ನಾವು ತೆರೆ ಮೇಲೆ ಕಾಣೋ ಹೀರೋಗಳನ್ನೇ ನಿಜವಾದ ಸ್ಟಾರ್ ಗಳು ಅಂತ ಭಾವಿಸ್ತೀವಿ. ಅವರನ್ನ ದೇವರೆಂದು ಆರಾಧಿಸುತ್ತೇವೆ. ಕೆಲ ನಟರು ದೇವರಾಗಿದ್ದಾರೆ ಬಿಡಿ. ಆದ್ರೆ ತೆರೆಯ ಹಿಂದೆಯೂ ಅದ್ಬುತ ದೊರೆಗಳು ಇದ್ದಾರೆ. ಯೆಸ್ ಇವತ್ತು ನಾವು ನಿಮ್ಗೆ ಹೇಳ್ತಿರೋ ಈ ಸ್ಟೋರಿ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಆಗಸ್ಟ್ 12ರಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ "ಗಾಳಿಪಟ 2" ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದ ಪ್ರೊಡ್ಯೂಸರ್ ರಿಯಲ್ ಕಥೆ ಸಿನಿಮಾಗಿಂತ ಇಂಟ್ರೆಸ್ಟಿಂಗ್ ಆಗಿದೆ. ಹೌದು ನಿರ್ಮಾಪಕ ರಮೇಶ್ ರೆಡ್ಡಿ ಹಿಂದೆ ರೋಚಕ ಕಥೆಯಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿರಾಕಿಂಗ್‌ ಸ್ಟಾರ್ ಯಶ್‌ ಜೊತೆ ಸಿನಿಮಾ ಮಾಡಬೇಕು ಅಂದ್ರು ಹಾಲ್ಗೆನೆಯ ಸುಂದರಿ..!


ರಮೇಶ್ ರೆಡ್ಡಿ ಹಳ್ಳಿಯೊಂದರಿಂದ ರಾಜಧಾನಿ ಬೆಂಗಳೂರಿಗೆ 1982ರಲ್ಲಿ ಬಂದುಬಿಡ್ತಾರೆ. ಆಗ ಅವರು ಹತ್ತನೇ ತರಗತಿ ಓದೋ ಹುಡುಗ. ಪ್ರಪಂಚ ಏನು ಅನ್ನೋದು ತಿಳಿದೇ ಇಲ್ಲ. ಹೇಗೋ ಜೀವನ ಸಾಗಿಸಬೇಕು ಅನ್ನೋ ಹಠಕ್ಕೆ ಬಿದ್ದ ರಮೇಶ್ ಅವ್ರು ಗಾರೆ ಕೆಲಸಕ್ಕೆ ಸೇರಿ ದುಡಿದು ಹೊಟ್ಟೆಗೆ ಹಿಟ್ಟು ತುಂಬಿಸಿಕೊಳ್ಳುತ್ತಿದ್ದರು. ಹೀಗೆ ಕನ್ಸ್ಟ್ರಕ್ಷನ್ ಲೆವೆಲ್ನಲ್ಲಿ ಗಾರೆ ಕೆಲಸ ನಂತ್ರ ಮೇಸ್ತ್ರಿ ಹೀಗೆ ಒಂದೊಂದೇ ಮೆಟ್ಟಿಲುಗಳನ್ನ ಹತ್ತಿ MR ಎಂಬ ಬಹುದೊಡ್ಡ ಕಂಪನಿಯ ಸೃಷ್ಟಿಕರ್ತರಾಗುತ್ತಾರೆ. ಈಗ 500 ರಿಂದ 600 ಜನರಿಗೆ ಅನ್ನದಾತರಾಗಿದ್ದಾರೆ. ಇವರಿಂದಾಗಿ ಅದೆಷ್ಟೋ ಹೊಟ್ಟೆಗಳು ತುಂಬುತ್ತಿವೆ.


ನೇರ ನುಡಿ, ಇದ್ದಿದ್ದನ್ನ ನೇರವಾಗಿ ಹೇಳಿ ಬಿಡೋ ಇವ್ರ ವ್ಯಕ್ತಿತ್ವ ನಿಜಕ್ಕೂ ಸಣ್ಣ ಮಗುವಿನಂತೆ. ಬಣ್ಣದ ಜಗತ್ತಿಗೆ ಯಾಕೆ ಬಂದ್ರಿ ಸರ್ ಅನ್ನೋ ಜೀ ಕನ್ನಡ ನ್ಯೂಸ್ ವಾಹಿನಿಯ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಕೇಳಿದ್ರೆ, ನಿಜಕ್ಕೂ ನೋವಾಗುತ್ತೆ. ಸಾಧಕನ ಹಿಂದೆ ಅದೆಷ್ಟೋ ನೋವುಗಳಿರುತ್ತೆ. ಸಾಧನೆ ಮಾಡೋದು ಅಷ್ಟೂ ಸುಲಭವಲ್ಲ. ಕಲ್ಲು ಮುಳ್ಳಿನ ಹಾದಿಯನ್ನ ದಾಟಲೇಬೇಕು. ಆಗಲೇ ಸಾಧನೆಗೂ ಅರ್ಥ ಸಿಗೋದು ಎನ್ನುತ್ತಾರೆ.


