ಬೆಂಗಳೂರು : ಬಾಲಿವುಡ್‌ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಚಲನಚಿತ್ರೋದ್ಯಮವನ್ನು ಬಾಧಿಸುತ್ತಿರುವ ಸಮಸ್ಯೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ, ಪ್ಯಾನ್-ಇಂಡಿಯನ್ ಹಿಟ್‌ಗಳನ್ನು ತಯಾರಿಸುವ ಪ್ರವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಲಟ್ಟಾ ಪ್ಲಸ್ ಆಯೋಜಿಸಿದ್ದ ದುಂಡುಮೇಜಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕಶ್ಯಪ್, ಮರಾಠಿ ನಿರ್ದೇಶಕ ನಾಗರಾಜ ಮಂಜುಳೆ ಅವರ ಸೈರಾಟ್ ಚಿತ್ರದ ಯಶಸ್ಸು ಬಹುಶಃ ಮರಾಠಿ ಸಿನಿಮಾವನ್ನು 'ನಾಶ' ಮಾಡಬಹುದೆಂದು ಹೇಳಿದ್ದನ್ನು ನೆನಪಿಸಿಕೊಂಡರು.


COMMERCIAL BREAK
SCROLL TO CONTINUE READING

ಅನುರಾಗ್ ಕಶ್ಯಪ್ ಗಲಾಟಾ ಪ್ಲಸ್‌ನ ರೌಂಡ್ ಟೇಬಲ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅನುರಾಗ್ ಕಶ್ಯಪ್, ನಿಪುನ್ ಧರ್ಮಾಧಿಕಾರಿ, ಶ್ರೀನಿಧಿ ಶೆಟ್ಟಿ, ಪೂಜಾ ಹೆಗ್ಡೆ, ಕರಣ್ ಜೋಹರ್, ಕಾರ್ತಿ, ದುಲ್ಕರ್ ಸಲ್ಮಾನ್ ಮತ್ತು ವರುಣ್ ಧವನ್ ಮುಂತಾದವರು ಉಪಸ್ಥಿತರಿದ್ದರು. ಬರದ್ವಾಜ್ ರಂಗನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಚಲನಚಿತ್ರಗಳು ಯಶಸ್ವಿಯಾಗಿದ್ದು ಮತ್ತು ಅದರ ಅಡ್ಡಪರಿಣಾಮಗಳ ಬಗ್ಗೆ ಮಾತನಾಡಿದರು.


ಇದನ್ನೂ ಓದಿ: ಅದ್ಭುತ ʼಅವತಾರ್‌- 2ʼ ಬಿಡುಗಡೆಗೆ ಸಿದ್ಧ : ಈ ಚಿತ್ರದ ಒಟ್ಟು ಅವಧಿ ಎಷ್ಟು ಗೊತ್ತೇ..!


ಈ ವೇಳೆ ನಾಗರಾಜ್ ಮಂಜುಳೆ ಜತೆ ಮಾತನಾಡುವಾಗ ನಾನು ಅವರಿಗೆ ಹೇಳಿದೆ ʼಸೈರಾಟ್ʼ ಮರಾಠಿ ಚಿತ್ರರಂಗವನ್ನು ಹಾಳು ಮಾಡಿತು ಗೊತ್ತಾ?' ಅಂತ. ನನ್ನ ಪ್ರಕಾರ ಸೈರಾಟ್‌ನ ಯಶಸ್ಸು ಎಂದರ್ಥ. ಸೈರಾಟ್‌ ಯಶಸ್ಸಿನ ನಂತರ ಸಣ್ಣ ಸಿನಿಮಾದಿಂದ ಸಾಕಷ್ಟು ಹಣ ಗಳಿಸಬಹುದು ಎಂದು ಜನ ತಿಳಿದುಕೊಂಡರು. ಇದ್ದಕ್ಕಿದ್ದಂತೆ ಉಮೇಶ್ ಕುಲಕರ್ಣಿ ಮತ್ತು ಇತರರು ತಮ್ಮದೇ ಆದ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿದರು. ಯಾಕೆಂದರೆ ಅವರೆಲ್ಲ ‘ಸೈರಾಟ್’ ಸಿನಿಮಾ ಅನುಕರಣೆಮಾಡಲು ಮುಂದಾದರು ಎಂದರು.


