ್ ರಿಲೀಸ್‌ ಆಗಲಿದೆ.

ಇದನ್ನೂ ಓದಿ : RGV ನಿರ್ದೇಶನದ 'ಖತ್ರಾ ಡೇಂಜರಸ್' ಚಿತ್ರ ಬಿಡುಗಡೆಗೆ ಸಿದ್ಧ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News