ಬೆಂಗಳೂರು: ‘ಲವ್‌ ಯೂ ರಚ್ಚು’ ಸಿನಿಮಾ ಚಿತ್ರೀಕರಣದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಸಹಾಯಕ ಫೈಟರ್‌ ವಿವೇಕ್‌(Fighter Vivek Death) ಸಾವನ್ನಪ್ಪಿದ್ದಾರೆ.’


COMMERCIAL BREAK
SCROLL TO CONTINUE READING

ತಮಿಳುನಾಡು ಮೂಲದ 28 ವರ್ಷದ ಯುವ ಸಹಾಯಕ ಫೈಟರ್ ವಿವೇಕ್‌(Fighter Vivek)ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯ ಜೋಗನಪಾಳ್ಯದ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಯಾವುದೇ ಅನುಮತಿ ಪಡೆಯದೆ ಚಿತ್ರತಂಡ ಶೂಟಿಂಗ್ ನಡೆಸಿದೆ ಎನ್ನುವ ಆರೋಪ ಕೇಳಿಬಂದಿದೆ. ಶೂಟಿಂಗ್ ವೇಳೆ ರೋಪ್ ಎಳೆಯುವಾಗ ಈ ಘಟನೆ ಸಂಭವಿಸಿದೆ. ಮುಂಜಾಗೃತಾ ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Ashika Ranganath: ತಮಿಳಿನ ಚೊಚ್ಚಲ ಚಿತ್ರದಲ್ಲಿ ಕಬಡ್ಡಿ ಆಡಲಿರುವ ನಟಿ ಆಶಿಕಾ ರಂಗನಾಥ್..!


ರೈತ ಪುಟ್ಟರಾಜು ಎಂಬುವವರ ಜಮೀನಿನಲ್ಲಿ ‘ಲವ್ ಯೂ ರಚ್ಚು’(Love You Rachchu) ಚಿತ್ರೀಕರಣ ನಡೆಯುತ್ತಿತ್ತು. ಶೂಟಿಂಗ್ ನಡೆಸುತ್ತಿದ್ದ ವೇಳೆ 11 ಕೆವಿ ವಿದ್ಯುತ್ ತಂತಿಗೆ ರೋಪ್ ತಗುಲಿದ್ದರಿಂದ ವಿವೇಕ್ ತೀವ್ರವಾಗಿ ಗಾಯಗೊಂಡಿದ್ದರು. ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವಿವೇಕ್ ಸಾವನ್ನಪ್ಪಿದ್ದರು ಅಂತಾ ತಿಳಿದುಬಂದಿದೆ.


ಯುವ ಫೈಟರ್ ವಿವೇಕ್ ತಮಿಳುನಾಡು(TamilNadu)ಮೂಲದವರು. ಅವರು ‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಸಹಾಯಕ ಫೈಟರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಸದ್ಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿರುವ ವಿವೇಕ್ ಮೃತದೇಹವನ್ನು ಇರಿಸಲಾಗಿದೆ. ದುರಂತ ಸಂಭವಿಸಿದ ಕೂಡಲೇ ಇಡೀ ಚಿತ್ರತಂಡವೇ ಸ್ಥಳದಿಂದ ಎಸ್ಕೇಪ್ ಆಗಿದೆ ಅಂತಾ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ  ಫೈಟ್ ಮಾಸ್ಟರ್ ವಿನೋದ್ ನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.   


ಇದನ್ನೂ ಓದಿ: Video ನೋಡಿ: ಕಿಶೋರ್ ಕುಮಾರ್ ಕ್ಲಾಸಿಕ್ ಹಾಡುಗಳಿಂದ ವೈರಲ್ ಆದ ಚಾಯ್‌ವಾಲಾ..!


‘ಲವ್‌ ಯೂ ರಚ್ಚು’ ಸಿನಿಮಾದಲ್ಲಿ ನಟ ಅಜಯ್‌ ರಾವ್‌(Ajai Rao) ಮತ್ತು ರಚಿತ ರಾಮ್‌(Rachita Ram) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಗುರು ದೇಶಪಾಂಡೆ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