ಪ್ಯಾನ್ ಇಂಡಿಯಾ ಎಂದ ಪದ್ದತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಪ್ಯಾನ್ ಇಂಡಿಯಾ ಲೆವೆಲ್‌ ಸಿನಿಮಾಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಆದ್ರೆ, ಇವುಗಳಲ್ಲಿ ಶೇಕಡಾ 5 ಅಥವಾ 10 ರಷ್ಟು ಚಿತ್ರಗಳು ಮಾತ್ರ ಯಶಸ್ವಿಯಾಗುತ್ತಿವೆ. 'ಕಾಂತಾರ' ಅಥವಾ 'ಪುಷ್ಪ'ದಂತಹ ಚಿತ್ರಗಳು ನಿಮ್ಮ ಕಥೆಯನ್ನು ಹೇಳುವ ಧೈರ್ಯವನ್ನು ನೀಡುತ್ತವೆ. ಆದರೆ ಕೆಜಿಎಫ್ 2 ನಂತಹ ದೊಡ್ಡ ಯಶಸ್ಸನ್ನು ನೋಡಿ, ನೀವು ಆ ಮಟ್ಟದ ಯೋಜನೆಯನ್ನು ಹೊಂದಿಸಲು ಪ್ರಯತ್ನಿಸಿದರೆ, ಅದು ದುರಂತದ ಕಡೆಗೆ ಮೊದಲ ಹೆಜ್ಜೆಯಾಗುತ್ತದೆ. ಅದನ್ನೇ ಬಾಲಿವುಡ್ ಮಾಡಿ ತನ್ನನ್ನು ತಾನೇ ಹಾಳು ಮಾಡಿಕೊಂಡಿತು ಎಂದರು.


ಇದನ್ನೂ ಓದಿ: ಕೆಟ್ಟ ಮೇಲೆ ಬುದ್ದಿ ಬಂತಾ ಅಮೀರ್‌ ಖಾನ್‌ : ಹಣೆಯಲ್ಲಿ ತಿಲಕ, ಹಿಂದೂ ಸಂಪ್ರದಾಯ ಏನಿದು..!


ಹಾಲಿವುಡ್ ನಿರ್ಮಾಪಕ ಜೇಸನ್ ಬ್ಲಮ್ ಅವರ ಉದಾಹರಣೆ ನೀಡಿದ ಅನುರಾಗ್ ಕಶ್ಯಪ್ ಅವರು, ಜೇಸನ್ ಬ್ಲಮ್ ಸಣ್ಣ ಬಜೆಟ್ ಚಿತ್ರಗಳೊಂದಿಗೆ ಬಹುದೊಡ್ಡ ಯಶಸ್ವಿ ಗಳಿಸಿದರು. ಆದರೆ ಯಶಸ್ಸಿನ ನಂತರ, ಅವರು ತಮ್ಮ ಕೆಲಸದ ವಿಧಾನವನ್ನು ಬದಲಾಯಿಸಲಿಲ್ಲ. ಸಣ್ಣ ಬಜೆಟ್ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದರು ಅದರಿಂದ ಅವರು ಯಶಸ್ವಿಯಾಗುತ್ತಿದ್ದರು ಎಂದರು. ಈಗಲೂ ಅವರು ತುಂಬಾ ನಿಯಂತ್ರಿತ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಾರೆ ಎಂದು ತಿಳಿಸಿದರು.


ಇನ್ನು ಕಾಂತಾರ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾದ ವೈಖರಿಯನ್ನು ಬದಲಾಯಿಸದೆ ಮತ್ತು ಬಾಕ್ಸ್‌ ಆಫೀಸ್‌ನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರೆ ಅದು ಸರಿಯಲ್ಲ. ಅದು ಅವರಿಗೆ ಸಂಕಷ್ಟ ತಂದೊಡ್ಡಬಹುದು. ಸಿನಿಮಾ ಮಾಡುವ ಅವರ ವಿಧಾನ ಮೊದಲಿನಂತೆಯೇ ಇದ್ದರೆ ಉತ್ತಮ ಎಂದು ರಿಷಬ್‌ ಶೆಟ್ಟಿಗೆ ಸಲಹಾ ಎಚ್ಚರಿಕೆ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.