ಸಲಾರ್‌ 2ನೇ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್: ಕ್ರೇಜ್ ದುಪ್ಪಟ್ಟು ಮಾಡಲು ರೆಡಿಯಾಗುತ್ತಿದೆ ಹೊಸ ಝಲಕ್!

Salaar: ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಅಭಿನಯದ ಸಲಾರ್‌ ಚಿತ್ರದ ಎರಡನೇ ಟ್ರೇಲರ್‌ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರತಂಡ ಸಿನಿಮಾದ ಸೆಕೆಂಡ್‌ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.   

Written by - Zee Kannada News Desk | Last Updated : Dec 10, 2023, 02:53 PM IST
  • 'ಸಲಾರ್' ಟ್ರೇಲರ್ ರಿಲೀಸ್ ಆಗುತ್ತಿದ್ದಂತೆ ಅಬ್ಬರಿಸಬೇಕು ಅಂತ ತುದಿಗಾಲಲ್ಲಿ ನಿಂತಿದ್ದು, ಘೋಷಣೆ ಮಾಡಿದಂತೆ ಡಿಸೆಂಬರ್ 1ರಂದು 'ಸಲಾರ್' ಟ್ರೇಲರ್ ರಿಲೀಸ್ ಆಯ್ತು.‌
  • ಡಾರ್ಲಿಂಗ್ ಫ್ಯಾನ್ಸ್ ಬೇಸರಗೊಂಡಿದ್ದು ಗೊತ್ತಾಗುತ್ತಿದ್ದಂತೆ 'ಸಲಾರ್' ತಂಡ ಇನ್ನೊಂದು ಟ್ರೇಲರ್ ರಿಲೀಸ್ ಮಾಡುತ್ತೆ ಅನ್ನೋ ಸುದ್ದಿ ಹರಿದಾಡುತ್ತಿದೆ.
  • ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತಿರುವ ಸಲಾರ್‌ ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದರೆ, ಮತ್ತೆ ಟ್ರ್ಯಾಕ್‌ಗೆ ಬಂದಂತಾಗುತ್ತೆ.
ಸಲಾರ್‌ 2ನೇ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್: ಕ್ರೇಜ್ ದುಪ್ಪಟ್ಟು ಮಾಡಲು ರೆಡಿಯಾಗುತ್ತಿದೆ ಹೊಸ ಝಲಕ್! title=

Salaar Second Trailer: ಪ್ರಭಾಸ್ ನಟನೆಯ 'ಸಲಾರ್' ರಿಲೀಸ್ ಆಗುವುದನ್ನು ಎದುರು ನೋಡುತ್ತಿದು, 'ಕೆಜಿಎಫ್ 2' ಅಂತಹ ಮೆಗಾ ಚಿತ್ರ ಕೊಟ್ಟಿರೋ ಪ್ರಶಾಂತ್ ನೀಲ್ ಮೇಲೆ ಎಲ್ಲಿಲ್ಲದ ನಂಬಿಕೆ ಇತ್ತು. ಹೀಗಾಗಿ 'ಸಲಾರ್' ಟ್ರೇಲರ್ ರಿಲೀಸ್ ಆಗುತ್ತಿದ್ದಂತೆ ಅಬ್ಬರಿಸಬೇಕು ಅಂತ ತುದಿಗಾಲಲ್ಲಿ ನಿಂತಿದ್ದು, ಘೋಷಣೆ ಮಾಡಿದಂತೆ ಡಿಸೆಂಬರ್ 1ರಂದು 'ಸಲಾರ್' ಟ್ರೇಲರ್ ರಿಲೀಸ್ ಆಯ್ತು. ಆದರೆ, ಕೆಲ ಅಭಿಮಾನಿಗಳು ಈ ಟ್ರೇಲರ್‌ ಇಷ್ಟ ಆಗಿದೆ, ಸೋಶಿಯಲ್ ಮೀಡಿಯಾದಲ್ಲಿ ಅಸಮಧಾನ ಹೊರಹಾಕಿದ್ದರು. 

