ಕೆಟ್ಟ ಮೇಲೆ ಬುದ್ದಿ ಬಂತಾ ಅಮೀರ್‌ ಖಾನ್‌ : ಹಣೆಯಲ್ಲಿ ತಿಲಕ, ಹಿಂದೂ ಸಂಪ್ರದಾಯ ಏನಿದು..!

ಬಾಲಿವುಡ್‌ ನಟ ಅಮೀರ್ ಖಾನ್ ಏನೇ ಮಾಡಿದ್ರೂ ಟ್ರೋಲ್‌ಗೆ ಗುರಿಯಾಗುವುದು ಮಾತ್ರ ತಪ್ಪುತ್ತಿಲ್ಲ. ಅವರು ಒಂದು ಹೆಜ್ಜೆ ಇಟ್ಟರೂ ಸಹ ನೆಟ್ಟಿಗರು ಅದರಲ್ಲಿ ತಪ್ಪುಗಳನ್ನೇ ಕಂಡು ಹಿಡಿಯುತ್ತಿದ್ದಾರೆ. ಇದೀಗ ಮಿಸ್ಟರ್ ಪರ್ಫೆಕ್ಟ್ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಇದನ್ನು ನೋಡಿದ ನೆಟಿಜನ್ಸ್‌ ಅಮಿರ್‌ ಭಾಯ್‌ ಏನಿದು..? ಅಂತ ಟ್ರೋಲ್‌ ಮಾಡುತ್ತಿದ್ದಾರೆ.

Written by - Krishna N K | Last Updated : Dec 10, 2022, 02:59 PM IST
  • ಬಾಲಿವುಡ್‌ ನಟ ಅಮೀರ್ ಖಾನ್ ಏನೇ ಮಾಡಿದ್ರೂ ಟ್ರೋಲ್‌ಗೆ ಗುರಿಯಾಗುವುದು ಮಾತ್ರ ತಪ್ಪುತ್ತಿಲ್ಲ
  • ಇದೀಗ ಮಿಸ್ಟರ್ ಪರ್ಫೆಕ್ಟ್ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ್ದು ಟ್ರೋಲ್‌ ಗುರಿಯಾಗಿದ್ದಾರೆ
  • ಕೆಟ್ಟ ಮೇಲೆ ಬುದ್ದಿ ಬಂತಾ ಮಿಸ್ಟರ್‌ ಪರ್ಫೆಕ್ಟ್‌ ಅಮೀರ್‌ ಅಂತ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ
ಕೆಟ್ಟ ಮೇಲೆ ಬುದ್ದಿ ಬಂತಾ ಅಮೀರ್‌ ಖಾನ್‌ : ಹಣೆಯಲ್ಲಿ ತಿಲಕ, ಹಿಂದೂ ಸಂಪ್ರದಾಯ ಏನಿದು..! title=

Aamir Khan puja troll : ಬಾಲಿವುಡ್‌ ನಟ ಅಮೀರ್ ಖಾನ್ ಏನೇ ಮಾಡಿದ್ರೂ ಟ್ರೋಲ್‌ಗೆ ಗುರಿಯಾಗುವುದು ಮಾತ್ರ ತಪ್ಪುತ್ತಿಲ್ಲ. ಅವರು ಒಂದು ಹೆಜ್ಜೆ ಇಟ್ಟರೂ ಸಹ ನೆಟ್ಟಿಗರು ಅದರಲ್ಲಿ ತಪ್ಪುಗಳನ್ನೇ ಕಂಡು ಹಿಡಿಯುತ್ತಿದ್ದಾರೆ. ಇದೀಗ ಮಿಸ್ಟರ್ ಪರ್ಫೆಕ್ಟ್ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಇದನ್ನು ನೋಡಿದ ನೆಟಿಜನ್ಸ್‌ ಅಮಿರ್‌ ಭಾಯ್‌ ಏನಿದು..? ಅಂತ ಟ್ರೋಲ್‌ ಮಾಡುತ್ತಿದ್ದಾರೆ.

