ಬಿಗ್ ಬಾಸ್ ಎಂದರೆ ಕಿತ್ತಾಟ. ಮನಸ್ತಾಪ, ತಮಾಷೆ, ಪ್ರೀತಿ, ಫ್ರೆಂಡ್ ಶಿಪ್ ಹೀಗೆ ಅನೇಕ ಭಾವಗಳು ಕಂಡುಬರುವ ವೇದಿಕೆ. ಈ ಮನೆಯಲ್ಲಿ ಪ್ರೀತಿ, ಸ್ನೇಹ ಎಷ್ಟರ ಮಟ್ಟಿಗೆ ಕಂಡುಬಂದಿದೆಯೋ ಅದರ ಮೂರು ಪಟ್ಟ ಜಗಳ, ಮನಸ್ತಾಪಗಳು ಕಂಡಿವೆ. ಪ್ರತೀ ಸೀಸನ್ ಗಳಲ್ಲೂ ಸ್ಪರ್ಧಿಗಳ ನಡುವೆ ಕಿತ್ತಾಟ ನಡೆಯೋದು ಸಾಮಾನ್ಯ, ಇದೀಗ ಈ ಬಾರಿ ನಡೆಯುತ್ತಿರುವ ಬಿಗ್ ಬಾಸ್ ಒಟಿಟಿಯಲ್ಲಿಯೂ ಸ್ಪರ್ಧಿಗಳ ನಡುವೆ ಜಗಳಗಳು ನಡೆದಿವೆ. ಆದರೆ ಇಂದು ನಡೆದಿರುವ ಗಲಾಟೆ ಕೊಂಚ ತಾರಕಕ್ಕೇರಿರುವುದು ಎಲ್ಲರನ್ನೂ ಗಾಬರಿಗೊಳ್ಳುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಕ್ಕಿಯೊಂದಿಗೆ ಈ ಒಂದು ಪದಾರ್ಥವನ್ನು ಬಳಸಿ


ಈ ಹಿಂದೆ ಅನೇಕ ಬಾರಿ ಊಟದ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಹಾರ ಶಾರ್ಟೆಜ್ ಆಗುತ್ತದೆ ಎಂಬ ಕಾರಣಕ್ಕೆ ಕಿತ್ತಾಟ ನಡೆದಿದೆ. ಆದರೆ ಈ ಬಾರಿ ಊಟ ಎಸೆದಿದಕ್ಕೆ ಈ ಮಹಾಯುದ್ಧ ನಡೆದಿರುವುದು.


ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಯವರು ತಮ್ಮ ತಟ್ಟೆಯಲ್ಲಿದ್ದ ರೊಟ್ಟಿಯನ್ನು ತಿನ್ನಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಎಸೆದಿದ್ದಾರೆ. ಅದನ್ನು ಕಂಡ ಅರ್ಜುನ್ ರಮೇಶ್ ಯಾರು ಕಸದ ಬುಟ್ಟಿಯಲ್ಲಿ ರೊಟ್ಟಿ ಎಸೆದಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೂಪೇಶ್ ಶೆಟ್ಟಿ ಸಮಾಧಾನದಿಂದಲೇ ‘ನಾನೇ ಎಸೆದಿದ್ದು, ಹೊಟ್ಟೆಗೆ ಸೇರುತ್ತಿಲ್ಲ ಎಂದು ಎಸೆದೆ ಕ್ಷಮಿಸಿ’ ಎಂದು ಹೇಳಿದ್ದಾರೆ. ಆದರೆ ಇದೇ ವಿಚಾರವನ್ನಿಟ್ಟುಕೊಂಡು ಮಾತು ಪ್ರಾರಂಭಿಸಿದ ಅರ್ಜುನ್ ‘ಹೊರಗಡೆ ಅದೆಷ್ಟೋ ಮಂದಿಗೆ ಊಟ ಸೇರುತ್ತಿಲ್ಲ. ನೀವು ಹೀಗೆ ಎಸೆಯೋದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿ ಮಾತು ಬೆಳೆಸಿದ್ದಾರೆ.


ಇದೇ ವಿಚಾರ ಮಾರಾಮಾರಿ ನಡೆದಿದ್ದು, ಇಬ್ಬರು ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗಿದ್ದಾರೆ. ಇನ್ನು ಇವರ ಗಲಾಟೆ ತಾರಕಕ್ಕೇರುತ್ತಿರುವುದನ್ನು ಕಂಡ ಇತರ ಸ್ಪರ್ಧಿಗಳು ಅವರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಆದರೂ ಇಬ್ಬರ ವಾಗ್ವಾದ ನಿಂತಿಲ್ಲ. 


ಮನೆಯೆಲ್ಲಾ ಬೆಳಗುವ ಈ ಬಲ್ಬ್ ಬ್ಲೂಟೂತ್‌ಗೆ ಕನೆಕ್ಟ್ ಮಾಡಿದರೆ ಹಾಡೂ ಕೇಳಿಸುತ್ತದೆ


ಸದ್ಯ ಈ ವಿಡಿಯೋವನ್ನು ವಾಹಿನಿಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಬಿಗ್ ಬಾಸ್ ಪ್ರಾರಂಭವಾಗಿ ವಾರಗಳು ಕಳೆದಿವೆ. ತೀವ್ರ ಪೈಪೋಟಿಯ ನಡುವೆ ಇಂತಹ ಜಗಳಗಳು ಈ ಮನೆಯಲ್ಲಿ ಕಾಮನ್ ಎಂಬಂತಾಗಿದೆ. ಇನ್ನು ಕಳೆದ ವಾರ ಮನೆಯಿಂದ ಕಿರಣ್ ಯೋಗೇಶ್ವರಿ ಎಲಿಮಿನೇಟ್ ಆಗಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.