ಗಾಳಿಪಟ 2 ಸಿನಿಮಾ ರಿಲೀಸ್‌ಗೂ ಮೊದಲು ಕೊಡುತ್ತಿರೋ ಕಿಕ್ ಮಾತ್ರ ಆಹಾ... ಭಟ್ರ ಗಾಳಿಪಟ ಸಿನಿಮಾನ ಮರೆಯಲು ಸಾಧ್ಯ ಇಲ್ಲ. ಆ ಹಾಡುಗಳು,ಕಥೆ, ನಗು, ಅಳು, ಪಂಚಿಂಗ್  ಡೈಲಾಗ್, ಫನ್,ತುಂಟಾಟ ಎಲ್ಲಾ ಮಿಕ್ಸ್ ಆಗಿ ಬೇರೆಯದ್ದೆ ಲೋಕಕ್ಕೆ ಕರ್ಕೊಂಡ್ ಹೋದ ಸಿನಿಮಾ ಗಾಳಿಪಟ. ಇದೀಗ ಅದಕ್ಕೂ ಮೀರಿದ ಸಿನಿಮಾ ಗಾಳಿಪಟ 2 ಬೆಳ್ಳಿ ತೆರೆಯ ಮೇಲೆ ರಂಗೇರಿಸಲು ಧಾಮ್ ಧೂಮ್ ಅಂತ ರೆಡಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಗಸ್ಟ್ ಮೊದಲ ದಿನವೇ ಸಿಹಿ ಸುದ್ದಿ : ಎಲ್‌ಪಿಜಿ ಬೆಲೆಯಲ್ಲಿ ಭಾರೀ ಇಳಿಕೆ


ಗಾಳಿಪಟ 2 ಸಿನಿಮಾ ರಿಲೀಸ್‌ಗೂ ಮೊದಲು ಮಾಡಿರುವ ಸೌಂಡ್‌ಗೆ ಚಿತ್ರಮಂದಿರಗಳಿಗೆ ಜನ ಕ್ಯೂನಲ್ಲಿ ಬಂದು ಸಿನಿಮಾ ನೋಡೋದು ಪಕ್ಕಾ ಆಗಿದೆ ಈಗ ವಿಷ್ಯ ಏನಪ್ಪಾ ಅಂದ್ರೆ ಗಾಳಿಪಟ 2 ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು ಭರ್ಜರಿ ಸಕ್ಸಸ್ ಕಾಣುತ್ತಿದೆ.


ಅಭಿಮಾನಿಗಳು ಏನ್ ಸಖತ್ ಆಗಿದೆ ಗೊತ್ತಾ ಟ್ರೇಲರ್ ಅಂತಿದ್ದಾರೆ. ಟ್ರೇಲರ್‌ನಲ್ಲಿ ಗಣೇಶ್, ದಿಗಂತ್ ಮತ್ತು ಪವನ್‌ ಪ್ರಾರಂಭದಲ್ಲಿ ನಗೋ ದೃಶ್ಯ ಎಲ್ಲರನ್ನೂ ಬಿದ್ದು ಬಿದ್ದು ನಗಿಸಿದೆ. ಇದು ಮೂವರು ಗೆಳೆಯರ ಬದುಕಿನ ಅದ್ಬುತ ಕಥೆ ಅನ್ನೋದು ಟ್ರೇಲರ್ ಮೂಲಕ ಅರಿವಾಗುತ್ತಿದೆ. ಒಂದೊಂದು ಸೀನ್‌ಗಳು ಮನಸ್ಸಿಗೆ ತುಂಬಾ ಹತ್ತಿರ ಅನಿಸುತ್ತಿದೆ. 


ಗಾಳಿಪಟ 2 ಟ್ರೇಲರ್ ನೋಡಿದಾಗ ಅನಿಸಿದ್ದು ಸಿನಿಮಾದಲ್ಲಿ ರಸಭರಿತ ಕಾಮಿಡಿ ಇದೆ ಅಂತ. ನಕ್ಕು ನಕ್ಕು ಸುಸ್ತಾಗಬಹುದು ಜೊತೆಗೆ ಕಣ್ಣೀರು ಹಾಕಬಹುದು. ಯಾಕಂದ್ರೆ ಟ್ರೇಲರ್ ಇದೀಗ ಈ ಹಿಂಟ್‌ಗಳನ್ನ ಬಿಟ್ಟುಕೊಟ್ಟಿದೆ. ದಿಗಂತ್ ಲುಕ್ ಯಾಕೋ ವಿಚಿತ್ರವಾಗಿ ಕಾಣಿಸುತ್ತಿದೆ. ಹಿಮಾಲಯದಲ್ಲಿ ದಿಗಂತ್ ಬೆತ್ತಲೆಯಾಗಿದ್ದಾರೆ ಅಂತೆ. ಇನ್ನು ಭೂಷಣ್ ಪಾತ್ರದಲ್ಲಿ ನಟ ಪವನ್ ಸಖತ್ ಆಗಿ ಮಿಂಚಿದ್ದಾರೆ.


ಮೂವರು ಗೆಳೆಯರ ಬದುಕಿನಲ್ಲಿ ಮೂವರು ರಾಣಿಯರ ಎಂಟ್ರಿಯಾಗುತ್ತೆ. ಆಮೇಲೆ ಏನಾಗುತ್ತೆ ಅನ್ನೋದನ್ನ ತೆರೆ ಮೇಲೆ ನೋಡಿ ಆನಂದಿಸೋಣ. ಟ್ರೇಲರ್ ನೋಡಿ ಅನಿಸಿದ್ದು ತುಂಬಾ ಟ್ವಿಸ್ಟ್ ಆಂಡ್ ಟರ್ನ್‌ಗಳು ಈ ಸಿನಿಮಾದಲ್ಲಿದೆ ಅನ್ನೋದು. ಗಣೇಶ್ ಕಣ್ಣೀರು ಯಾಕೋ ನಮ್ಮನ್ನ ಮತ್ತೇ ಅಳಿಸಿದೆ.  


ಡಿಎಲ್ ಇಲ್ಲದೆಯೂ ನಿಶ್ಚಿಂತೆಯಾಗಿ ಓಡಿಸಬಹುದು ಈ ಮೂರು ಎಲೆಕ್ಟ್ರಿಕ್ ಸ್ಕೂಟರ್ ..!


ಈ ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.