ತಮ್ಮ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಅಮೀರ್ ಖಾನ್‌ ದೇವರ ಪೂಜೆ ನೆರವೇರಿಸಿದರು. ಅಲ್ಲದೆ, ಮಾಜಿ ಪತ್ನಿ ಕಿರಣ್ ಜೊತೆ ಒಟ್ಟಿಗೆ ನಿಂತು ಆರತಿಯನ್ನು ಸಹ ಬೆಳಗಿದರು. ಈ ಕುರಿತ ಫೋಟೋಗಳನ್ನು ಲಾಲ್ ಸಿಂಗ್ ಚಡ್ಡಾ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪೂಜೆಯಲ್ಲಿ ಭಾಗವಹಿಸಿದ ಇತರರು ಸಹ ಹಲವಾರು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ: ಟ್ಯಾಕ್ಸ್‌ ಕಟ್ಟೋಕೆ 5 ಕೋಟಿ ರೂ. ಸಾಲ : ಪವನ್‌ ಕಲ್ಯಾಣ್‌ಗೆ ಈ ಗತಿ ಏಕೆ ಬಂತು..!

ಅಮೀರ್ ಪೂಜೆಯ ಸಮಯದಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಕಲಶವನ್ನು ಸ್ಥಾಪಿಸುವಾಗ ನೆಹರು ಕ್ಯಾಪ್ ಮತ್ತು ಭುಜದ ಸುತ್ತಲೂ ಬಟ್ಟೆಯನ್ನು ಧರಿಸಿದ್ದರು. ಪೂಜೆಯ ಉದ್ದೇಶ ತಿಳಿದಿಲ್ಲವಾದರೂ ಏಕಾಎಕಿ ಹಿಂದೂ ಸಂಪ್ರದಾಯದಂತೆ ಕಚೇರಿ ಪೂಜೆ ನೆರವೇರಿಸಿರುವುದ ಹಿನ್ನೆಲೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಇನ್ನ ಇಷ್ಟು ದಿನ ಬ್ಯಾನ್‌ನಂತಹ ವಿಚಾರಗಳಿಗೆ ಗುರಿಯಾಗಿದ್ದರಿಂದ ಈಗ ಅಮೀರ್‌ ಅವರು ಪ್ರೇಕ್ಷಕರನ್ನು ಸೆಳೆಯಲು ಹೊಸ ವಿಧಾನ ಹಿಡಿದಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸಾಕಷ್ಟು ವಿವಾದಗಳನ್ನು ಮೈ ಮೇಲೆ ಹಾಕಿಕೊಂಡಿರುವ ಅಮೀರ್‌ ಹಿಂದುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಲಾಗಿತ್ತು. ಅಲ್ಲದೆ, ಅವರು ನಟಿಸಿದ್ದ ಜಾಹೀರಾತುಗಳು ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದವು. ಪಿಕೆ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಲಾಲ್‌ ಸಿಂಗ್‌ ಚಡ್ಡಾಗೆ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ, ಸಿನಿಮಾ ಸೋಲು ಕಂಡಿತ್ತು. ಇದೀಗ ಹಣೆಗೆ ತಿಲಕ ಇಟ್ಟು ಹಿಂದೂ ಸಂಪ್ರದಾಯ ಪಾಲನೆ ಮಾಡಿದ್ದು, ಕೆಟ್ಟ ಮೇಲೆ ಬುದ್ದಿ ಬಂತಾ ಮಿಸ್ಟರ್‌ ಪರ್ಫೆಕ್ಟ್‌ ಅಮೀರ್‌ ಅಂತ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಏನೇ ಆದ್ರೂ ಅಮೀರ್‌ ಅವರು ತಮ್ಮ ಪೂಜೆಯ ಕುರಿತು ಸ್ಪಷ್ಟತೆ ನೀಡಿದರೆ ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News