Pooja hegde: ಟಾಲಿವುಡ್ ಸ್ಟಾರ್ ಹೀರೋಯಿನ್ ಪೂಜಾ ಹೆಗಡೆ ಸದ್ಯ ಸರಣಿ ಫ್ಲಾಪ್ ಸಿನಿಮಾಗಳಿಂದ ಸಂಕಷ್ಟದಲ್ಲಿದ್ದಾರೆ. ಸೌತ್ ಸ್ಟಾರ್‌ಡಮ್ ಪಡೆದ ನಂತರವೂ, ಪೂಜಾ ಅವರ ಚಿತ್ರಗಳು ಒಂದರ ನಂತರ ಒಂದರಂತೆ ಸೋತಿದ್ದರಿಂದ ಮತ್ತು ಆಕೆಯ ಪ್ಯಾನ್ ಇಂಡಿಯಾ ಚಿತ್ರಗಳೂ ಸಹ ನೆಲಕಚ್ಚಿದ್ದರಿಂದ ಪೂಜಾ ಪರಿಸ್ಥಿತಿ ಹದಗೆಟ್ಟಂತಿದೆ.. 


COMMERCIAL BREAK
SCROLL TO CONTINUE READING

ಸಿನಿಮಾ ಫ್ಲಾಪ್‌ಗಳು ಹೆಚ್ಚಾದಂತೆ.. ಅವಕಾಶಗಳು ಕಡಿಮೆಯಾಗುತ್ತಿವೆ.. ಐರನ್ ಲೆಗ್ ಹೆಸರಿನೊಂದಿಗೆ.. ಸದ್ಯ ಪೂಜಾ ಹೆಗಡೆ ಸಖತ್ ಹಿಟ್ ಸಿನಿಮಾಗಾಗಿ ಹುಡುಕುತ್ತಿದ್ದಾರೆ. ಮಹೇಶ್ ಬಾಬು ಜೊತೆ ಮಾಡಲು ಗುಂಟೂರು ಚಿತ್ರದಲ್ಲಿ ನಟಿಸಲು ಹೊರಟಿದ್ದ ಪೂಜಾ ಕಾರಣಾಂತರಗಳಿಂದ ಹಿಂದೆ ಸರಿಯಬೇಕಾಯಿತು.. 


ಇದನ್ನೂ ಓದಿ-ಸಲಾರ್‌ 2ನೇ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್: ಕ್ರೇಜ್ ದುಪ್ಪಟ್ಟು ಮಾಡಲು ರೆಡಿಯಾಗುತ್ತಿದೆ ಹೊಸ ಝಲಕ್!


ಇದೀಗ ನಟಿ ಗೊಂದಲದಲ್ಲಿದ್ದಾಳೆ.... ಸದ್ಯ ಆಕೆಯ ಕೈಯಲ್ಲಿ ಯಾವುದೇ ದೊಡ್ಡ ಚಿತ್ರಗಳಿಲ್ಲ. ಬಾಲಿವುಡ್‌ನಲ್ಲಿ ಒಂದೋ ಎರಡೋ ಸಿನಿಮಾಗಳಿವೆ. ಒಂದು ರೀತಿಯಲ್ಲಿ ಹೇಳುವುದಾದರೇ ಅವರು 2020 ರಿಂದ ಯಾವುದೇ ಹಿಟ್‌ಗಳನ್ನು ನೀಡಿಲ್ಲ... ಇನ್ನು ಇತ್ತೀಚೆಗಷ್ಟೇ ಪೂಜಾ ಹೆಗ್ಡೆಗೆ ಸಂಬಂಧಿಸಿದ ಸುದ್ದಿಯೊಂದು ಬೆಳಕಿಗೆ ಬಂದು ಸಂಚಲನ ಮೂಡಿಸಿದೆ. 


ಹೌದು ಪೂಜಾ ಹೆಗ್ಡೆ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೂಜಾ ಇತ್ತೀಚೆಗಷ್ಟೇ ದುಬೈಗೆ ಹೋಗಿದ್ದ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಜಗಳವಾಡಿಕೊಂಡಿದ್ದರು ಮತ್ತು ಈ ಕಾರಣಕ್ಕಾಗಿ ಪೂಜಾಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ವರದಿಯಾಗಿದೆ. 


ಇದನ್ನೂ ಓದಿ-ಟ್ರಾಲಿ ಬ್ಯಾಗ್‌ ಹಿಡಿದು ʻಪಸಂದಾಗವ್ನೆʼ ಸಾಂಗ್‌ಗೆ ಸಖತ್‌ ಸ್ಟೆಪ್ಪಾಕಿದ ಕನಸಿನ ರಾಣಿ ಮಾಲಾಶ್ರೀ! ವೈರಲ್‌ ವಿಡಿಯೋ..


ಹೀಗಾಗಿ ಚಿತ್ರರಂಗದಲ್ಲಿ ಈ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಮಾತನಾಡಿಕೊಳ್ಳತೊಡಗಿದ್ದರು.. ಇದೆಲ್ಲ ತಿಳಿದ ಪೂಜಾ ಹೆಗ್ಡೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಈ ಸುದ್ದಿಗೆ ಇದೀಗ ಕ್ಯ್ಲಾರಿಟಿ ಸಿಕ್ಕಿದೆ.. ಪೂಜಾ ತಂಡ ಈ ವಿಚಾರವಾಗಿ ಸತ್ಯಾ ಸತ್ಯತೆಯನ್ನು ಬಹಿರಂಗಪಡಿಸಿದೆ.. 


"ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಬರುತ್ತಿರುವುದು ಸುಳ್ಳು.. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಸ್ಪಷ್ಟಪಡಿಸಲಾಗಿದ್ದು.. ಈ ಸುಳ್ಳು ಸುದ್ದಿಯನ್ನು ಯಾರು ಹಬ್ಬಿಸಿದರೂ ಎನ್ನುವುದು ತಿಳಿದಿಲ್ಲ.. ಆದರೆ ಇದೆಲ್ಲ ಶುದ್ಧ ಸುಳ್ಳು" ಎಂದು ಪೂಜಾ ತಂಡ ತಿಳಿಸಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.