ಮುಂಬೈ: ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಯಶ್ ಅಭಿನಯದ ಕೆಜಿಎಫ್ 2 ಚಿತ್ರವು ಈಗ ಯಶಸ್ಸಿನ ನಾಗಾಲೋಟದ ಮೂಲಕ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೆಜಿಎಫ್ 2 ಚಿತ್ರದ ಟಿಕೆಟ್ ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ.


COMMERCIAL BREAK
SCROLL TO CONTINUE READING

ಗಲ್ಲಾಪೆಟ್ಟಿಗೆಯಲ್ಲಿ ಕೆಜಿಎಫ್ ಚಿತ್ರವು ಇದುವರೆಗೆ ಎಲ್ಲಾ ಭಾಷೆಯ ಆವೃತ್ತಿಗಳಲ್ಲಿ ಕೇವಲ ನಾಲ್ಕನೇ ದಿನಕ್ಕೆ ಬರೋಬ್ಬರಿ 552 ಕೋಟಿ.ರೂ ಗಳನ್ನು ಬಾಚಿಕೊಂಡಿದೆ. ಇದಲ್ಲದೆ, ಸಿನಿಮಾ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ವಾರಾಂತ್ಯದಲ್ಲಿ ವಿಶ್ವದಲ್ಲೇ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಚಿತ್ರದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಕೆಜಿಎಫ್ 2 ಆ ಪಟ್ಟಿಯಲ್ಲಿ ಫೆಂಟಾಸ್ಟಿಕ್ ಬೀಸ್ಟ್ಸ್ 3 ಹಿಂದೆ ಮತ್ತು ಸೋನಿಕ್ ಹೆಡ್ಜ್ಹಾಗ್ 2 ಗಿಂತ ಮುಂದಿದೆ.ಈಗ ಈ ಸಿನಿಮಾಗೆ ಇರುವ ಕ್ರೇಜ್ ನ್ನು ಗಮನಿಸಿರುವ ಮೆಮೆಚಾಟ್ ಆಪ್ ಈಗ ತನ್ನ ಉದ್ಯೋಗಿಗಳಿಗೆ ಹಾಗೂ ಇಂಟರ್ನ್ ಗಳಿಗೆ ಹಾಗೂ ಹೊಸ ಬಳಕೆದಾರಿಗೆ ಉಚಿತವಾಗಿ ಟಿಕೆಟ್ ನೀಡುವುದಾಗಿ ಘೋಷಿಸಿದೆ.


ಇದನ್ನೂ ಓದಿ: KGF 2: ಕನ್ನಡದಲ್ಲೇ ಕೆಜಿಎಫ್ ಚಾಪ್ಟರ್‌ 2 ವೀಕ್ಷಿಸಿದ ರಜನಿಕಾಂತ್


ಇನ್ನೊಂದು ವಿಶೇಷವೆಂದರೆ ಈ ಸಿನಿಮಾ ಎಪ್ರಿಲ್ 15 ರಿಂದ 17 ರ ವರೆಗೆ ಜಾಗತಿಕ ಟಾಪ್ 10 ಚಲನಚಿತ್ರಗಳ ಕಾಮ್‌ಸ್ಕೋರ್ ಪಟ್ಟಿಯು ಕೆಜಿಎಫ್ 2 ಅನ್ನು ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಕಾಮ್‌ಸ್ಕೋರ್ ಒಂದು ಅಮೇರಿಕನ್ ಮಾಧ್ಯಮ ಮಾಪನ ಮತ್ತು ವಿಶ್ಲೇಷಣಾ ಕಂಪನಿಯಾಗಿದ್ದು ಅದು ಮಾರುಕಟ್ಟೆ ಡೇಟಾ ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ.


ಕೆಜಿಎಫ್ 2 ಬಾಕ್ಸ್ ಆಫೀಸ್ ಧಮಾಕಾ...ಬಾಹುಬಲಿ ದಾಖಲೆ ಧೂಳಿಪಟ..!


ಚಿತ್ರದ ಹಿಂದಿ-ಡಬ್ಬಿಂಗ್ ಆವೃತ್ತಿ ಕೂಡ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದಿದೆ.ಚಿತ್ರದ ಹಿಂದಿ ಆವೃತ್ತಿಯಲ್ಲಿ ಸುಮಾರು 190 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ.ಆ ಮೂಲಕ ಈ ಚಿತ್ರವು ಹಿಂದಿ ಬೆಲ್ಟ್ ನಲ್ಲಿ ವೇಗವಾಗಿ 200 ಕೋಟಿ ಕ್ಲಬ್ ನ್ನು ಸೇರಲಿರುವ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.


ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವೂ ಕೆಜಿಎಫ್ 1 ರ ಮುಂದಿನ ಅನುಸರಣೆಯಾಗಿದ್ದು, ಗ್ಯಾಂಗ್ ಸ್ಟಾರ್ ಆಗಿರುವ ರಾಕಿ ಕೆಜಿಎಫ್ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದು ಸಾವನ್ನಪ್ಪುವುದನ್ನು ಕೆಜಿಎಫ್ 2 ಭಾಗವು ಹೇಳುತ್ತದೆ.ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್,ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಜಾನ್ ಕೊಕ್ಕೆನ್ ಮತ್ತು ಸರಣ್ ಕಾಣಿಸಿಕೊಂಡಿದ್ದಾರೆ.


ಕೇವಲ ಮೂರು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 419 ಕೋಟಿ ರೂ.ಗಳಿಸಿದ ಕೆಜಿಎಫ್ 2..!


ಈ ಚಿತ್ರದ ಯಶಸ್ಸಿನ ಬಗ್ಗೆ ಪ್ರಶಾಂತ್ ನೀಲ್ ಮಾತನಾಡುತ್ತಾ “ನಾವು ಚಿತ್ರವನ್ನು ಪ್ರಾರಂಭಿಸಿದಾಗ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಯೋಚಿಸಿರಲಿಲ್ಲ, ಆರಂಭದಲ್ಲಿ ಇದನ್ನು ಕನ್ನಡಕ್ಕೆ ಮಾತ್ರ ಸೀಮಿತಗೊಳಿಸಿದ್ದೆವು, ಆದರೆ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಇದನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯೋಚಿಸಿದರು. ಹಾಗಾಗಿ ಇದರ ಶ್ರೇಯ ಅವರಿಗೆ ಸಲ್ಲಿಸಬೇಕು ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.