ಕೆಜಿಎಫ್ 2 ಬಾಕ್ಸ್ ಆಫೀಸ್ ಧಮಾಕಾ...ಬಾಹುಬಲಿ ದಾಖಲೆ ಧೂಳಿಪಟ..!

ಕೆಜಿಎಫ್ 2 ಎಂಬ ಬಾಕ್ಸ್ ಆಫೀಸ್ ಸುನಾಮಿಗೆ ಭಾರತೀಯ ಸಿನಿಮಾದ ಎಲ್ಲಾ ದಾಖಲೆಗಳು ದಿನದಿಂದ ದಿನಕ್ಕೆ ಧೂಳಿಪಟವಾಗುತ್ತಿವೆ, ಹೌದು ಈಗ ಕೆಜಿಎಫ್ ಅಂದರೆ ಹಾಗೆ, ಇದು ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿರುವ ಹವಾ ಮಾತ್ರ ಅಂತಿಂತದ್ದಲ್ಲ, ಇದರ ಅಬ್ಬರಕ್ಕೆ ಈಗ ಹಿಂದಿ ಸಿನಿಮಾಗಳೇ ತನ್ನ ರಿಲೀಸ್ ದಿನಾಂಕವನ್ನು ಮುಂದೂಡಿ ಬಿಟ್ಟಿವೆ ಅಷ್ಟರ ಮಟ್ಟಿಗೆ ಇದು ಬಾಕ್ಸ್ ಆಫೀಸ್ ನಲ್ಲಿ ತನ್ನ ಮೇನಿಯಾವನ್ನು ಸೃಷ್ಟಿಸಿದೆ.

Written by - Zee Kannada News Desk | Last Updated : Apr 17, 2022, 11:48 PM IST
  • ಈಗಿನ ಟ್ರೆಂಡ್ ನೋಡಿದರೆ ಕೇವಲ ಒಂದೇ ವಾರದಲ್ಲಿ 250 ಕೋಟಿ ರೂ.ಗಳ ಗಡಿಯನ್ನು ಸುಲಭವಾಗಿ ತಲುಪಲಿದೆ ಎನ್ನಲಾಗಿದೆ.
  • ಅಷ್ಟೇ ಅಲ್ಲದೆ ಹಿಂದಿ ಆವೃತ್ತಿಯಲ್ಲಿ ಅದು ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆಯನ್ನು ಹೊಂದಿರುವ ದಂಗಲ್ ಹಾಗೂ ಬಾಹುಬಲಿ 2 ಚಿತ್ರದ ದಾಖಲೆಯನ್ನು ಅಳಿಸಿ ಹಾಕಿದರೂ ಅದರಲ್ಲಿ ಅಚ್ಚರಿ ಏನಿಲ್ಲ ಎಂದು ಹೇಳಲಾಗುತ್ತಿದೆ.
ಕೆಜಿಎಫ್ 2 ಬಾಕ್ಸ್ ಆಫೀಸ್ ಧಮಾಕಾ...ಬಾಹುಬಲಿ ದಾಖಲೆ ಧೂಳಿಪಟ..! title=
Photo Courtesy: Twitter

ಮುಂಬೈ: ಕೆಜಿಎಫ್ 2 ಎಂಬ ಬಾಕ್ಸ್ ಆಫೀಸ್ ಸುನಾಮಿಗೆ ಭಾರತೀಯ ಸಿನಿಮಾದ ಎಲ್ಲಾ ದಾಖಲೆಗಳು ದಿನದಿಂದ ದಿನಕ್ಕೆ ಧೂಳಿಪಟವಾಗುತ್ತಿವೆ, ಹೌದು ಈಗ ಕೆಜಿಎಫ್ ಅಂದರೆ ಹಾಗೆ, ಇದು ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿರುವ ಹವಾ ಮಾತ್ರ ಅಂತಿಂತದ್ದಲ್ಲ, ಇದರ ಅಬ್ಬರಕ್ಕೆ ಈಗ ಹಿಂದಿ ಸಿನಿಮಾಗಳೇ ತನ್ನ ರಿಲೀಸ್ ದಿನಾಂಕವನ್ನು ಮುಂದೂಡಿ ಬಿಟ್ಟಿವೆ ಅಷ್ಟರ ಮಟ್ಟಿಗೆ ಇದು ಬಾಕ್ಸ್ ಆಫೀಸ್ ನಲ್ಲಿ ತನ್ನ ಮೇನಿಯಾವನ್ನು ಸೃಷ್ಟಿಸಿದೆ.

