KGF 2: ಕನ್ನಡದಲ್ಲೇ ಕೆಜಿಎಫ್ ಚಾಪ್ಟರ್‌ 2 ವೀಕ್ಷಿಸಿದ ರಜನಿಕಾಂತ್

ಸೂಪರ್‌ಸ್ಟಾರ್‌ ರಜನಿಕಾಂತ್ ಕನ್ನಡದಲ್ಲೇ ಕೆಜಿಎಫ್‌ ಚಾಪ್ಟರ್‌ 2 ಚಿತ್ರವನ್ನು ವೀಕ್ಷಿಸಿದ್ದು, ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್‌ ಚೆನ್ನೈನಲ್ಲಿ ಕೆಜಿಎಫ್ 2 ಸಿನಿಮಾವನ್ನು ಕನ್ನಡದಲ್ಲಿಯೇ ವೀಕ್ಷಿಸಿದ್ದಾರೆ. 

Written by - Chetana Devarmani | Last Updated : Apr 17, 2022, 12:12 PM IST
  • ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಕೆಜಿಎಫ್ 2
  • ಕನ್ನಡದಲ್ಲೇ ಕೆಜಿಎಫ್ ಚಾಪ್ಟರ್‌ 2 ವೀಕ್ಷಿಸಿದ ರಜನಿಕಾಂತ್
  • ಇಡೀ ವಿಶ್ವಾದ್ಯಂತ ಹವಾ ಕ್ರಿಯೇಟ್‌ ಮಾಡಿದ ಕೆಜಿಎಫ್‌ 2
KGF 2: ಕನ್ನಡದಲ್ಲೇ ಕೆಜಿಎಫ್ ಚಾಪ್ಟರ್‌ 2 ವೀಕ್ಷಿಸಿದ ರಜನಿಕಾಂತ್ title=
ರಜನಿಕಾಂತ್

ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಕೆಜಿಎಫ್ 2 ಇಂದು ಅದ್ಧೂರಿಯಾಗಿ ಎಂಟ್ರಿಕೊಟ್ಟಿದೆ. ಇದೊಂದು ಸಿನಿಮಾಗಾಗಿ ಕಾದು ಕಳೆದ 4 ವರ್ಷಗಳಿಂದ ಶಬರಿಯಂತೆ ಕಾದು ಕೂತಿದ್ದ ಅಭಿಮಾನಿಗಳಿಗೆ ಕೊನೆಗೂ ಕೆಜಿಎಫ್‌2 ನೋಡುವ ಭಾಗ್ಯ ದೊರೆತಿದೆ. ಕನ್ನಡದ ಕೆಜಿಎಫ್‌ ಚಾಪ್ಟರ್‌ 2 ಇಡೀ ವಿಶ್ವಾದ್ಯಂತ ತನ್ನ ಹವಾ ಕ್ರಿಯೇಟ್‌ ಮಾಡಿದೆ. ಭಾರತೀಯ ಚಿತ್ರರಂಗದ ಸ್ಟಾರ್‌ ನಟರ ಚಿತ್ತ ಸೆಳೆದಿದೆ. ಒಂದೆಡೆ ರಾಕಿಭಾಯ್‌ ಎಬ್ಬಿಸಿದ ತೂಫಾನ್‌ಗೆ ಎಲ್ಲ ದಾಖಲೆಗಳು ಉಡೀಸ್‌ ಆಗಿವೆ. ಮತ್ತೊಂದೆಡೆ ಸುಲ್ತಾನನ ಅಬ್ಬರ ಕಂಡು ಎಲ್ಲರೂ ಬಾಯಿ ಮೇಲೆ ಬೆರಳಿಡುವಂತಾಗಿದೆ. 

ಇದನ್ನೂ ಓದಿ: ಕೆಜಿಎಫ್‌-2 ಗೆ ತಲೈವಾ ಫಿದಾ...ದೇಶಾದ್ಯಂತ ನಟ ನಟಿಯರಿಂದ ಪ್ರಶಂಸೆಯ ಸುರಿಮಳೆ..!

ಚಂದನವನವನ್ನು ಮತ್ತೊಂದು ಲೆವಲ್‌ಗೆ ಕೆಜಿಎಫ್‌2 ತೆಗೆದುಕೊಂಡು ಹೋಗಿದೆ. ಬಾಲಿವುಡ್‌ ಬಾದ್‌ ಷಾಗಳು ಸಹ ಕನ್ನಡದ ಕೆಜಿಎಫ್‌ ಅನ್ನು ಹಾಡಿ ಹೊಗಳಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನಕ್ಕೆ ಸಿನಿಪ್ರಿಯರು ಫಿಧಾ ಆಗಿದ್ದಾರೆ. ವಿಜಯ್‌ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಕೆಜಿಎಫ್‌2 ಸಿನಿಮಾ ಜಗತ್ತಿನಾದ್ಯಂತ ಅಭಿಮಾನಿಗಳ ಮನ ತಣಿಸಿದೆ. 

ಸೂಪರ್‌ಸ್ಟಾರ್‌ ರಜನಿಕಾಂತ್ ಕನ್ನಡದಲ್ಲೇ ಕೆಜಿಎಫ್‌ ಚಾಪ್ಟರ್‌ 2 ಚಿತ್ರವನ್ನು ವೀಕ್ಷಿಸಿದ್ದು, ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್‌ ಚೆನ್ನೈನಲ್ಲಿ ಕೆಜಿಎಫ್ 2 ಸಿನಿಮಾವನ್ನು ಕನ್ನಡದಲ್ಲಿಯೇ ವೀಕ್ಷಿಸಿದ್ದಾರೆ. 

ಕೆಜಿಎಫ್‌ 2 ಸಿನಿಮಾ ಏಪ್ರಿಲ್‌ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಶ್ ನಾಯಕ ನಟನಾಗಿ ಅಭಿನಯಿಸಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಸೇರಿದಂತೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ:ಕೆಜಿಎಫ್ 2 ಸುನಾಮಿಗೆ ಬೆಚ್ಚಿದ ಬಾಲಿವುಡ್...!

ಕೆಜಿಎಫ್ ಚಾಪ್ಟರ್ 1ರ ಬಳಿಕ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ಸಹಜವಾಗಿಯೇ ನಿರೀಕ್ಷೆ ಡಬಲ್‌ ಆಗಿತ್ತು. ಗರುಡನ ಕೊಲೆ.. ನರಾಚಿ ಲೋಕ.. ರಾಕಿಭಾಯ್‌ ಲುಕ್‌ನಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ. ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಇದೀಗ ಸೂಪರ್‌ಸ್ಟಾರ್‌ ರಜನಿಕಾಂತ್ ಕನ್ನಡದಲ್ಲಿ ಈ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಮತ್ತಷ್ಟು ವಿಶೇಷವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News