ರಾಕಿಂಗ್‌ ಸ್ಟಾರ್ ಯಶ್‌ ಜೊತೆ ಸಿನಿಮಾ ಮಾಡಬೇಕು ಅಂದ್ರು ಹಾಲ್ಗೆನೆಯ ಸುಂದರಿ..!

ಕನ್ನಡ ಸಿನಿ ರಂಗದಲ್ಲಿ 'ಕೆಜಿಎಫ್‌-2' ಮಾಡಿದ ಸದ್ದು ಅಷ್ಟಿಷ್ಟಲ್ಲ, ಅದರಲ್ಲೂ ಬಾಲಿವುಡ್‌ ಮಂದಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಹೀಗಾಗಿ ಬಾಲಿವುಡ್ ಸ್ಟಾರ್‌ಗಳು ರಾಕಿ ಭಾಯ್‌‌, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಜೊತೆಗೆ ಸಿನಿಮಾ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಈ ಸಾಲಿಗೆ ಹಾಲ್ಗೆನೆಯ ಸುಂದರಿ ಊರ್ವಶಿ ರೌಟೇಲಾ ಕೂಡ ಸೇರ್ಪಡೆ ಆಗಿದ್ದಾರೆ.

Written by - Malathesha M | Edited by - Manjunath N | Last Updated : Jul 24, 2022, 09:26 PM IST
  • 'ಜೀ ಕನ್ನಡ ನ್ಯೂಸ್‌'ಗೆ ನೀಡಿದ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ ನಟಿ ಊರ್ವಶಿ ರೌಟೇಲಾ.
ರಾಕಿಂಗ್‌ ಸ್ಟಾರ್ ಯಶ್‌ ಜೊತೆ ಸಿನಿಮಾ ಮಾಡಬೇಕು ಅಂದ್ರು ಹಾಲ್ಗೆನೆಯ ಸುಂದರಿ..! title=

ಬೆಂಗಳೂರು: ಕನ್ನಡ ಸಿನಿ ರಂಗದಲ್ಲಿ 'ಕೆಜಿಎಫ್‌-2' ಮಾಡಿದ ಸದ್ದು ಅಷ್ಟಿಷ್ಟಲ್ಲ, ಅದರಲ್ಲೂ ಬಾಲಿವುಡ್‌ ಮಂದಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಹೀಗಾಗಿ ಬಾಲಿವುಡ್ ಸ್ಟಾರ್‌ಗಳು ರಾಕಿ ಭಾಯ್‌‌, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಜೊತೆಗೆ ಸಿನಿಮಾ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಈ ಸಾಲಿಗೆ ಹಾಲ್ಗೆನೆಯ ಸುಂದರಿ ಊರ್ವಶಿ ರೌಟೇಲಾ ಕೂಡ ಸೇರ್ಪಡೆ ಆಗಿದ್ದಾರೆ.

ಅಂದಹಾಗೆ 'ಲೆಜೆಂಡ್‌' ಸಿನಿಮಾ ಪ್ರಮೋಷನ್‌ಗಾಗಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ಊರ್ವಶಿ ರೌಟೇಲಾ, ಜೀ ಕನ್ನಡ ನ್ಯೂಸ್‌ಗೆ ನೀಡಿದ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನದಲ್ಲಿ ಈ ಬಯಕೆ ವ್ಯಕ್ತಪಡಿಸಿದ್ದಾರೆ. 'ಜೀ ಕನ್ನಡ ನ್ಯೂಸ್‌' ಸಿನಿಮಾ ವಿಭಾಗದ ಪ್ರತಿನಿಧಿ ಮಾಲತೇಶ್‌ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ನಟಿ ಊರ್ವಶಿ ರೌಟೇಲಾ, ನನಗೆ ಯಶ್‌ ಅವರ ಜೊತೆ ಸಿನಿಮಾ ಮಾಡೋ ಕನಸು ಇದೆ ಎಂದಿದ್ದಾರೆ.

ಇದನ್ನೂ ಓದಿ: Ind vs WI : ಇಂದು ಟೀಂ ಇಂಡಿಯಾಗೆ ಎಂಟ್ರಿ ನೀಡಲಿದ್ದಾನೆ ಈ ಮಾರಕ ಬ್ಯಾಟ್ಸ್‌ಮನ್!

ಹಾಲ್ಗೆನೆಯ ಸುಂದರಿ

ಊರ್ವಶಿ ರೌಟೇಲಾ ಸಿನಿಮಾ ಇಂಡಸ್ಟ್ರಿಗೆ ಬಂದು ಇನ್ನೇನು ಒಂದು ದಶಕ ಪೂರೈಸಲಿದ್ದಾರೆ. ಈ ಮೊದಲು 'ಐರಾವತ' ಸಿನಿಮಾದಲ್ಲಿ ನಟ ದರ್ಶನ್‌ ಅವರ ಜೊತೆಗೆ ನಟಿಸಿದ್ದ ಊರ್ವಶಿ ರೌಟೇಲಾ, ಇದೀಗ ಪ್ಯಾನ್‌ ಇಂಡಿಯಾ ಸಿನಿಮಾ 'ಲೆಜೆಂಡ್‌' ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಕುರಿತು 'ಜೀ ಕನ್ನಡ ನ್ಯೂಸ್‌'ಗೆ ನೀಡಿದ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ ನಟಿ ಊರ್ವಶಿ ರೌಟೇಲಾ.

ಹಾಗೇ 'ಕೆಜಿಎಫ್‌-2' ಬಗ್ಗೆಯೂ ಮನಸ್ಸು ತುಂಬಿ ಮಾತನಾಡಿರುವ ನಟಿ ಊರ್ವಶಿ ರೌಟೇಲಾ, ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮ ಚಿತ್ರ ಎಂದಿದ್ದಾರೆ. ಹಾಗೇ 'ಕೆಜಿಎಫ್‌-2' ನಾಯಕ ಯಶ್‌ ಅವರ ನಟನೆ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದಾರೆ. ಅಲ್ಲದೆ ಕನ್ನಡ ಸಿನಿಮಾಗಳ ಕುರಿತು ತಮ್ಮ ಪ್ರೀತಿಯನ್ನು 'ಜೀ ಕನ್ನಡ ನ್ಯೂಸ್‌'ಗೆ ನೀಡಿದ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ನಟಿ ಊರ್ವಶಿ ರೌಟೇಲಾ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News