ಇದನ್ನೂ ಓದಿTumkur Accident Case: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ


ಬೆಂಗಳೂರಿಗೆ ಬಂದ ಹೊಸದರಲ್ಲಿ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೋದ್ರೆ ಸಿಕ್ಕಾಪಟ್ಟೆ ಜನ. ಅಣ್ಣಾವ್ರ ಸಿನಿಮಾ ನೋಡಲು ನೂಕುನುಗ್ಗಲು, ಟಿಕೆಟ್ ಬೇರೇ ಸಿಗ್ತಾ ಇರಲಿಲ್ಲ. ಆಗಲೇ ಥಿಯೇಟರ್ ಮುಂದೆ ನಿಂತು ಶಪಥ ಮಾಡಿದ್ರಂತೆ ನಾವೇ ಸಿನಿಮಾ ನಿರ್ಮಾಣ ಮಾಡಿದ್ರೆ ನೇರವಾಗಿ ಥೀಯೇಟರ್ ಗೆ ಹೋಗಬಹುದು ಅಂತ. ಆಗ ಅಂದುಕೊಂದಿದ್ದನ್ನ ಇವತ್ತು ನನಸು ಮಾಡಿಕೊಂಡಿದ್ದಾರೆ ಸಿನಿಮಾ ನಿರ್ಮಾಪಕರು. ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾವನ್ನ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಶಿವಣ್ಣ ನಟನೆಯ ಆನಂದ್ ಸಿನಿಮಾ ಶೂಟಿಂಗ್ ಆಗೋವಾಗ ರಮೇಶ್ ರೆಡ್ಡಿಯವರಿಗೆ ನೋಡೋ ಅವಕಾಶ ಆಗ ಸಿಗಲಿಲ್ಲವಂತೆ. ಆದ್ರೆ ಇದೀಗ ಅರ್ಜುನ್ ಜನ್ಯ ನಿರ್ದೇಶನದಲ್ಲಿ ಶಿವಣ್ಣ ನಟನೆಯಲ್ಲಿ ಮೂಡಿಬರುತ್ತಿರೋ ಸಿನಿಮಾಗೆ ರಮೇಶ್ ರೆಡ್ಡಿಯೇ ನಿರ್ಮಾಪಕ. ಆಹಾ..ಯಾವುದೋ ಸಿನಿಮಾ ನೋಡಿದಂತೆ ಅನಿಸಿಬಿಡುತ್ತೆ. ಶ್ರೀಮುರುಳಿ, ಡಾ. ಶಿವರಾಜ್ ಕುಮಾರ್, ನಿಖಿಲ್ ಕುಮಾರಸ್ವಾಮಿ ಹೀಗೆ ದೊಡ್ಡ ದೊಡ್ಡ ನಟರಿಗೆ ಈಗ ಇವ್ರೇ ನಿರ್ಮಾಪಕರು.


ರಮೇಶ್ ರೆಡ್ಡಿ ಅವ್ರ ಈ ಎಲ್ಲಾ ಸಾಧನೆಯ ಹಿಂದಿನ ಶಕ್ತಿ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ. ಇನ್ಫೋಸಿಸ್ ಸಂಸ್ಥೆಯ ಕಂಪೌಂಡ್ ಕಟ್ಟಲು ಯಾರದ್ದೋ ಮೂಲಕ ಗುತ್ತಿಗೆ ತೆಗೆದುಕೊಂಡ ಇವ್ರು ನಂತರ ಸುಧಾ ಮೂರ್ತಿಯವರ ನಂಬಿಕೆಗೆ ಅರ್ಹರಾಗಿ ಅದೆಷ್ಟೋ ಬಿಲ್ಡಿಂಗ್ ಕಟ್ಟಲು ಮೇಡಂ ಸಹಕಾರಿಯಾದ್ರು. ಇವತ್ತಿಗೂ ಸುಧಾಮೂರ್ತಿಯವರನ್ನ ದೇವತೆಯೆಂದೆ ಭಾವಿಸಿದ್ದಾರೆ.


ಇದನ್ನೂ ಓದಿ: ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಅಶ್ವತ್ಥ ನಾರಾಯಣ


ಗುರಿ ಅನ್ನೋದು ಇದ್ರೆ ಯಾರೇ ಆಗಲಿ ಏನು ಬೇಕಾದ್ರೂ ಸಾಧನೆ ಮಾಡಬಹುದು ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ. ಆದ್ರೆ ನನಗೆ ಗಾರೆ ಕೆಲಸ ಮಾಡುವಲ್ಲಿಂದ ಹಿಡಿದು ಇಲ್ಲಿಯವರೆಗೂ ಶತ್ರುಗಳು ಮಾತ್ರ ಕಮ್ಮಿಯಾಗಿಲ್ಲ ಅನ್ನೋದನ್ನ ಕೂಡ ಹೇಳಲು ಮರೆಯಲಿಲ್ಲ ರಮೇಶ್ ರೆಡ್ಡಿ. ಇವತ್ತು ಕೋಟಿ ಕೋಟಿ ಕುಬೇರ ಆದ್ರೂ ನಡೆದು ಬಂದ ಹಾದಿ ಮಾತ್ರ ಮರೆತಿಲ್ಲ. ಅದೇ ಸರಳತೆ ಅವರಲ್ಲಿ ಎದ್ದು ಕಾಣುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.