ಇದನ್ನೂ ಓದಿ: ಕೇವಲ ಮೂರು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 419 ಕೋಟಿ ರೂ.ಗಳಿಸಿದ ಕೆಜಿಎಫ್ 2..!

ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಭಾನುವಾರದಂತ್ಯಕ್ಕೆ ಕೆಜಿಎಫ್ 2 ಸಿನಿಮಾ ಬಾಹುಬಲಿ 2, ಆರ್,ಆರ್,ಆರ್,ಹಾಗೂ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ದಾಖಲೆಯನ್ನು ಸಹ ಧೂಳಿಪಟ ಮಾಡಿದೆ.ಹೌದು, ಹಿಂದಿ ಆವೃತ್ತಿಯಲ್ಲಿ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 194 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಭಾನುವಾರದಂದು ಈ ಸಿನಿಮಾ ಸುಮಾರು 51 ಕೋಟಿ.ರೂ ವನ್ನು ಕೇವಲ ಹಿಂದಿ ಬೆಲ್ಟ್ ನಲ್ಲಿ ಗಳಿಸಿದೆ. ಆ ಮೂಲಕ ಕೇವಲ ನಾಲ್ಕು ದಿನಗಳಲ್ಲಿ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೆ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. ಇದಕ್ಕೂ ಮೊದಲು ಬಾಹುಬಲಿ 2 ಸಿನಿಮಾ ಬರೋಬ್ಬರಿ 160 ಕೋಟಿ ರೂ.ಗಳನ್ನು ಗಳಿಸಿತ್ತು. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರದ ದಾಖಲೆಯನ್ನು ಸಹ ಕೆಜಿಎಫ್ 2 ಅಳಿಸಿ ಹಾಕಿದೆ.

ಈಗಿನ ಟ್ರೆಂಡ್ ನೋಡಿದರೆ ಕೇವಲ ಒಂದೇ ವಾರದಲ್ಲಿ 250 ಕೋಟಿ ರೂ.ಗಳ ಗಡಿಯನ್ನು ಸುಲಭವಾಗಿ ತಲುಪಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಹಿಂದಿ ಆವೃತ್ತಿಯಲ್ಲಿ ಅದು ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆಯನ್ನು ಹೊಂದಿರುವ ದಂಗಲ್ ಹಾಗೂ ಬಾಹುಬಲಿ 2 ಚಿತ್ರದ ದಾಖಲೆಯನ್ನು ಅಳಿಸಿ ಹಾಕಿದರೂ ಅದರಲ್ಲಿ ಅಚ್ಚರಿ ಏನಿಲ್ಲ ಎಂದು ಹೇಳಲಾಗುತ್ತಿದೆ.ಕೆಜಿಎಫ್ ಚಿತ್ರದ ಈಗಿನ ಮೇನಿಯಾ ನೋಡಿದರೆ ಇದರ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲಿಗೆ ನಿಲ್ಲಲಿದೆ ಎನ್ನುವ ಲೆಕ್ಕಾಚಾರ ಯಾರಿಗೂ ಸಿಗುತ್ತಿಲ್ಲ, ಅಷ್ಟರ ಮಟ್ಟಿಗೆ ಇದರ ಕ್ರೇಜ್ ಹೆಚ್ಚಾಗುತ್ತಿದೆ.ತಮಿಳುನಾಡಿನಲ್ಲಿಯೂ ಕೂಡ ಪ್ರತಿದಿನದ ಕಲೆಕ್ಷನ್ ಏರುತ್ತಲೇ ಸಾಗುತ್ತಿದೆ.

ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಮತ್ತು ರವೀನಾ ಟಂಡನ್ ನಟಿಸಿದರೆ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಜಾನ್ ಕೊಕ್ಕೆನ್ ಮತ್ತು ಸರಣ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News