ಡಿಎಲ್ ಇಲ್ಲದೆಯೂ ನಿಶ್ಚಿಂತೆಯಾಗಿ ಓಡಿಸಬಹುದು ಈ ಮೂರು ಎಲೆಕ್ಟ್ರಿಕ್ ಸ್ಕೂಟರ್ ..!

ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಲಾಯಿಸಲು  ಡಿಎಲ್ ಅಗತ್ಯವಿಲ್ಲ. ಡ್ರೈವಿಂಗ್ ಲೈಸೆನ್ಸ್  ಇಲ್ಲದೆಯೂ ಚಲಾಯಿಸಬಹುದಾದ 3 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Aug 1, 2022, 09:57 AM IST
  • ಡಿ ಎಲ್ ಇಲ್ಲದೆ ಚಲಾಯಿಸಬಹುದಾದ ಸ್ಕೂಟರ್
  • ಈ ಮೂರು ಸ್ಕೂಟರ್ ಚಲಾಯಿಸಲು ಡಿಎಲ್ ಬೇಡ
  • ಪೊಲೀಸರು ತಡೆಯುವುದೂ ಇಲ್ಲ
ಡಿಎಲ್ ಇಲ್ಲದೆಯೂ ನಿಶ್ಚಿಂತೆಯಾಗಿ ಓಡಿಸಬಹುದು  ಈ ಮೂರು ಎಲೆಕ್ಟ್ರಿಕ್ ಸ್ಕೂಟರ್ ..!  title=
Electric Scooters (file photo)

ನವದೆಹಲಿ : ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಮೋಟಾರು ವಾಹನವನ್ನು ಓಡಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಲಾಯಿಸಲು  ಡಿಎಲ್ ಅಗತ್ಯವಿಲ್ಲ. ಡ್ರೈವಿಂಗ್ ಲೈಸೆನ್ಸ್  ಇಲ್ಲದೆಯೂ ಚಲಾಯಿಸಬಹುದಾದ 3 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. 
 
ಹೀರೋ ಎಲೆಕ್ಟ್ರಿಕ್ NYX E5 :
Hero Electric NYX E5 25 km/h ಗರಿಷ್ಠ ವೇಗವನ್ನು ಹೊಂದಿದೆ. ಇದು 250W ಮೋಟಾರ್ ಮತ್ತು 51.2V/30Ah ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ಬೇಕಾಗುತ್ತದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 85 ಕಿ.ಮೀ. ವರೆಅಗೆ ಕ್ರಮಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ನೋಂದಣಿ ಮಾಡುವ ಅಗತ್ಯವಿಲ್ಲ. ಅಲ್ಲದೆ, ಇದನ್ನು ಓಡಿಸಲು  ಡಿಎಲ್ ಕೂಡಾ ಅಗತ್ಯವಿಲ್ಲ. ಇದರ ಬೆಲೆ 67,440 ರೂ.

ಇದನ್ನೂ ಓದಿ : Vegetable Price: ಮತ್ತೆ ತರಕಾರಿ ಬೆಲೆಯಲ್ಲಿ ಏರಿಳಿತ: ಮೂಲಂಗಿ, ತೆಂಗಿನಕಾಯಿ ಬೆಲೆ ಗಗನಮುಖಿ!

ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ LX :
Hero Electric Flash LX ಕೂಡ 25 km/h ಗರಿಷ್ಠ ವೇಗವನ್ನು ಹೊಂದಿದೆ. ಇದು 250W ಮೋಟಾರ್ ಮತ್ತು 51.2V/30Ah ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ಇದು ಕೂಡಾ ಪೂರ್ಣ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ. ಇದರ ಸಿಂಗಲ್ ಚಾರ್ಜ್ ರೇಂಜ್ ಕೂಡ 85 ಕಿ.ಮೀ.  ಈ ಸ್ಕೂಟರ್ ಓಡಿಸಲು ಸಹ ನೋಂದಣಿ ಮತ್ತು ಡಿಎಲ್ ಅಗತ್ಯವಿಲ್ಲ. ಇದರ ಮೌಲ್ಯ 59,640 ರೂ.

ಓಕಿನಾವಾ ಲೈಟ್ :
ಓಕಿನಾವಾ ಲೈಟ್‌ನ ಗರಿಷ್ಠ ವೇಗವು ಗಂಟೆಗೆ 25 ಕಿ.ಮೀ. ಇದು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 60 ಕಿ.ಮೀ. ವರೆಗೆ ಕ್ರಮಿಸುತ್ತದೆ. ಸುಮಾರು 60 ಸಾವಿರ ಬೆಲೆಯ ಎಕ್ಲೆಕ್ಟಿಕ್ ಸ್ಕೂಟರ್ ಇದಾಗಿದೆ. ಇದು ಎಲ್ಲಾ-LED ಹೆಡ್‌ಲ್ಯಾಂಪ್‌ಗಳು, LED ಇಂಡಿಕೇಟರ್  ಮತ್ತು LED ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಇದು ಸಂಪೂರ್ಣ ಚಾರ್ಜ್ ಆಗಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು 1.25 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ.

ಇದನ್ನೂ ಓದಿ : ಆಗಸ್ಟ್ ಮೊದಲ ದಿನವೇ ಸಿಹಿ ಸುದ್ದಿ : ಎಲ್‌ಪಿಜಿ ಬೆಲೆಯಲ್ಲಿ ಭಾರೀ ಇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News