ಡಾರ್ಲಿಂಗ್ ಫ್ಯಾನ್ಸ್ ಬೇಸರಗೊಂಡಿದ್ದು ಗೊತ್ತಾಗುತ್ತಿದ್ದಂತೆ 'ಸಲಾರ್' ತಂಡ ಇನ್ನೊಂದು ಟ್ರೇಲರ್ ರಿಲೀಸ್ ಮಾಡುತ್ತೆ ಅನ್ನೋ ಸುದ್ದಿ ಹರಿದಾಡಿದ್ದರಿಂದ, ಇದೀಗ ಟಾಲಿವುಡ್‌ ಮಂದಿ ಎರಡನೇ ಟ್ರೇಲರ್ ಯಾವಾಗ ರಿಲೀಸ್ ಆಗುತ್ತೆ? ಅನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಟಾಲಿವುಡ್‌ನಲ್ಲಿ ಹರಿದಾಡ್ತಿರೋ ಸುದ್ದಿ ಏನು? ಎರಡನೇ ಟ್ರೈಲರ್ ಎಷ್ಟು ಉದ್ದವಿದೆ? ಸಿನಿಮಾ ಎಷ್ಟು ನಿಮಿಷ ಇದೆ? ಇಂತಹದ್ದೇ ಒಂದಿಷ್ಟು ಸುದ್ದಿಗಳು ಓಡಾಡುತ್ತಿವೆ. 

ಇದನ್ನೂ ಓದಿ: ʼಅನಿಮಲ್‌ʼ ಚಿತ್ರದಲ್ಲಿ ತೃಪ್ತಿ ಡಿಮ್ರಿ ಪಾತ್ರವನ್ನು ಮಿಸ್ ಮಾಡಿಕೊಂಡ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

ಟ್ರೇಲರ್ ರಿಲೀಸ್ ಆದ್ಮೇಲೆ ಸಿನಿಮಾ ಬಗ್ಗೆ ಕ್ರೇಜ್ ಕಮ್ಮಿ ಆಗಬಹುದು ಗೊಂದಲಕ್ಕೆ ತೆರೆಬಿದ್ದಿದ್ದು, ಭಾರತದಲ್ಲಿರೋ ಕ್ರೇಜ್ ದುಪ್ಪಟ್ಟು ಮಾಡುವುದಕ್ಕೆ 'ಸಲಾರ್' 2ನೇ ಟ್ರೇಲರ್ ಬಿಡುಗಡೆ ಆಗುತ್ತಿದೆ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಡಿಸೆಂಬರ್ 16ರಂದು ಸಲಾರ್‌ ಟ್ರೇಲರ್‌ ರಿಲೀಸ್ ಅನ್ನೋ ಮಾತು ಕೇಳಿ ಬರುತ್ತಿದ್ದು, ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸದ್ಯಕ್ಕೆ 'ಸಲಾರ್' ಎರಡನೇ ಟ್ರೇಲರ್ ಸುಮಾರು 2 ನಿಮಿಷ 45 ಸೆಕೆಂಡ್ ಇರುತ್ತೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ. 

ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತಿರುವ ಸಲಾರ್‌ ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದರೆ, ಮತ್ತೆ ಟ್ರ್ಯಾಕ್‌ಗೆ ಬಂದಂತಾಗುತ್ತೆ. ಎರಡನೇ ಟ್ರೇಲರ್ ಮೂಲಕ ಪ್ರಭಾಸ್ ಪ್ರಚಾರಕ್ಕೆ ಧುಮುಕಲಿದ್ದಾರೆ ಎನ್ನಲಾಗಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸಿರುವ 'ಸಲಾರ್' ಹೈ ವೋಲ್ಟೇಜ್ ಆಕ್ಷನ್ ಸಿನಿಮಾ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಏನಿಲ್ಲ ಅಂದರೂ, ಅದ್ಭುತ ಆಕ್ಷನ್ ಹಾಗೂ ವಿಜ್ಯೂವಲ್ಸ್ ಅಂತೂ ಇರುತ್ತೆ ಅನ್ನೋದು ಗೊತ್ತಾಗಿದ್ದು, ಅಲ್ಲದೆ ಈಗಾಗಲೇ ಸೆನ್ಸಾರ್ ಪ್ರಕ್ರಿಯೆಯನ್ನೂ ಮುಗಿಸಿ ರಿಲೀಸ್‌ಗೆ ರೆಡಿಯಾಗಿದೆ. ವಿದೇಶದಲ್ಲಿ 'ಸಲಾರ್' ನೋಡುವುದಕ್ಕೆ ಅನಿವಾಸಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದಾರೆ. ಅಡ್ವಾನ್ಸ್ ಬುಕಿಂಗ್‌ಗೆ ಸಿಕ್ಕಿರುವ ಪ್ರತಿಕ್ರಿಯೆನೇ ಸಾಕ್ಷಿ. ಯುಎಸ್‌ಎ, ಯುಕೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ 'ಸಲಾರ್'ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News